

ಶಾಂತಿ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. ಆದರೆ, ಅದು ನನಗೆ ತೃಪ್ತಿಕರವಾಗಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದು, ಈ ಮೂಲಕ ಇರಾನ್ ಮುಂದಿಟ್ಟಿರುವ ಹೊಸ ಶಾಂತಿ ಪ್ರಸ್ತಾವನೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ.
ಇರಾನ್ ತನ್ನ ಹೊಸ ಶಾಂತಿ ಪ್ರಸ್ತಾವನೆಯನ್ನು ಪಾಕಿಸ್ತಾನದ ಮಧ್ಯಸ್ಥಿಕೆಯ ಮೂಲಕ ಅಮೆರಿಕಕ್ಕೆ ಕಳುಹಿಸಿದೆ. ಆದರೆ, ಪ್ರಸ್ತಾವನೆಯಲ್ಲಿ ಇರಾನ್ ಮುಂದಿಟ್ಟಿರುವ ಆಗ್ರಹಗಳು ಅಮೆರಿಕಾ ಕೆಂಡಾಮಂಡಲಗೊಳ್ಳುವಂತೆ ಮಾಡಿದೆ.
ಇರಾನ್ ಪ್ರಸ್ತಾವನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟ್ರಂಪ್ ಅವರು, ಇರಾನ್ ಒಪ್ಪಿಕೊಳ್ಳಲಾಗದ ಕೆಲವು ಬೇಡಿಕೆಗಳನ್ನು ಇಟ್ಟಿದೆ. "ನನಗೆ ಈ ಪ್ರಸ್ತಾವನೆಯ ಬಗ್ಗೆ ಸಮಾಧಾನವಿಲ್ಲ (not satisfied)" ಎಂದು ಹೇಳಿದ್ದಾರೆ.
ಇರಾನ್ ತನ್ನ ಪ್ರಸ್ತಾವನೆಯಲ್ಲಿ ಅಮೆರಿಕವು ಇರಾನ್ ಮೇಲಿನ ಎಲ್ಲಾ ಆರ್ಥಿಕ ದಿಗ್ಬಂಧನಗಳನ್ನು (Sanctions) ತಕ್ಷಣವೇ ತೆರವುಗೊಳಿಸಬೇಕು ಮತ್ತು ಇರಾನ್ ಬಂದರುಗಳ ಮೇಲಿನ ನೌಕಾಪಡೆಯ ದಿಗ್ಬಂಧನವನ್ನೂ ಹಿಂಪಡೆಯಬೇಕು ಎಂಬ ಷರತ್ತುಗಳನ್ನು ವಿಧಿಸಿದೆ. ಇದನ್ನು ಟ್ರಂಪ್ "ಅತಿಯಾದ ಬೇಡಿಕೆ". ಇರಾನ್ ಶಾಂತಿ ವಿಚಾರದಲ್ಲಿ ಗಂಭೀರವಾಗಿಲ್ಲ ಮತ್ತು ಕೇವಲ ಸಮಯ ವ್ಯರ್ಥ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಇದೀಗ ಎರಡು ದೇಶಗಳ ನಡುವೆ ಮೂರು ವಾರಗಳಿಂದ ಮುಂದುವರಿದಿರುವ ಯುದ್ಧ ವಿರಾಮ ಅಸ್ಥಿರ ಸ್ಥಿತಿಯಲ್ಲಿ ಮುಂದುವರಿದಿದೆ. ನೇರ ಯುದ್ಧ ಕ್ರಮಗಳು ಕಡಿಮೆಯಾಗಿದ್ದರೂ, ಎರಡೂ ರಾಷ್ಟ್ರಗಳು ಪರಸ್ಪರ ನಿಯಮ ಉಲ್ಲಂಘನೆ ಆರೋಪಗಳನ್ನು ಮಾಡುತ್ತಿವೆ.
