ಇರಾನ್ ನಗು ದೀರ್ಘಕಾಲ ಉಳಿಯಲ್ಲ: ಶಾಂತಿ ಪ್ರಸ್ತಾವನೆ ಮಾತುಕತೆ ನಡುವೆ ಟ್ರಂಪ್ ಎಚ್ಚರಿಕೆ!

ಇರಾನ್ ಈಗ ಮತ್ತೆ ನಮ್ಮ ಗ್ರೇಟ್ ದೇಶವನ್ನು ನೋಡಿ ನಗುತ್ತಿದೆ. ಆದರೆ ಅವರು ಇನ್ನು ಮುಂದೆ ನಗುವುದಿಲ್ಲ ಎಂದು ಹೇಳಿದ್ದಾರೆ.
Donald Trump
ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ಟನ್: ಇರಾನ್ ದಶಕಗಳಿಂದ ಆಟವಾಡುತ್ತಿದೆ. ಅಮೆರಿಕವನ್ನು ನೋಡಿ ನಗುತ್ತಿದೆ. ಆದರೆ ಈ ನಗು ಹಾಗೆಯೇ ದೀರ್ಘಕಾಲ ಉಳಿಯಲ್ಲಎಂದು ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ವಾಷಿಂಗ್ಟನ್‌ನ ಇತ್ತೀಚಿನ ಶಾಂತಿ ಪ್ರಸ್ತಾವನೆಗೆ ಟೆಹ್ರಾನ್‌ನ ಪ್ರತಿಕ್ರಿಯೆಯ ವರದಿಗಳ ಬಗ್ಗೆ ನೇರವಾಗಿ ಪ್ರತಿಕ್ರಿಯಿಸದೆ ಈ ರೀತಿ ಹೇಳಿದ್ದಾರೆ. "ಇರಾನ್ 47 ವರ್ಷಗಳಿಂದ ಅಮೆರಿಕ ಮತ್ತು ಉಳಿದ ಪ್ರಪಂಚದೊಂದಿಗೆ ಆಟವಾಡುತ್ತಿದೆ (ವಿಳಂಬ, ವಿಳಂಬ, ವಿಳಂಬ!) ಎಂದು ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ ಪ್ಲಾಟ್‌ಫಾರ್ಮ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ.

ಇರಾನ್ ಈಗ ಮತ್ತೆ ನಮ್ಮ ಗ್ರೇಟ್ ದೇಶವನ್ನು ನೋಡಿ ನಗುತ್ತಿದೆ. ಆದರೆ ಅವರು ಇನ್ನು ಮುಂದೆ ನಗುವುದಿಲ್ಲ ಎಂದು ಹೇಳಿದ್ದಾರೆ.

ಇತ್ತೀಚಿನ ಕದನ ವಿರಾಮ ಪ್ರಸ್ತಾವನೆಗೆ ಪಾಕಿಸ್ತಾನದ ಮೂಲಕ ಅಮೆರಿಕ ಕಳುಹಿಸಿದ ಪ್ರಸ್ತಾವನೆಗೆ ಇರಾನ್ ತನ್ನ ಪ್ರತಿಕ್ರಿಯೆ ಕಳುಹಿಸಿದ ಕೆಲವೇ ಗಂಟೆಗಳ ನಂತರ ಟ್ರಂಪ್ ಈ ರೀತಿಯ ಹೇಳಿಕೆ ನೀಡಿದ್ದಾರೆ.

ಈ ಮಧ್ಯೆ ಇರಾನ್ ಬೆಂಬಲಿತ ಹೆಜ್ಬೊಲ್ಲಾ ಉಗ್ರಗಾಮಿ ಗುಂಪಿನ ವಿರುದ್ಧ ಇಸ್ರೇಲ್ ಹೋರಾಡುತ್ತಿರುವ ಲೆಬನಾನ್ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಯುದ್ಧ ಕೊನೆಗೊಳಿಸಲು ಮತ್ತು ಹಡಗು ಸಾಗಣೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇರಾನ್ ಪ್ರಯತ್ನಿಸುತ್ತದೆ ಎಂದು ಟೆಹ್ರಾನ್ ರಾಜ್ಯ ಟಿವಿ ತಿಳಿಸಿದೆ.

ನಾವು ಎಂದಿಗೂ ಶತ್ರುಗಳಿಗೆ ತಲೆಬಾಗುವುದಿಲ್ಲ, ಮತ್ತು ಸಂಭಾಷಣೆ ಅಥವಾ ಮಾತುಕತೆಯ ಬಗ್ಗೆ ಮಾತನಾಡಿದರೆ, ಅದು ಶರಣಾಗತಿ ಅಥವಾ ಹಿಮ್ಮೆಟ್ಟುವಿಕೆ ಎಂದರ್ಥವಲ್ಲ ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.

Donald Trump
ಮಧ್ಯಪ್ರಾಚ್ಯದಲ್ಲಿ ಮತ್ತೆ ಭುಗಿಲೆದ್ದ ಸಂಘರ್ಷ: ಡ್ರೋನ್, ಕ್ಷಿಪಣಿ ದಾಳಿ ಹಿಮ್ಮೆಟ್ಟಿಸಿದ್ದೇವೆ ಎಂದ UAE; ಪರಿಸ್ಥಿತಿ ಉಲ್ಬಣಗೊಳಿಸುವ ಉದ್ದೇಶ ಇಲ್ಲ- ಅಮೆರಿಕ

ಅಮೆರಿಕದ ಇತ್ತೀಚಿನ ಪ್ರಸ್ತಾಪದಲ್ಲಿ ಯುದ್ಧವನ್ನು ಕೊನೆಗೊಳಿಸುವ, ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಮತ್ತು ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ಹಿಂದಕ್ಕೆ ಪಡೆಯುವ ಒಪ್ಪಂದದ ವಿಷಯವಿದೆ. ಆದರೆ, ತದನಂತರ ಚರ್ಚಿಸುವುದಾಗಿ ಇರಾನ್ ಹೇಳಿದೆ. ಇರಾನ್‌ನ ಉತ್ತರದ ಬಗ್ಗೆ ಶ್ವೇತಭವನವು ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com