ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಗುರಿಯಾಗಿಸಿ ಸಂಚಾರಕ್ಕೆ ಅಡ್ಡಿಪಡಿಸಿದರೆ ಸಹಿಸಲಾಗದು: ವಿಶ್ವಸಂಸ್ಥೆಯಲ್ಲಿ ಭಾರತ ಖಂಡನೆ

ಭಾರತ ಸೇರಿದಂತೆ ಅನೇಕ ದೇಶಗಳು ಇಂಧನ ಆಮದು ಮತ್ತು ಸಮುದ್ರ ಮಾರ್ಗಗಳ ಮೇಲೆ ಅವಲಂಬಿತವಾಗಿರುವ ಕಾರಣ, ಹಾರ್ಮುಜ್ ಜಲಸಂಧಿಯ ಸ್ಥಿರತೆ ಅತ್ಯಂತ ಮಹತ್ವದ್ದಾಗಿದೆ.
India's Permanent Representative to the United Nations Parvathaneni Harish
ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ಪರ್ವತನೇನಿ ಹರೀಶ್
Updated on

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಸಂಘರ್ಷದ ಪರಿಣಾಮ ಜಾಗತಿಕ ಇಂಧನ ಮತ್ತು ಸರಕು ಸರಬರಾಜು ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ನಡುವೆಯೇ, ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಅಡ್ಡಿಪಡಿಸುವುದನ್ನು ಸಹಿಸಲಾಗದು ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಕಠಿಣ ಸಂದೇಶ ನೀಡಿದೆ.

ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ (UNECOSOC) ಆಯೋಜಿಸಿದ್ದ “ಇಂಧನ ಮತ್ತು ಸರಕು ಸರಬರಾಜು ಸುರಕ್ಷತೆ” ಕುರಿತ ವಿಶೇಷ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ಪರ್ವತನೇನಿ ಹರೀಶ್ ಅವರು, ಮಧ್ಯಪ್ರಾಚ್ಯ ಯುದ್ಧದಿಂದ ಉಂಟಾಗಿರುವ ಇಂಧನ ಬಿಕ್ಕಟ್ಟಿನ ಬಗ್ಗೆ ಭಾರತದ ನಿಲುವು ಸ್ಪಷ್ಟಪಡಿಸಿದರು.

ಭಾರತ ಸೇರಿದಂತೆ ಅನೇಕ ದೇಶಗಳು ಇಂಧನ ಆಮದು ಮತ್ತು ಸಮುದ್ರ ಮಾರ್ಗಗಳ ಮೇಲೆ ಅವಲಂಬಿತವಾಗಿರುವ ಕಾರಣ, ಹಾರ್ಮುಜ್ ಜಲಸಂಧಿಯ ಸ್ಥಿರತೆ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.

ವಾಣಿಜ್ಯ ಹಡಗುಗಳನ್ನು ಗುರಿಯಾಗಿಸುವುದು, ನಾಗರಿಕ ಸಿಬ್ಬಂದಿಯ ಜೀವಕ್ಕೆ ಅಪಾಯ ಉಂಟುಮಾಡುವುದು ಹಾಗೂ ನೌಕಾಯಾನ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುವುದು ಸಂಪೂರ್ಣ ಅಸ್ವೀಕಾರಾರ್ಹ. ಅಂತರರಾಷ್ಟ್ರೀಯ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸ್ಪಷ್ಟಪಡಿಸಿದರು.

ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತಾ ಆಯೋಗದ ಮುಖ್ಯಸ್ಥ ಇಬ್ರಾಹಿಂ ಅಜಿಜಿ ಅವರು, ಹಾರ್ಮುಜ್ ಜಲಸಂಧಿಯಲ್ಲಿ ನೌಕಾಯಾನ ಸಂಚಾರ ನಿಯಂತ್ರಣಕ್ಕೆ “ವೃತ್ತಿಪರ ವ್ಯವಸ್ಥೆ” ಜಾರಿಗೆ ತರಲು ಇರಾನ್ ಸಿದ್ಧತೆ ನಡೆಸಿದೆ. ದೇಶದ ಸಾರ್ವಭೌಮತ್ವದ ಅಡಿಯಲ್ಲಿ ಈ ವ್ಯವಸ್ಥೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ.

India's Permanent Representative to the United Nations Parvathaneni Harish
'ಪಾಕಿಸ್ತಾನಕ್ಕೆ ಉಪಕಾರ' ಮಾಡಲು ಇರಾನ್‌ನೊಂದಿಗೆ ಕದನವಿರಾಮ; ಪಾಕ್ ಪ್ರಧಾನಿ 'ಅದ್ಭುತ' ಎಂದ ಟ್ರಂಪ್!

