ಯುರೇನಿಯಂ ಹಸ್ತಾಂತರ, ಪರಮಾಣು ನಿರ್ಬಂಧ: 5 ಷರತ್ತುಗಳನ್ನು ಇರಾನ್ ಮುಂದಿಟ್ಟ ಅಮೆರಿಕ!

ಇರಾನ್‌ನ ಫಾರ್ಸ್ ನ್ಯೂಸ್ ಏಜೆನ್ಸಿಯ ವರದಿಯ ಪ್ರಕಾರ, ಹಿಂದಿನ ನಿರ್ಬಂಧಗಳು ಮತ್ತು ನೀತಿ ನಿರ್ಧಾರಗಳಿಂದ ಉಂಟಾದ ನಷ್ಟಗಳಿಗೆ ಇರಾನ್‌ಗೆ ಯಾವುದೇ ಪರಿಹಾರವನ್ನು ನೀಡಲು ವಾಷಿಂಗ್ಟನ್ ನಿರಾಕರಿಸಿದೆ
Ayatollah Ali Khamenei and Trump
ಅಯತೊಲ್ಲಾ ಅಲಿ ಖಮೇನಿ ಮತ್ತು ಟ್ರಂಪ್
Updated on

ವಾಷಿಂಗ್ಟನ್: ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಸದ್ಯ ನಡೆಯುತ್ತಿರುವ ಶಾಂತಿ ಮಾತುಕತೆ ವೇಳೆ ಇರಾನ್ ಮುಂದೆ ಐದು ಪ್ರಮುಖ ಷರತ್ತುಗಳನ್ನು ಅಮೆರಿಕ ಮುಂದಿಟ್ಟಿದೆ ಎಂದು ವರದಿಯಾಗಿದೆ.

ಇರಾನ್‌ನ ಫಾರ್ಸ್ ನ್ಯೂಸ್ ಏಜೆನ್ಸಿಯ ವರದಿಯ ಪ್ರಕಾರ, ಹಿಂದಿನ ನಿರ್ಬಂಧಗಳು ಮತ್ತು ನೀತಿ ನಿರ್ಧಾರಗಳಿಂದ ಉಂಟಾದ ನಷ್ಟಗಳಿಗೆ ಇರಾನ್‌ಗೆ ಯಾವುದೇ ಪರಿಹಾರವನ್ನು ನೀಡಲು ವಾಷಿಂಗ್ಟನ್ ನಿರಾಕರಿಸಿದೆ. ಇದರ ಜೊತೆಗೆ ಮಾತುಕತೆಗಳ ಭಾಗವಾಗಿ ಇರಾನ್ 400 ಕಿಲೋಗ್ರಾಂಗಳಷ್ಟು ಸಮೃದ್ಧ ಯುರೇನಿಯಂ ಅನ್ನು ಅಮೆರಿಕಕ್ಕೆ ಹಸ್ತಾಂತರಿಸಬೇಕೆಂದು ಅಮೆರಿಕ ಒತ್ತಾಯಿಸಿದೆ ಎಂದು ವರದಿಯಾಗಿದೆ.

ಮತ್ತೊಂದು ಷರತ್ತು ಯಾವುದೆಂದರೆ, ಇರಾನ್‌ನ ಕೇವಲ ಒಂದು ಪರಮಾಣು ಕೇಂದ್ರ ಮಾತ್ರ ಕಾರ್ಯನಿರ್ವಹಿಸುತ್ತಿರಬೇಕು. ವಶಕ್ಕೆ ಪಡೆದ ಇರಾನ್ ನ ವಿದೇಶಿ ಆಸ್ತಿಗಳಲ್ಲಿ ಶೇ. 25 ರಷ್ಟನ್ನು ಬಿಡುಗಡೆ ಮಾಡುವುದನ್ನು ಸಹ ಅಮೆರಿಕ ತಿರಸ್ಕರಿಸಿದೆ ಎಂದು ಹೇಳಲಾಗುತ್ತದೆ. ಇದಲ್ಲದೆ ವಿವಿಧ ರಂಗಗಳಲ್ಲಿನ ಸಂಘರ್ಷಗಳ ಅಂತ್ಯವನ್ನು ಮಾತುಕತೆಯೊಂದಿಗೆ ಮುಂದುವರಿಸುವುದು ಮತ್ತು ಪೂರ್ಣಗೊಳಿಸುವುದು ಸೇರಿದೆ.