ಟ್ರಂಪ್ ಅವರು ಇರಾನ್ ನಾಯಕತ್ವವನ್ನು “ಅಸಂಘಟಿತ ಮತ್ತು ವಿಭಜಿತ” ಎಂದು ಟೀಕಿಸಿ, ಒಬ್ಬರು ಒಪ್ಪಂದಕ್ಕೆ ಬಯಸಿದರೆ ಮತ್ತೊಬ್ಬರು ಬೇರೆ ಬೇಡಿಕೆ ಇಡುತ್ತಿರುವುದು ಮಾತುಕತೆಗಳನ್ನು ಕಷ್ಟಕರವಾಗಿಸುತ್ತಿದೆ ಎಂದು ಹೇಳಿದ್ದಾರೆ.
ಈ ಸಂಘರ್ಷದ ಕೇಂದ್ರನಬಿಂದು ಆಗಿರುವುದು ಹಾರ್ಮುಜ್ ಜಲಸಂಧಿ. ವಿಶ್ವದ ತೈಲ ಮತ್ತು ಅನಿಲ ವ್ಯಾಪಾರದ ಸುಮಾರು ಐದನೇ ಭಾಗ ಈ ಮಾರ್ಗದ ಮೂಲಕ ಸಾಗುತ್ತದೆ. ಅಮೆರಿಕಾ ನೌಕಾಪಡೆಯು ಇರಾನ್ ಟ್ಯಾಂಕರ್‌ಗಳಿಗೆ ನಿರ್ಬಂಧ ಹೇರಿರುವುದರಿಂದ ಇರಾನ್ ಆರ್ಥಿಕತೆಗೆ ಭಾರೀ ಹೊಡೆತ ಬಿದ್ದಿದೆ.
ಅದೇ ವೇಳೆ, ಇರಾನ್ ಈ ಜಲಸಂಧಿಯನ್ನು ಒತ್ತಡದ ಸಾಧನವಾಗಿ ಬಳಸುತ್ತಿರುವುದು ಜಾಗತಿಕ ಮಾರುಕಟ್ಟೆಗಳಿಗೆ ಆತಂಕ ತಂದಿದೆ. ತೈಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಭೀತಿ ಹೆಚ್ಚುತ್ತಿರುವುದರಿಂದ ವಿಶ್ವ ಆರ್ಥಿಕತೆಯ ಮೇಲೂ ಒತ್ತಡ ಹೆಚ್ಚಾಗಿದೆ.
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ವಿವಿಧ ರಾಷ್ಟ್ರಗಳೊಂದಿಗೆ ತೀವ್ರ ರಾಜತಾಂತ್ರಿಕ ಚಟುವಟಿಕೆ ನಡೆಸುತ್ತಿದ್ದಾರೆ. ಟರ್ಕಿ, ಈಜಿಪ್ಟ್, ಕತಾರ್, ಸೌದಿ ಅರೇಬಿಯಾ ಮತ್ತು ಇರಾಕ್ ಸೇರಿದಂತೆ ಹಲವು ರಾಷ್ಟ್ರಗಳು ಅವರು ಮಾತುಕತೆ ನಡೆಸಿ ಕೊನೆಗೊಳಿಸುವ ಪ್ರಯತ್ನಗಳನ್ನು ವಿವರಿಸಿದ್ದಾರೆ. ಜೊತೆಗೆ ಕಾಜ ಕಲ್ಲಾಸ್ ನೇತೃತ್ವದ ಯುರೋಪಿಯನ್ ಯೂನಿಯನ್ ಕೂಡ ಮಧ್ಯಸ್ಥಿಕೆ ಮಾಡಲು ಮುಂದಾಗಿದೆ.