ಇರಾನ್ ಜೊತೆ ಸಹಕರಿಸುವ ವಾಣಿಜ್ಯ ಹಡಗುಗಳಿಗೆ ಮಾತ್ರ ಈ ಮಾರ್ಗ ಬಳಕೆಗೆ ಅವಕಾಶ ನೀಡಲಾಗುವುದು. ವಿಶೇಷ ಸೇವೆಗಳಿಗೆ ಶುಲ್ಕ ವಸೂಲಿ ಮಾಡಲಾಗುವುದು. “ಫ್ರೀಡಂ ಪ್ರಾಜೆಕ್ಟ್” ಜೊತೆ ಸಂಪರ್ಕ ಹೊಂದಿರುವ ಹಡಗುಗಳಿಗೆ ಈ ಮಾರ್ಗ ಮುಚ್ಚಿರುತ್ತದೆ ಎಂದು ತಿಳಿಸಿದ್ದಾರೆ.

ಈ ಬೆಳವಣಿಗೆಗಳು ಜಾಗತಿಕ ಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಹಲವು ದೇಶಗಳು ಸಮುದ್ರ ಮಾರ್ಗಗಳ ಭದ್ರತೆ ಬಗ್ಗೆ ಚಿಂತೆಯನ್ನು ವ್ಯಕ್ತಪಡಿಸಿವೆ.

ಹಾರ್ಮುಜ್ ಜಲಸಂಧಿ ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗಗಳಲ್ಲಿ ಒಂದಾಗಿದ್ದು, ಜಗತ್ತಿನ ಬಹುಪಾಲು ಕಚ್ಚಾ ತೈಲ ಮತ್ತು ಅನಿಲ ಸಾಗಣೆ ಇದೇ ಮಾರ್ಗದ ಮೂಲಕ ನಡೆಯುತ್ತದೆ. ಹೀಗಾಗಿ ಇಲ್ಲಿ ಉಂಟಾಗುವ ಯಾವುದೇ ಅಸ್ಥಿರತೆ ಜಾಗತಿಕ ಮಾರುಕಟ್ಟೆ, ಇಂಧನ ದರ ಹಾಗೂ ಸರಕು ಸರಬರಾಜು ವ್ಯವಸ್ಥೆ ಮೇಲೆ ನೇರ ಪರಿಣಾಮ ಬೀರುತ್ತದೆ.

ಇದೇ ವೇಳೆ, ಮಧ್ಯಪ್ರಾಚ್ಯ ಸಂಘರ್ಷಕ್ಕೆ ಶಾಂತಿ ಒಪ್ಪಂದ ಸಾಧ್ಯವಾಗದಿದ್ದರೆ “ಅತ್ಯಂತ ಕೆಟ್ಟ ಪರಿಸ್ಥಿತಿ” ಎದುರಾಗಬಹುದು ಎಂದು ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

India's Permanent Representative to the United Nations Parvathaneni Harish
'ಪ್ರವಾಸ ಯಶಸ್ವಿ, ಆದ್ರೆ ನಾವು ಅವ್ರನ್ನ ನಂಬಲ್ಲ': ಚೀನಾ ಕೊಟ್ಟಿದ್ದ ಬ್ಯಾಡ್ಜ್, ಉಡುಗೊರೆಗಳನ್ನು ಕಸದ ಬುಟ್ಟಿಗೆ ಎಸೆದ ಟ್ರಂಪ್ ಟೀಮ್!

ಮತ್ತೊಂದೆಡೆ, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅಮೆರಿಕದ ವಿರುದ್ಧ ವಾಗ್ದಾಳಿ ನಡೆಸಿದ್ದು, ಶಾಂತಿ ಪ್ರಯತ್ನಗಳಿಗೆ ವಾಷಿಂಗ್ಟನ್‌ ಪ್ರಮುಖ ಅಡ್ಡಿಯಾಗಿದೆ ಎಂದು ಆರೋಪಿಸಿದ್ದಾರೆ.

ಬ್ರಿಕ್ಸ್ ವಿದೇಶಾಂಗ ಸಚಿವರ ಸಭೆಯ ಬಳಿಕ ನವದೆಹಲಿಯಲ್ಲಿ ಮಾತನಾಡಿದ ಅವರು, “40 ದಿನಗಳ ಯುದ್ಧದ ಬಳಿಕ ಗುರಿ ಸಾಧಿಸಲು ವಿಫಲವಾದ ಅಮೆರಿಕಾ ಈಗ ಮಾತುಕತೆ ಪ್ರಸ್ತಾಪಿಸಿದೆ. ಆದರೆ, ಅಮೆರಿಕದ ಮೇಲೆ ನಮಗೆ ಯಾವುದೇ ವಿಶ್ವಾಸವಿಲ್ಲ. ರಾಜತಾಂತ್ರಿಕ ಪ್ರಯತ್ನಗಳಿಗೆ ಅಮೆರಿಕಾ ರಾಷ್ಟ್ರ ದೊಡ್ಡ ಅಡ್ಡಿಯಾಗಿದೆಎಂದು ಹೇಳಿದರು.

