Video: ವಿವಸ್ತ್ರಗೊಳಿಸಿ, ಬೆನ್ನಟ್ಟಿ ಹಲ್ಲೆ-ಅತ್ಯಾಚಾರ; ನೈಜೀರಿಯಾದ ವಿಲಕ್ಷಣ Rape Festival ವಿರುದ್ಧ ಜಾಗತಿಕ ಆಕ್ರೋಶ

ನೈಜೀರಿಯಾದ ಡೆಲ್ಟಾ ರಾಜ್ಯದ ಓಝೋರೋ (Ozoro) ಪಟ್ಟಣದಲ್ಲಿ ನಡೆದ ಅಲು-ಡೋ (Alue-Do) ಹಬ್ಬದ ಸಂದರ್ಭದಲ್ಲಿ ಮಹಿಳೆಯರ ಮೇಲೆ ನಡೆದ ಸಾಮೂಹಿಕ ಲೈಂಗಿಕ ದೌರ್ಜನ್ಯ ಜಾಗತಿಕ ಆಕ್ರೋಶಕ್ಕೆ ಕಾರಣವಾಗಿವೆ.
Nigerian 'Rape Festival" Causes Global Outrage
ನೈಜಿರಿಯಾದ ರೇಪ್ ಫೆಸ್ಟಿವಲ್
Updated on

ಅಬುಜಾ: ನೈಜೀರಿಯಾದಲ್ಲಿ ನಡೆದ ವಿಲಕ್ಷಣ ಸಂತಾನ ಫಲವತ್ತತೆ ಕುರಿತ ವಿಲಕ್ಷಣ ಉತ್ಸವೊಂದು ಇದೀಗ ಜಾಗತಿಕ ಮಟ್ಟದ ಆಕ್ರೋಶಕ್ಕೆ ಕಾರಣವಾಗಿದ್ದು, ಸ್ಥಳೀಯವಾಗಿ ಅತ್ಯಾಚಾರ ಹಬ್ಬವೆಂದೇ ಇದು ಕು'ಖ್ಯಾತಿ'ಗಳಿಸಿದೆ.

ಮಾರ್ಚ್ 2026 ರ ಕೊನೆಯಲ್ಲಿ, ನೈಜೀರಿಯಾದ ಡೆಲ್ಟಾ ರಾಜ್ಯದ ಓಝೋರೋ (Ozoro) ಪಟ್ಟಣದಲ್ಲಿ ನಡೆದ ಅಲು-ಡೋ (Alue-Do) ಹಬ್ಬದ ಸಂದರ್ಭದಲ್ಲಿ ಮಹಿಳೆಯರ ಮೇಲೆ ನಡೆದ ಸಾಮೂಹಿಕ ಲೈಂಗಿಕ ದೌರ್ಜನ್ಯದ ವರದಿಗಳು ಜಾಗತಿಕವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ.

ಮದುವೆಯಾಗಿ ಮಕ್ಕಳಿಲ್ಲದ ಮಹಿಳೆಯರು ಸಂತಾನ ಭಾಗ್ಯಕ್ಕಾಗಿ ಪ್ರಾರ್ಥಿಸುವ ಈ ಸಾಂಪ್ರದಾಯಿಕ ಹಬ್ಬವನ್ನು, ಪ್ರತೀ ವರ್ಷ ಮಾರ್ಚ್ ತಿಂಗಳ ಅಂತ್ಯದಲ್ಲಿ ನಡೆಸಲಾಗುತ್ತದೆ. ಇಲ್ಲಿ ಸಂತಾನವಿಲ್ಲದ ವಿವಾಹಿತ ಮಹಿಳೆಯರು ಅಲ್ಲಿನ ಯುವಕರ ಗುಂಪುಗಳ ನಡುವೆ ಓಡುತ್ತಾರೆ. ಹೀಗೆ ಮಹಿಳೆಯರು ಓಡುವಾಗ ಅವರನ್ನು ಸ್ಥಳೀಯ ಯುವಕರು ಬೆನ್ನಟ್ಟುತ್ತಾರೆ. ಈ ಪ್ರಕ್ರಿಯೆಯಲ್ಲಿ ಮಹಿಳೆಯರ ಬಟ್ಟೆ ಹರಿದು, ವಿವಸ್ತ್ರಗೊಳಿಸಿ ಹಲ್ಲೆ ಕೂಡ ಮಾಡಲಾಗುತ್ತದೆ.

