US-Iran war: ಒಪ್ಪಂದಕ್ಕೆ ಬಾರದಿದ್ದರೆ ಒಂದೇ ದಿನದಲ್ಲಿ ಅಂತ್ಯ ಖಚಿತ; ಇರಾನ್'ಗೆ ಅಮೆರಿಕಾ ಕಠಿಣ ಎಚ್ಚರಿಕೆ

ಮೂರು ದಿನಗಳ ಚೀನಾ ಪ್ರವಾಸದ ಕೊನೆಯ ದಿನವಾದ ಇಂದು ಮಾತನಾಡಿರುವ ಟ್ರಂಪ್ ಅವರು, ಇರಾನ್‌ಗೆ ಅಣ್ವಸ್ತ್ರ ಅಭಿವೃದ್ಧಿಪಡಿಸಲು ಅಮೆರಿಕ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Donald trump
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Updated on

ಬೀಜಿಂಗ್: ಒಪ್ಪಂದ ಮಾಡಿಕೊಳ್ಳಿ, ಇಲ್ಲವಾದರೆ ಸಂಪೂರ್ಣ ವಿನಾಶ ಎದುರಿಸಬೇಕಾಗುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್'ಗೆ ಮತ್ತೊಮ್ಮೆ ಕಠಿಣ ಎಚ್ಚರಿಕೆ ನೀಡಿದ್ದಾರೆ.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ನಡೆದ ಮಹತ್ವದ ಮಾತುಕತೆಗಳ ಬಳಿಕ ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಅವರು ಈ ಹೇಳಿಕೆ ನೀಡಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಈಗಾಗಲೇ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಸಂದರ್ಭದಲ್ಲೇ ಟ್ರಂಪ್ ನೀಡಿರುವ ಈ ಹೇಳಿಕೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮೂರು ದಿನಗಳ ಚೀನಾ ಪ್ರವಾಸದ ಕೊನೆಯ ದಿನವಾದ ಇಂದು ಮಾತನಾಡಿರುವ ಟ್ರಂಪ್ ಅವರು, ಇರಾನ್‌ಗೆ ಅಣ್ವಸ್ತ್ರ ಅಭಿವೃದ್ಧಿಪಡಿಸಲು ಅಮೆರಿಕ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇರಾನ್ ಈಗ ಅಂತ್ಯದ ಹಂತದಲ್ಲಿದೆ. ಅವರು ಒಪ್ಪಂದ ಮಾಡಿಕೊಳ್ಳಬಹುದು ಅಥವಾ ಸಂಪೂರ್ಣ ನಾಶವಾಗಬಹುದು ಎಂದು ನೇರ ಎಚ್ಚರಿಕೆ ನೀಡಿದ್ದಾರೆ.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗನ ಮಾತುಕತೆ ಕುರಿತು ಮಾತನಾಡಿದ ಅವರು, ಅಮೆರಿಕಾ ಮತ್ತು ಇರಾನ್ ನಡುವೆ ಒಪ್ಪಂದವಾಗಬೇಕು ಎಂದು ಚೀನಾ ಬಯಸುತ್ತಿದೆ. ಅಗತ್ಯವಿದ್ದರೆ ಸಹಾಯ ಮಾಡಲು ಸಿದ್ಧ ಎಂದು ಅವರು ಹೇಳಿದ್ದಾರೆ. ಚೀನಾ ಇರಾನ್‌ಗೆ ಸೈನಿಕ ನೆರವು ನೀಡುವುದಿಲ್ಲ ಎಂಬ ಭರವಸೆಯನ್ನೂ ಅವಕು ನೀಡಿದ್ದಾರೆಂದು ತಿಳಿಸಿದ್ದಾರೆ.

Donald trump
750 ಕಿಮೀ ವ್ಯಾಪ್ತಿಯ ಫತಾಹ್-IV ಕ್ರೂಸ್ ಕ್ಷಿಪಣಿ ಪರೀಕ್ಷಿಸಿದ ಪಾಕಿಸ್ತಾನ

ವಿಶ್ವದ ಮಟ್ಟದಲ್ಲಿ ಇರಾನ್‌ನ ತೈಲ ಖರೀದಿದಾರ ರಾಷ್ಟ್ರಗಳಲ್ಲಿ ಚೀನಾ ಪ್ರಮುಖವಾಗಿದ್ದು, ಇರಾನ್‌ನ ಸುಮಾರು 90 ಶೇಕಡಾ ತೈಲವನ್ನು ಚೀನಾ ಖರೀದಿಸುತ್ತದೆ. ಜೊತೆಗೆ ಎರಡು ದೇಶಗಳ ನಡುವೆ ಆರ್ಥಿಕ ಮತ್ತು ಸೈನಿಕ ಸಂಬಂಧಗಳೂ ಗಟ್ಟಿಯಾಗಿವೆ.

ಇರಾನ್‌ನ ಸೈನಿಕ ಸಾಮರ್ಥ್ಯದ ಕುರಿತು ಮಾತನಾಡಿದ ಟ್ರಂಪ್, ಅಮೆರಿಕದ ಜಂಟಿ ಸೈನಿಕ ಮುಖ್ಯಸ್ಥರ ಸಮಿತಿಯ ಅಧ್ಯಕ್ಷ ಜನರಲ್ ಡ್ಯಾನ್ ಕೇನ್ ತಮ್ಮಗೆ ನೀಡಿದ ಮಾಹಿತಿಯನ್ನು ಉಲ್ಲೇಖಿಸಿದರು.