ಇರಾನ್ ಜೊತೆ ಸಹಕರಿಸುವ ವಾಣಿಜ್ಯ ಹಡಗುಗಳಿಗೆ ಮಾತ್ರ ಈ ಮಾರ್ಗ ಬಳಕೆಗೆ ಅವಕಾಶ ನೀಡಲಾಗುವುದು. ವಿಶೇಷ ಸೇವೆಗಳಿಗೆ ಶುಲ್ಕ ವಸೂಲಿ ಮಾಡಲಾಗುವುದು. “ಫ್ರೀಡಂ ಪ್ರಾಜೆಕ್ಟ್” ಜೊತೆ ಸಂಪರ್ಕ ಹೊಂದಿರುವ ಹಡಗುಗಳಿಗೆ ಈ ಮಾರ್ಗ ಮುಚ್ಚಿರುತ್ತದೆ ಎಂದು ತಿಳಿಸಿದ್ದಾರೆ.

ಈ ಬೆಳವಣಿಗೆಗಳು ಜಾಗತಿಕ ಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಹಲವು ದೇಶಗಳು ಸಮುದ್ರ ಮಾರ್ಗಗಳ ಭದ್ರತೆ ಬಗ್ಗೆ ಚಿಂತೆಯನ್ನು ವ್ಯಕ್ತಪಡಿಸಿವೆ.

India's Permanent Representative to the United Nations Parvathaneni Harish
ಇರಾನ್ ಅಣ್ವಸ್ತ್ರ ಹೊಂದಬಾರದು, ಹಾರ್ಮುಜ್ ಜಲಸಂಧಿ ಮುಕ್ತವಾಗಿರಬೇಕು: ಅಮೆರಿಕಾ ನಿಲುವಿಗೆ ಚೀನಾ ಸಹಮತ

ಹಾರ್ಮುಜ್ ಜಲಸಂಧಿ ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗಗಳಲ್ಲಿ ಒಂದಾಗಿದ್ದು, ಜಗತ್ತಿನ ಬಹುಪಾಲು ಕಚ್ಚಾ ತೈಲ ಮತ್ತು ಅನಿಲ ಸಾಗಣೆ ಇದೇ ಮಾರ್ಗದ ಮೂಲಕ ನಡೆಯುತ್ತದೆ. ಹೀಗಾಗಿ ಇಲ್ಲಿ ಉಂಟಾಗುವ ಯಾವುದೇ ಅಸ್ಥಿರತೆ ಜಾಗತಿಕ ಮಾರುಕಟ್ಟೆ, ಇಂಧನ ದರ ಹಾಗೂ ಸರಕು ಸರಬರಾಜು ವ್ಯವಸ್ಥೆ ಮೇಲೆ ನೇರ ಪರಿಣಾಮ ಬೀರುತ್ತದೆ.

ಇದೇ ವೇಳೆ, ಮಧ್ಯಪ್ರಾಚ್ಯ ಸಂಘರ್ಷಕ್ಕೆ ಶಾಂತಿ ಒಪ್ಪಂದ ಸಾಧ್ಯವಾಗದಿದ್ದರೆ “ಅತ್ಯಂತ ಕೆಟ್ಟ ಪರಿಸ್ಥಿತಿ” ಎದುರಾಗಬಹುದು ಎಂದು ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಮತ್ತೊಂದೆಡೆ, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅಮೆರಿಕದ ವಿರುದ್ಧ ವಾಗ್ದಾಳಿ ನಡೆಸಿದ್ದು, ಶಾಂತಿ ಪ್ರಯತ್ನಗಳಿಗೆ ವಾಷಿಂಗ್ಟನ್‌ ಪ್ರಮುಖ ಅಡ್ಡಿಯಾಗಿದೆ ಎಂದು ಆರೋಪಿಸಿದ್ದಾರೆ.

ಬ್ರಿಕ್ಸ್ ವಿದೇಶಾಂಗ ಸಚಿವರ ಸಭೆಯ ಬಳಿಕ ನವದೆಹಲಿಯಲ್ಲಿ ಮಾತನಾಡಿದ ಅವರು, “40 ದಿನಗಳ ಯುದ್ಧದ ಬಳಿಕ ಗುರಿ ಸಾಧಿಸಲು ವಿಫಲವಾದ ಅಮೆರಿಕಾ ಈಗ ಮಾತುಕತೆ ಪ್ರಸ್ತಾಪಿಸಿದೆ. ಆದರೆ, ಅಮೆರಿಕದ ಮೇಲೆ ನಮಗೆ ಯಾವುದೇ ವಿಶ್ವಾಸವಿಲ್ಲ. ರಾಜತಾಂತ್ರಿಕ ಪ್ರಯತ್ನಗಳಿಗೆ ಅಮೆರಿಕಾ ರಾಷ್ಟ್ರ ದೊಡ್ಡ ಅಡ್ಡಿಯಾಗಿದೆಎಂದು ಹೇಳಿದರು.

Follow KannadaPrabha channel on WhatsApp

Download the KannadaPrabha News app to follow the latest news updates

Subscribe and Receive exclusive content and updates on your favorite topics

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com