ಈ ಸಂದರ್ಭದಲ್ಲಿ ಅತ್ಯಾಚಾರವಾದ ಹಲವು ನಿದರ್ಶನಗಳೂ ಕೂಡ ಇದೆ. ಮಹಿಳೆಯರನ್ನು ಬೀದಿಗಳಲ್ಲಿ ಓಡಿಸಿ, ಪುರುಷರ ಗುಂಪುಗಳು ಲೈಂಗಿಕ ದೌರ್ಜನ್ಯ ಎಸಗಿವೆ ಎಂಬ ವರದಿಗಳು ಬಂದ ನಂತರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವರು ಇದನ್ನು "ಅತ್ಯಾಚಾರ ಹಬ್ಬ" ಎಂದು ಬಣ್ಣಿಸಿದ್ದಾರೆ.

ಈ ಘಟನೆ ಮಾರ್ಚ್‌ನಲ್ಲಿ ನೈಜೀರಿಯಾದ ಡೆಲ್ಟಾ ರಾಜ್ಯದಲ್ಲಿ ಒರಾಮುಡು ಸಮುದಾಯವು ಆಚರಿಸುವ ಫಲವತ್ತತೆಗೆ ಸಂಬಂಧಿಸಿದ ಅಲುಯೆ-ದೋ ಹಬ್ಬದ ಸಂದರ್ಭದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಫ್ರಾನ್ಸ್24 ವರದಿ ಪ್ರಕಾರ, ಸಾರ್ವಜನಿಕವಾಗಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಮೊದಲು ಅವರ ಬಟ್ಟೆಗಳನ್ನು ಹರಿದು ಬಲವಂತವಾಗಿ ಅವರನ್ನು ವಿವಸ್ತ್ರಗೊಳಿಸಲಾಗುತ್ತದೆ ಎಂದು ಆರೋಪಿಸಲಾಗಿದೆ.

ಘಟನೆಯ ಸಮಯದಲ್ಲಿ ಪಕ್ಕದಲ್ಲಿ ಪ್ರೇಕ್ಷಕರು ಇದ್ದರು, ಕೆಲವರು ಹಿಂಸಾಚಾರವನ್ನು ನಿಲ್ಲಿಸದೆ ಕೂಗುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಘಟನೆಯಲ್ಲಿ ಪುರುಷರ ದೊಡ್ಡ ಗುಂಪು ಮತ್ತು ಕೆಲವು ಸಂದರ್ಭಗಳಲ್ಲಿ, ಚಿಕ್ಕ ಹುಡುಗರು ಸಹ ಭಾಗಿಯಾಗಿದ್ದರು ಎಂದು ವರದಿ ಉಲ್ಲೇಖಿಸಿದೆ.

Nigerian 'Rape Festival" Causes Global Outrage
ಪೂಲ್ ಪಾರ್ಟಿಯಲ್ಲಿ ಟ್ರಂಪ್: ಸಂಪುಟ ಸದಸ್ಯರ ಶರ್ಟ್‌ಲೆಸ್ ಫೋಟೋ ಪೋಸ್ಟ್; ವಿಲಕ್ಷಣ AI ಚಿತ್ರದ ಮೂಲಕ ಅಮೆರಿಕಾ ಅಧ್ಯಕ್ಷ ಕೆಂಗಣ್ಣಿಗೆ ಗುರಿ!

