ಸಿಬ್ಬಂದಿ ಕೊರತೆಯಿಂದ ನಮ್ಮ ಸೇನೆ ಕುಸಿಯಬಹುದು: ಇಸ್ರೇಲ್ ರಕ್ಷಣಾ ಪಡೆಗಳ ಮುಖ್ಯಸ್ಥ ಹೀಗೆ ಹೇಳಿದ್ಯಾಕೆ?

ಭದ್ರತಾ ಕ್ಯಾಬಿನೆಟ್ ಸಭೆಯಲ್ಲಿ ಜಮೀರ್ ಅವರು ಈ ಹೇಳಿಕೆ ನೀಡಿದ್ದು, ಸೈನ್ಯದ ಸನ್ನದ್ಧತೆಯ ಬಗ್ಗೆಯೂ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಇಸ್ರೇಲ್‌ನ ಚಾನೆಲ್ 13 ನ್ಯೂಸ್ ಅನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
Israel's military could collapse due to manpower shortage
ಸಾಂದರ್ಭಿಕ ಚಿತ್ರ
Updated on

ಟೆಲ್ ಅವಿವ್: ಹೆಚ್ಚುತ್ತಿರುವ ಕಾರ್ಯಾಚರಣೆಯ ಒತ್ತಡ ಮತ್ತು ಪಶ್ಚಿಮ ಏಷ್ಯಾ ಸಂಘರ್ಷದ ನಡುವೆ ಇಸ್ರೇಲ್ ರಕ್ಷಣಾ ಪಡೆಗಳ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಇಯಾಲ್ ಜಮೀರ್ ಗುರುವಾರ(ಸ್ಥಳೀಯ ಸಮಯ) ಅವರು ಸೇನೆಯಲ್ಲಿ ಮಾನವಶಕ್ತಿಯ(ಸಿಬ್ಬಂದಿ) ಕೊರತೆ ಹೆಚ್ಚುತ್ತಿರುವ ಕಾರಣ ಇಸ್ರೇಲ್ ಮಿಲಿಟರಿ "ಸ್ವತಃ ಕುಸಿಯಬಹುದು" ಎಂದು ಎಚ್ಚರಿಸಿದ್ದಾರೆ.

ಭದ್ರತಾ ಕ್ಯಾಬಿನೆಟ್ ಸಭೆಯಲ್ಲಿ ಜಮೀರ್ ಅವರು ಈ ಹೇಳಿಕೆ ನೀಡಿದ್ದು, ಸೈನ್ಯದ ಸನ್ನದ್ಧತೆಯ ಬಗ್ಗೆಯೂ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಇಸ್ರೇಲ್‌ನ ಚಾನೆಲ್ 13 ನ್ಯೂಸ್ ಅನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

"ನಾನು ನಿಮ್ಮ ಮುಂದೆ 10 ರೆಡ್ ಫ್ಲಾಗ್ ಗಳನ್ನು ಪ್ರಸ್ತಾಪಿಸುತ್ತಿದ್ದೇನೆ" ಎಂದು ಜಮೀರ್ ಅವರು ಇಸ್ರೇಲ್ ರಕ್ಷಣಾ ಸಚಿವರಿಗೆ ತಿಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

Israel's military could collapse due to manpower shortage
ವಿದೇಶಾಂಗ ಸಚಿವ ಅರಘ್ಚಿ, ಸ್ಪೀಕರ್ ಹತ್ಯೆಗೆ ಅಮೆರಿಕ, ಇಸ್ರೇಲ್ ಸಂಚು: ವಿಶ್ವಸಂಸ್ಥೆಗೆ ಇರಾನ್ ಮಾಹಿತಿ

ಕಡ್ಡಾಯ ಮಿಲಿಟರಿ ಸೇವೆಯ ವಿಸ್ತರಣೆ ಸೇರಿದಂತೆ ಶಾಸಕಾಂಗ ಕ್ರಮಗಳ ತುರ್ತು ಅಗತ್ಯವನ್ನು ಒತ್ತಿ ಹೇಳಿದ ಜಮೀರ್, ಐಡಿಎಫ್‌ಗೆ ಈಗ ಕಡ್ಡಾಯ ಕಾನೂನು, ಕರ್ತವ್ಯ ಮೀಸಲು ಕಾನೂನು ಮತ್ತು ಕಡ್ಡಾಯ ಸೇವೆಯನ್ನು ವಿಸ್ತರಿಸಲು ಕಾನೂನು ಅಗತ್ಯವಿದೆ" ಎಂದು ಹೇಳಿರುವುದಾಗಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

ಇಂತಹ ಕ್ರಮಗಳನ್ನು ತೆಗೆದುಕೊಳ್ಳದೇ ಇದ್ದರೆ, ಮಿಲಿಟರಿ ಶೀಘ್ರದಲ್ಲೇ ನಿಯಮಿತ ಕಾರ್ಯಾಚರಣೆಗಳನ್ನು ನಡೆಸಲು ಮತ್ತು ಅದರ ಮೀಸಲು ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಹೆಣಗಾಡಬಹುದು ಎಂದು ಎಚ್ಚರಿಸಿದ್ದಾರೆ.

ಟೈಮ್ಸ್ ಆಫ್ ಇಸ್ರೇಲ್ ಪ್ರಕಾರ, ಜಮೀರ್ ಈ ವಿಷಯದ ಬಗ್ಗೆ ಎಚ್ಚರಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಜನವರಿಯಲ್ಲಿ, ಅವರು ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಇತರ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು, ಸಿಬ್ಬಂದಿ ಕೊರತೆಯು ಶೀಘ್ರದಲ್ಲೇ ಸೇನೆಯ ಕಾರ್ಯಾಚರಣೆಯ ಸನ್ನದ್ಧತೆಯ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com