ಇರಾನ್ ಈ ಷರತ್ತುಗಳನ್ನು ಪೂರೈಸಿದರೂ ಸಹ ಅಮೆರಿಕ ಮತ್ತು ಇಸ್ರೇಲಿ ಆಕ್ರಮಣದ ಬೆದರಿಕೆ ಜಾರಿಯಲ್ಲಿರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಯ್ನೆಟ್‌ನ್ಯೂಸ್ ವರದಿ ಮಾಡಿದೆ. ಯುದ್ಧವನ್ನು ಕೊನೆಗೊಳಿಸಲು ಮಾತುಕತೆ ನಡೆಸುವ ಇರಾನ್‌ನ ಪ್ರಸ್ತಾವನೆಗೆ ಪ್ರತಿಕ್ರಿಯೆಯಾಗಿ ಅಮೆರಿಕ ಯಾವುದೇ ನಿರ್ದಿಷ್ಟ ರಿಯಾಯಿತಿಗಳನ್ನು ನೀಡುವಲ್ಲಿ ವಿಫಲವಾಗಿದೆ ಎಂದು ಇರಾನ್ ಮಾಧ್ಯಮ ಮೆಹರ್ ಸುದ್ದಿ ಸಂಸ್ಥೆ ಹೇಳಿದೆ.

ವಿಶೇಷವಾಗಿ ಲೆಬನಾನ್‌ನಲ್ಲಿ ಸಂಘರ್ಷಗಳನ್ನು ಕೊನೆಗೊಳಿಸುವುದು, ಇರಾನ್ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವುದು ಮತ್ತು ಸ್ಥಗಿತಗೊಂಡ ಇರಾನಿನ ನಿಧಿ ಬಿಡುಗಡೆ ಮಾಡುವುದು ಸಹ ಅಮೆರಿಕದ ಷರತ್ತುಗಳಲ್ಲಿ ಸೇರಿವೆ ಎಂದು ಇರಾನ್ ಮಾಧ್ಯಮಗಳು ಹೇಳಿವೆ. ಯುದ್ಧ-ಸಂಬಂಧಿತ ಹಾನಿಗಳಿಗೆ ಪರಿಹಾರ ಮತ್ತು ಪ್ರಮುಖ ಜಾಗತಿಕ ತೈಲ ಹಡಗು ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೇಲಿನ ತನ್ನ ಸಾರ್ವಭೌಮತ್ವವನ್ನು ಗುರುತಿಸುವಂತೆ ಇರಾನ್ ಒತ್ತಾಯಿಸಿದೆ.

ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಕೈ, ಅಮೆರಿಕ ಮಿಲಿಟರಿ ಗುರಿಗಳನ್ನು ಮುಚ್ಚಿಕೊಳ್ಳಲು ರಾಜತಾಂತ್ರಿಕತೆಯನ್ನು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.

Ayatollah Ali Khamenei and Trump
ಚಂಡಮಾರುತಕ್ಕೂ ಮೊದಲು ಶಾಂತವಾಗಿರುತ್ತೆ: ಇರಾನ್ ವಿರುದ್ಧ ಮತ್ತೆ ದಾಳಿ ಕುರಿತಂತೆ ಟ್ರಂಪ್ ಎಚ್ಚರಿಕೆ

ಈ ಮಧ್ಯೆ ಹೊಸದಾಗಿ ಯಾವುದೇ ಮಿಲಿಟರಿ ಕಾರ್ಯಾಚರಣೆಗೆ ಮುಂದಾದರೆ ತೀವ್ರ ಹೊಡೆತ ಎದುರಿಸಬೇಕಾಗುತ್ತದೆ ಎಂದು ಇರಾನ್‌ನ ಸಶಸ್ತ್ರ ಪಡೆಗಳ ವಕ್ತಾರರು ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com