‘ನಮ್ಮ ತಾಳ್ಮೆ ಪರೀಕ್ಷಿಸಬೇಡಿ; ಶೀಘ್ರ ಒಪ್ಪಂದಕ್ಕೆ ಬನ್ನಿ, ಇಲ್ಲವಾದರೆ ಹೊಡೆತ ಇನ್ನಷ್ಟು ಭೀಕರವಾಗಲಿದೆ’: ಇರಾನ್‌ಗೆ ಟ್ರಂಪ್ ಕಠಿಣ ಎಚ್ಚರಿಕೆ..!

ಅಮೆರಿಕ ಶಾಂತಿಯನ್ನು ಬಯಸುತ್ತದೆ. ಆದರೆ. ಮ್ಮ ಸೇನೆ ಮತ್ತು ರಾಷ್ಟ್ರದ ಭದ್ರತೆಯೊಂದಿಗೆ ಆಟವಾಡಲು ಯಾರಿಗೂ ಅವಕಾಶ ನೀಡುವುದಿಲ್ಲ. ಇರಾನ್ ತಕ್ಷಣ ಮಾತುಕತೆಗೆ ಬಂದು ಒಪ್ಪಂದಕ್ಕೆ ಬರಬೇಕು.
President Donald Trump speaks as Secretary of State Marco Rubio, right, and Vice President JD Vance listen in the Oval Office at the White House, Thursday.
ಅಮೆರಿಕಾ ಡೊನಾಲ್ಡ್ ಟ್ರಂಪ್
Updated on

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ ಮತ್ತೊಮ್ಮೆ ಕಠಿಣ ಎಚ್ಚರಿಕೆ ನೀಡಿದ್ದು, “ನಮ್ಮ ತಾಳ್ಮೆ ಪರೀಕ್ಷಿಸಬೇಡಿ; ಶೀಘ್ರ ಒಪ್ಪಂದಕ್ಕೆ ಬನ್ನಿ, ಇಲ್ಲವಾದರೆ ಮುಂದಿನ ಹೊಡೆತ ಇನ್ನಷ್ಟು ಭೀಕರವಾಗಲಿದೆ” ಎಂದು ಹೇಳಿದ್ದಾರೆ.

ಹೋರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ನೌಕಾಪಡೆಯ ಮೇಲೆ ನಡೆದ ದಾಳಿ ಪ್ರಯತ್ನದ ಬಳಿಕ ಟ್ರಂಪ್ ಈ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಲ್ಲಿ ಪೋಸ್ಟ್ ಮಾಡಿರುವ ಅವರು, ಅಮೆರಿಕ ಶಾಂತಿಯನ್ನು ಬಯಸುತ್ತದೆ. ಆದರೆ. ಮ್ಮ ಸೇನೆ ಮತ್ತು ರಾಷ್ಟ್ರದ ಭದ್ರತೆಯೊಂದಿಗೆ ಆಟವಾಡಲು ಯಾರಿಗೂ ಅವಕಾಶ ನೀಡುವುದಿಲ್ಲ. ಇರಾನ್ ತಕ್ಷಣ ಮಾತುಕತೆಗೆ ಬಂದು ಒಪ್ಪಂದಕ್ಕೆ ಬರಬೇಕು ಎಂದು ಹೇಳಿದ್ದಾರೆ.

ಜೊತೆಗೆ, ಮುಂದಿನ ದಿನಗಳಲ್ಲಿ ಇದೇ ರೀತಿಯ ದಾಳಿಗಳು ಮರುಕಳಿಸಿದರೆ ಅಮೆರಿಕದ ಪ್ರತಿಕ್ರಿಯೆ ಇನ್ನಷ್ಟು ಕಠಿಣವಾಗಲಿದೆ ಎಂದೂ ಎಚ್ಚರಿಸಿದ್ದಾರೆ.

