2050ರ ವೇಳೆಗೆ Pak ವಿಶ್ವದ 6ನೇ ಅತಿದೊಡ್ಡ ಆರ್ಥಿಕತೆ ಆಗಲಿದೆ: PM ಶಹಬಾಜ್ ಷರೀಫ್

ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ತಮ್ಮ ದೇಶಕ್ಕಾಗಿ ಎಷ್ಟು ದೊಡ್ಡ ಕನಸು ಕಾಣುತ್ತಾರೆಂದರೆ ಅವರ ಮಾತುಗಳು ಕೆಲವೊಮ್ಮೆ ಹಾಸ್ಯಾಸ್ಪದವಾಗುತ್ತವೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಬ್ರಹ್ಮೋಸ್ ಕ್ಷಿಪಣಿಗಳಿಂದ ಹೊಡೆದ...
Shehbaz Sharif
ಶಹಬಾಜ್ ಷರೀಫ್
Updated on: 

ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ತಮ್ಮ ದೇಶಕ್ಕಾಗಿ ಎಷ್ಟು ದೊಡ್ಡ ಕನಸು ಕಾಣುತ್ತಾರೆಂದರೆ ಅವರ ಮಾತುಗಳು ಕೆಲವೊಮ್ಮೆ ಹಾಸ್ಯಾಸ್ಪದವಾಗುತ್ತವೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಬ್ರಹ್ಮೋಸ್ ಕ್ಷಿಪಣಿಗಳಿಂದ ಹೊಡೆದ ನಂತರ ಅವರು ತಮ್ಮ ದೇಶವನ್ನು ವಿಜಯಶಾಲಿ ಎಂದು ಘೋಷಿಸಿದ್ದು ತಮಾಷೆಯಂತೆ ಕಾಣುತ್ತಿತ್ತು. ಈಗ ಭಾರತದ ಬೆಳೆಯುತ್ತಿರುವ ಆರ್ಥಿಕತೆ ಕಂಡು ಬೆಪ್ಪಾಗಿರುವ ಷರೀಷ್, 2050ರ ವೇಳೆಗೆ ಪಾಕಿಸ್ತಾನವನ್ನು ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವುದಾಗಿ ಹೇಳಿಕೊಂಡಿದ್ದಾರೆ.

ಇಸ್ಲಾಮಾಬಾದ್‌ನಲ್ಲಿ ನಡೆದ ಪಾಕಿಸ್ತಾನ ಖನಿಜ ಹೂಡಿಕೆ ವೇದಿಕೆ 2026 ಅನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ತಾನ ಅತಿದೊಡ್ಡ ಆರ್ಥಿಕತೆ ಆಗಲಿದೆ ಎಂದು ಅಮೇರಿಕನ್ ಹಣಕಾಸು ಕಂಪನಿ ಗೋಲ್ಡ್‌ಮನ್ ಸ್ಯಾಚ್ಸ್ ವರದಿಯಲ್ಲಿ ನೀಡಲಾಗಿದೆ. ಷರೀಫ್ ಈ ಅಂದಾಜನ್ನು ಪರಿಷ್ಕರಿಸಿದರು. ಪಾಕಿಸ್ತಾನವು ಈ ಮೈಲಿಗಲ್ಲನ್ನು ತಲುಪಲು 2075ರವರೆಗೆ ಕಾಯಬೇಕಾಗಿಲ್ಲ. 2050ರ ಮೊದಲು ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಹೇಳಿದರು. ಪಾಕಿಸ್ತಾನ ಆರ್ಥಿಕ ಸುಧಾರಣೆಗಾಗಿ ಶ್ರಮಿಸುತ್ತಿರುವ ಸಮಯದಲ್ಲಿ ಅವರ ಹೇಳಿಕೆ ಬಂದಿದೆ. ಆದರೆ ದೇಶವು ಗಮನಾರ್ಹ ವಿದೇಶಿ ಸಾಲ ಮತ್ತು ಆರ್ಥಿಕ ಒತ್ತಡದಲ್ಲಿದೆ.