ನೈಜೀರಿಯಾದ 'ರೇಪ್ ಫೆಸ್ಟಿವಲ್'

ಮಾರ್ಚ್ 19, 2026 ರಂದು ನೈಜೀರಿಯಾದ ಇಸೊಕೊ ನಾರ್ತ್ ಪ್ರದೇಶದ ಓಝೋರೋನಲ್ಲಿ ಹಗಲು ಹೊತ್ತಿನಲ್ಲೇ ಈ ದೌರ್ಜನ್ಯಗಳು ನಡೆದಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೋಗಳಲ್ಲಿ, ಪುರುಷರ ಗುಂಪುಗಳು ಮಹಿಳೆಯರನ್ನು ಮೋಟಾರ್ ಸೈಕಲ್‌ಗಳಿಂದ ಎಳೆದು ಹಾಕಿ, ಅವರ ಬಟ್ಟೆಗಳನ್ನು ಹರಿದು ಹಾಕಿ, ಅಸಭ್ಯವಾಗಿ ವರ್ತಿಸುತ್ತಿರುವುದು ಕಂಡುಬಂದಿದೆ.

ಅನೇಕರು ಇದನ್ನು ತಡೆಯುವ ಬದಲು ತಮ್ಮ ಫೋನ್‌ಗಳಲ್ಲಿ ವಿಡಿಯೋ ಚಿತ್ರೀಕರಿಸುತ್ತಿದ್ದರು. ಹತ್ತಿರದ ವಿಶ್ವವಿದ್ಯಾಲಯದ ಕನಿಷ್ಠ ಆರು ವಿದ್ಯಾರ್ಥಿನಿಯರು ಈ ಹಲ್ಲೆಗೆ ಒಳಗಾಗಿದ್ದಾರೆ ಎಂದು ಗುರುತಿಸಲಾಗಿದೆ.

ಕಾನೂನು ಕ್ರಮ ಮತ್ತು ಪ್ರತಿಕ್ರಿಯೆ

ಡೆಲ್ಟಾ ರಾಜ್ಯದ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕನಿಷ್ಠ 18 ಮಂದಿಯನ್ನು ಬಂಧಿಸಿದ್ದಾರೆ. ಇದರಲ್ಲಿ ಹಬ್ಬವನ್ನು ಆಯೋಜಿಸಿದ ಸಮುದಾಯದ ಮುಖಂಡ ಮತ್ತು ಮುಖ್ಯ ಅರ್ಚಕ ಕೂಡ ಸೇರಿದ್ದಾರೆ. ಸಾರ್ವಜನಿಕರು ಇದನ್ನು "ರೇಪ್ ಫೆಸ್ಟಿವಲ್" (ಅತ್ಯಾಚಾರ ಹಬ್ಬ) ಎಂದು ಕರೆಯುತ್ತಿದ್ದರೂ, ಪೊಲೀಸರು ಇದನ್ನು ಲೈಂಗಿಕ ಕಿರುಕುಳ ಮತ್ತು ಅಸಭ್ಯ ವರ್ತನೆ ಅಡಿಯಲ್ಲಿ ತನಿಖೆ ಮಾಡುತ್ತಿದ್ದಾರೆ.

ಹಬ್ಬದ ಮೇಲೆ ನಿಷೇಧ

ಘಟನೆಯ ನಂತರ ಓಝೋರೋನ ರಾಜ (Monarch of Ozoro), ಈ ಅಲು-ಡೋ ಹಬ್ಬವನ್ನು ಅನಿರ್ದಿಷ್ಟಾವಧಿಗೆ ನಿಷೇಧಿಸಿದ್ದಾರೆ. ಡೆಲ್ಟಾ ರಾಜ್ಯದ ಗವರ್ನರ್ ಶರೀಫ್ ಒಬೊರೆವೊರಿ ಕೂಡ ಈ ಕೃತ್ಯವನ್ನು ಕಟುವಾಗಿ ಖಂಡಿಸಿದ್ದಾರೆ.

ವಿಶ್ವಸಂಸ್ಥೆ ಮಹಿಳಾ ಘಟಕ (UN Women) ಮತ್ತು ನೈಜೀರಿಯನ್ ಬಾರ್ ಅಸೋಸಿಯೇಷನ್ (NBA) ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಸಂಸ್ಥೆಗಳು ಈ ಘಟನೆಯನ್ನು ಖಂಡಿಸಿವೆ. ಸಂಪ್ರದಾಯದ ಹೆಸರಿನಲ್ಲಿ ಮಹಿಳೆಯರ ಘನತೆಗೆ ಧಕ್ಕೆ ತರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಅನೇಕ ಮಾನವ ಹಕ್ಕು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com