ಅಮೆರಿಕದ ನೌಕಾಪಡೆಯ ಮೇಲೆ ದಾಳಿ ನಡೆಸಲು ಯತ್ನಿಸಿದವರಿಗೆ ಈಗಾಗಲೇ ಭಾರೀ ಹಾನಿಯಾಗಿದೆ. ಮುಂದೆಯೂ ಇದೇ ರೀತಿ ಮುಂದುವರಿದರೆ, ಇನ್ನೂ ಕಠಿಣವಾಗಿ ಪ್ರತಿಕ್ರಿಯಿಸುತ್ತೇವೆ. ಜೊತೆಗೆ, ಇರಾನ್ ಶೀಘ್ರದಲ್ಲೇ ಒಪ್ಪಂದಕ್ಕೆ ಬರದಿದ್ದರೆ ಮತ್ತಷ್ಟು ತೀವ್ರ ಸೈನಿಕ ಕ್ರಮ ಕೈಗೊಳ್ಳಬಹುದು ಎಂಬ ಸೂಚನೆಯನ್ನೂ ನೀಡಿದ್ದಾರೆ.

President Donald Trump speaks as Secretary of State Marco Rubio, right, and Vice President JD Vance listen in the Oval Office at the White House, Thursday.
ನಿಮಗೇ ತಿಳಿಯದೇ ನಮಗೆ ಸಹಾಯ ಮಾಡಿದ್ದಕ್ಕೆ ಥ್ಯಾಂಕ್ಯೂ- ಇರಾನ್ ಕಾಲೆಳೆದ ಟ್ರಂಪ್; ಅಮೆರಿಕಾಗೆ ಆದ ಲಾಭವೇನು?

ಅಮೆರಿಕಾದ ಸೇನಾ ಅಧಿಕಾರಿಗಳ ಪ್ರಕಾರ, ಇರಾನ್ ಬೆಂಬಲಿತ ಪಡೆಗಳು ಕ್ಷಿಪಣಿ, ಡ್ರೋನ್ ಹಾಗೂ ವೇಗದ ದಾಳಿ ದೋಣಿಗಳ ಮೂಲಕ ಅಮೆರಿಕದ ಯುದ್ಧನೌಕೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಯತ್ನಿಸಿವೆ. ಆದರೆ ಅಮೆರಿಕದ ರಕ್ಷಣಾ ವ್ಯವಸ್ಥೆಗಳು ಎಲ್ಲಾ ದಾಳಿಗಳನ್ನು ಯಶಸ್ವಿಯಾಗಿ ತಡೆದಿದ್ದು, ಯಾವುದೇ ನೌಕೆಗೆ ಹಾನಿಯಾಗಿಲ್ಲ ಎಂದು ತಿಳಿಸಿದೆ.

ಈ ಘಟನೆಯ ಬಳಿಕ ಅಮೆರಿಕ ಸೇನೆ ಇರಾನ್‌ನ ಕೆಲವು ಸೈನಿಕ ತಾಣಗಳು, ಕ್ಷಿಪಣಿ ಉಡಾವಣೆ ಕೇಂದ್ರಗಳು ಹಾಗೂ ಡ್ರೋನ್ ನಿಯಂತ್ರಣ ನೆಲೆಗಳ ಮೇಲೆ ಪ್ರತಿದಾಳಿ ನಡೆಸಿದೆ ಎಂದು ವರದಿಯಾಗಿದೆ. ಅಮೆರಿಕ ಈ ಕ್ರಮವನ್ನು “ಸ್ವಯಂ ರಕ್ಷಣಾತ್ಮಕ ಕಾರ್ಯಾಚರಣೆ” ಎಂದು ಸಮರ್ಥಿಸಿಕೊಂಡಿದೆ.

ಈ ನಡುವೆ ಇರಾನ್ ಅಮೆರಿಕಾದ ಆರೋಪಗಳನ್ನು ನಿರಾಕರಿಸಿದ್ದು, ಅಮೆರಿಕವೇ ಮೊದಲು ಕದನ ವಿರಾಮ ಉಲ್ಲಂಘಿಸಿದೆ ಎಂದು ಆರೋಪಿಸಿದೆ. ಅಮೆರಿಕದ ಪ್ರತಿದಾಳಿಯಲ್ಲಿ ನಾಗರಿಕ ಪ್ರದೇಶಗಳಿಗೂ ಹಾನಿಯಾಗಿದೆ ಎಂದು ಹೇಳಿರುವ ಇರಾನ್, ಯಾವುದೇ ಹೊಸ ದಾಳಿಗೆ “ಪ್ರಬಲ ಪ್ರತಿಕ್ರಿಯೆ” ನೀಡುವುದಾಗಿ ಎಚ್ಚರಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com