Shehbaz Sharif
ಅಮೆರಿಕನ್ ಹಿಂದೂಗಳ ಸುರಕ್ಷತೆ ಮುಖ್ಯ: ಓಂ ಶಕ್ತಿ ದೇವಸ್ಥಾನದಲ್ಲಿ ಮಾತನಾಡಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ, Video

ಗೋಲ್ಡ್‌ಮನ್ ಸ್ಯಾಚ್ಸ್ ವರದಿಯಲ್ಲಿ ಏನಿದೆ?

ತಮ್ಮ ಭಾಷಣದಲ್ಲಿ ಶಹಬಾಜ್ ಷರೀಫ್ ಡಿಸೆಂಬರ್ 2022ರಲ್ಲಿ ಬಿಡುಗಡೆಯಾದ ಗೋಲ್ಡ್‌ಮನ್ ಸ್ಯಾಚ್ಸ್ ವರದಿಯನ್ನು ಉಲ್ಲೇಖಿಸಿದರು. ದಿ ಪಾತ್ ಟು 2075 ಎಂಬ ಶೀರ್ಷಿಕೆಯ ವರದಿಯು 2075ರ ವೇಳೆಗೆ ಪಾಕಿಸ್ತಾನದ ಆರ್ಥಿಕತೆಯು ವಿಶ್ವದ ಆರನೇ ಸ್ಥಾನವನ್ನು ತಲುಪಬಹುದು ಎಂದು ಹೇಳಿದೆ. ಆ ಸಮಯದಲ್ಲಿ ಪಾಕಿಸ್ತಾನದ GDP ಸುಮಾರು 12.7 ಟ್ರಿಲಿಯನ್ ಡಾಲರ್ ಮತ್ತು ತಲಾ ಆದಾಯ 27,100 ಡಾಲರ್ ಎಂದು ಅಂದಾಜಿಸಲಾಗಿದೆ. ಆದಾಗ್ಯೂ, ಇವು ಕೇವಲ ಅಂದಾಜುಗಳಾಗಿದ್ದವು, ನಿರ್ಣಾಯಕ ಮುನ್ಸೂಚನೆಗಳಲ್ಲ. ಪಾಕಿಸ್ತಾನದ ಪ್ರಗತಿಯು ಅದರ ನೀತಿಗಳು, ಅಭಿವೃದ್ಧಿ ಮತ್ತು ಸುಧಾರಣೆಯ ದಿಕ್ಕನ್ನು ಅವಲಂಬಿಸಿರುತ್ತದೆ ಎಂದು ವರದಿಯು ಸ್ಪಷ್ಟವಾಗಿ ಹೇಳಿದೆ.

ಪ್ರಸ್ತುತ ಪರಿಸ್ಥಿತಿ ಸಾಕಷ್ಟು ಭಿನ್ನವಾಗಿದೆ. ಪಾಕಿಸ್ತಾನದ ಸಾರ್ವಜನಿಕ ಸಾಲವು ಪ್ರಸ್ತುತ ಸುಮಾರು 86.72 ಟ್ರಿಲಿಯನ್ ಪಾಕಿಸ್ತಾನಿ ರೂಪಾಯಿಗಳು ಅಥವಾ ಸರಿಸುಮಾರು $290 ಬಿಲಿಯನ್ ಎಂದು ಅಂದಾಜಿಸಲಾಗಿದೆ. ದೇಶವು ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಸಾಲಗಳು ಮತ್ತು ಆರ್ಥಿಕ ಸುಧಾರಣೆಗಳ ಮೇಲೆ ಅವಲಂಬಿತವಾಗಿದೆ. ಇದಲ್ಲದೆ, ಹವಾಮಾನ ಬದಲಾವಣೆ, ರಾಜಕೀಯ ಅಸ್ಥಿರತೆ ಮತ್ತು ದುರ್ಬಲ ಆರ್ಥಿಕ ಮೂಲಸೌಕರ್ಯವು ಗಮನಾರ್ಹ ಸವಾಲುಗಳನ್ನು ಒಡ್ಡುತ್ತದೆ. ಅಂತಹ ಸಂದರ್ಭಗಳಲ್ಲಿ ಶಹಬಾಜ್ ಷರೀಫ್ ಅವರ ಹೇಳಿಕೆಗಳು ತಿರುಕನ ಕನಸು ಕಾಣುವಂತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X