ಈ ಮಾತುಕತೆಗಳಲ್ಲಿ ಪ್ರಮುಖ ಅಡ್ಡಿಯಾಗಿರುವುದು ಇರಾನ್‌ನ ಪರಮಾಣು ಶಕ್ತಿ ಹೊಂದುವ ಯೋಜನೆ. ಟ್ರಂಪ್ ಆಡಳಿತದ ಪ್ರಮುಖ ಗುರಿಯೇ ಇರಾನ್ ಅಣ್ವಸ್ತ್ರ ಅಭಿವೃದ್ಧಿ ಸಾಮರ್ಥ್ಯವನ್ನು ಸಂಪೂರ್ಣವಾಗಿ ನಿಲ್ಲಿಸುವುದಾಗಿದೆ. ಆದರೆ, ಇರಾನ್ ತನ್ನ ಹೊಸ ಪ್ರಸ್ತಾವನೆಯಲ್ಲಿ ಅಣು ವಿಷಯದ ಚರ್ಚೆಯನ್ನು ಮುಂದಿಟ್ಟಿರುವುದು ಅಮೆರಿಕೆಗೆ ಒಪ್ಪಿಗೆಯಾಗಿಲ್ಲ. ಇದರಿಂದ ಎರಡೂ ದೇಶಗಳ ನಡುವಿನ ಭಿನ್ನಾಭಿಪ್ರಾಯ ಇನ್ನಷ್ಟು ಗಾಢವಾಗಿದೆ.
ಫೆಬ್ರವರಿ 28ರಿಂದ ಆರಂಭವಾದ ಈ ಯುದ್ಧ ಈಗಾಗಲೇ ಭಾರೀ ಮಾನವೀಯ ನಷ್ಟ ಉಂಟುಮಾಡಿದೆ. ಇರಾನ್‌ನಲ್ಲಿ ಸಾವಿರಾರು ಮಂದಿ ಮೃತಪಟ್ಟಿದ್ದು, ಲೆಬನಾನ್‌ನಲ್ಲಿ ಹಿಬ್ಜುಲ್ಲಾ ಸಂಘಟನೆಯೊಂದಿಗೆ ನಡೆದ ಸಂಘರ್ಷದಿಂದ ದೊಡ್ಡ ಪ್ರಮಾಣದ ಸಾವು ನೋವು ಸಂಭವಿಸಿದೆ. ಜೊತೆಗೆ ಇಸ್ರೇಲ್ ಸೇರಿದಂತೆ ಇತರೆ ಪ್ರದೇಶಗಳಲ್ಲೂ ಹಾನಿ ಉಂಟಾಗಿದೆ. ಅಮೆರಿಕಾ ಸೈನಿಕರೂ ಸಹ ಸಾವನ್ನಪ್ಪಿರುವುದು ಈ ಸಂಘರ್ಷದ ಗಂಭೀರತೆಯನ್ನು ತೋರಿಸುತ್ತದೆ.
ಒಟ್ಟಾರೆ, ಅಮೆರಿಕಾ-ಇರಾನ್-ಇಸ್ರೇಲ್ ನಡುವೆ ಕದನ ವಿರಾಮ ಇದ್ದರೂ ಪರಿಸ್ಥಿತಿ ಸಂಪೂರ್ಣ ಶಾಂತವಾಗಿಲ್ಲ. ಮಾತುಕತೆಗಳು ಮುಂದುವರಿದರೂ ಸ್ಪಷ್ಟ ಫಲಿತಾಂಶ ಕಾಣಿಸಿಕೊಳ್ಳುತ್ತಿಲ್ಲ. ಹಾರ್ಮುಜ್ ಜಲಸಂಧಿ, ಪರಮಾಣು ಹೊಂದುವ ಯೋಜನೆ ಮತ್ತು ರಾಜಕೀಯ ಅವಿಶ್ವಾಸ ಎಂಬ ಮೂರು ಪ್ರಮುಖ ಅಂಶಗಳು ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತಿವೆ. ಟ್ರಂಪ್ ಅವರ ಕಠಿಣ ನಿಲುವು ಮತ್ತು ಇರಾನ್‌ನ ಬೇಡಿಕೆಗಳ ನಡುವೆ ಸಮನ್ವಯ ಸಾಧ್ಯವಾಗದಿದ್ದರೆ, ಮುಂದಿನ ದಿನಗಳಲ್ಲಿ ಸಂಘರ್ಷ ಮತ್ತೆ ತೀವ್ರಗೊಳ್ಳುವ ಸಾಧ್ಯತೆ ಇದೆ.
Advertisement