“ಅಮೆರಿಕ ಇರಾನ್‌ನ ಖಾರ್ಗ್ ದ್ವೀಪವನ್ನು ನಾಲ್ಕು ಅಥವಾ ಐದು ನಿಮಿಷಗಳಲ್ಲಿ ನಿಷ್ಕ್ರಿಯಗೊಳಿಸಬಹುದು ಎಂದು ಹೇಳಿದ್ದಾರೆ.

ಇರಾನ್‌ನ ನೌಕಾಪಡೆ ಬಹುತೇಕ ನಾಶವಾಗಿದೆ ಹಾಗೂ ದೇಶದ ವಾಯುಪಡೆ ಮತ್ತು ವಾಯು ರಕ್ಷಣಾ ಸಾಮರ್ಥ್ಯ ಈಗ ದುರ್ಬಲವಾಗಿದೆ. “ಅವರು ಸ್ವಲ್ಪ ಮಟ್ಟಿಗೆ ಪುನರ್ ನಿರ್ಮಾಣ ಮಾಡಿರಬಹುದು. ಆದರೆ, ಅದನ್ನು ನಾವು ಒಂದೇ ದಿನದಲ್ಲಿ ಧ್ವಂಸ ಮಾಡಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ ಚೀನಾ ಅಧ್ಯಕ್ಷರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಟ್ರಂಪ್ ಅವರು, “ಅವರು ತುಂಬಾ ಶಕ್ತಿಶಾಲಿ ನಾಯಕ. ಸುಮಾರು 1.5 ಬಿಲಿಯನ್ ಜನಸಂಖ್ಯೆಯ ದೇಶವನ್ನು ಆಡಳಿತ ನಡೆಸುತ್ತಿದ್ದಾರೆ. ನಮ್ಮಿಬ್ಬರ ನಡುವೆ ಉತ್ತಮ ಸಂಬಂಧ ಇದೆ ಎಂದು ತಿಳಿಸಿದರು.

Donald trump
ಒಂದೇ ಒಂದು ದಾಳಿ ನಡೆದರೂ ಯುರೇನಿಯಂ ದಾಸ್ತಾನು ಶಸ್ತ್ರಾಸ್ತ್ರ ದರ್ಜೆಗೆ ಏರಿಕೆ: ಅಮೆರಿಕಾಗೆ ಇರಾನ್ ಕಠಿಣ ಎಚ್ಚರಿಕೆ!

ಚೀನಾ ಪ್ರವಾಸದ ವೇಳೆ ಆಯೋಜಿಸಿದ್ದ ಸೈನಿಕ ಗೌರವ ಸಮಾರಂಭವನ್ನು ಕೂಡ ಟ್ರಂಪ್ ಪ್ರಶಂಸಿಸಿದ್ದು, ಹಾಲಿವುಡ್‌ನಲ್ಲೂ ಇಂತಹ ದೃಶ್ಯ ಸಿಗುವುದಿಲ್ಲ,” ಎಂದು ಹೇಳಿದರು.

ಈ ಭೇಟಿಯ ವೇಳೆ ವ್ಯಾಪಾರ ಮತ್ತು ಆರ್ಥಿಕ ಸಹಕಾರ ಕುರಿತೂ ಮಹತ್ವದ ಚರ್ಚೆಗಳು ನಡೆದಿವೆ ಎಂದು ಟ್ರಂಪ್ ತಿಳಿಸಿದ್ದಾರೆ.

ಚೀನಾ ಅಮೆರಿಕಾದ ತೈಲ ಖರೀದಿಯನ್ನು ಹೆಚ್ಚಿಸಲು ಆಸಕ್ತಿ ತೋರಿದೆ. ಟೆಕ್ಸಾಸ್, ಲೂಯಿಸಿಯಾನಾ ಮತ್ತು ಅಲಾಸ್ಕಾದಿಂದ ಚೀನಾಕ್ಕೆ ತೈಲ ರಫ್ತು ಮಾಡುವ ಬಗ್ಗೆ ಮಾತುಕತೆ ನಡೆದಿದೆ ಎಂದೂ ತಿಳಿಸಿದ್ದಾರೆ.

ಇದೇ ವೇಳೆ ಅಮೆರಿಕದ ಕಂಪನಿಗಳಿಗೆ ಚೀನಾ ತನ್ನ ಮಾರುಕಟ್ಟೆಯನ್ನು ಇನ್ನಷ್ಟು ತೆರೆಯಬೇಕು ಎಂದು ಟ್ರಂಪ್ ಹೇಳಿದ್ದಾರೆ.

“ಚೀನಾ ಮಾರುಕಟ್ಟೆ ತೆರೆದರೆ ಅಮೆರಿಕದ ಕಂಪನಿಗಳಿಗೆ ಅದ್ಭುತ ಅವಕಾಶ ಸಿಗಲಿದೆ. ಅದು ಚೀನಾಕೂ ಒಳ್ಳೆಯದೇ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಚೀನಾ 200 ಬೋಯಿಂಗ್ ವಿಮಾನಗಳನ್ನು ಖರೀದಿಸಲು ಒಪ್ಪಿದೆ ಎಂದು ಟ್ರಂಪ್ ಹೇಳಿದ್ದು, ಅಮೆರಿಕಾದ ಕೃಷಿ ಉತ್ಪನ್ನಗಳ ಖರೀದಿಯನ್ನೂ ಹೆಚ್ಚಿಸುವ ಬಗ್ಗೆ ಚರ್ಚೆಯಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com