ಫ್ಲೈದುಬೈ ದಾಳಿ 'ಭಯೋತ್ಪಾದಕ ಕೃತ್ಯ': ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ 'ನಿಜವಾದ ಹೀರೋ' UAE ಶ್ಲಾಘನೆ!

ಫ್ಲೈದುಬೈ ದಾಳಿಯನ್ನು ಭಯೋತ್ಪಾದಕ ಕೃತ್ಯ ಎಂದು UAE ಘೋಷಿಸಿದ್ದು ವಿಮಾನವನ್ನು ಅಪಘಾತದಿಂದ ರಕ್ಷಿಸಿ ಶೌರ್ಯ ಮೆರೆದ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಅವರನ್ನು ಶ್ಲಾಘಿಸಿದೆ.
Smit Machchhar
ಪೈಲಟ್ ಸ್ಮಿತ್ ಮಚ್ಚರ್
Updated on: 

ಅಬುಧಾಬಿ: ಫ್ಲೈದುಬೈ ದಾಳಿಯನ್ನು ಭಯೋತ್ಪಾದಕ ಕೃತ್ಯ ಎಂದು UAE ಘೋಷಿಸಿದ್ದು ವಿಮಾನವನ್ನು ಅಪಘಾತದಿಂದ ರಕ್ಷಿಸಿ ಶೌರ್ಯ ಮೆರೆದ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಅವರನ್ನು ಶ್ಲಾಘಿಸಿದೆ. ಗಂಭೀರ ಭಯೋತ್ಪಾದಕ ಘಟನೆಯನ್ನು ಧೈರ್ಯದಿಂದ ನಿರ್ವಹಿಸಿದ್ದಕ್ಕಾಗಿ ಮತ್ತು ಸಂಭಾವ್ಯ ವಿಪತ್ತಿನ ವಿರುದ್ಧ ಧೈರ್ಯಶಾಲಿಯಾಗಿ ಹೋರಾಡಿದ ಮಚ್ಚರ್ ಅವರು ನಿಜವಾದ ಹೀರೋ ಎಂದು ಯುಎಇ ಅಧ್ಯಕ್ಷರ ಸಲಹೆಗಾರರು ಕರೆದಿದ್ದಾರೆ. ಉಗ್ರವಾದ ಮತ್ತು ಭಯೋತ್ಪಾದನೆಯ ವಿರುದ್ಧ ಜಾಗರೂಕತೆ ಮತ್ತು ಎಚ್ಚರಿಕೆ ಅತ್ಯಗತ್ಯ ಎಂದು ಹೇಳಿದ್ದಾರೆ. ಘಟನೆಯ ನಂತರ ಹೆಚ್ಚಿನ ಜಾಗರೂಕತೆಯ ಬಗ್ಗೆ ಎಚ್ಚರಿಕೆ ನೀಡಿದರು. ಘಟನೆಯ ನಂತರ ಯುಎಇ ಅಧಿಕಾರಿಯೊಬ್ಬರು ಫ್ಲೈದುಬೈ ವಿಮಾನವನ್ನು ಅಪಘಾತಕ್ಕೀಡುಮಾಡಲು ಯತ್ನಿಸಿದ ಆರೋಪವನ್ನು ಭಯೋತ್ಪಾದಕ ದಾಳಿ ಎಂದು ಬಣ್ಣಿಸಿರುವುದು ಇದೇ ಮೊದಲು.

ಸೆಪ್ಟೆಂಬರ್ 30ರಂದು ದುಬೈನಿಂದ ಟೆಲ್ ಅವೀವ್‌ಗೆ ಪ್ರಯಾಣಿಸುತ್ತಿದ್ದಾಗ ವಿಮಾನದ ಕಾಕ್‌ಪಿಟ್‌ನಲ್ಲಿ ಸಹ ಪೈಲಟ್, ಮುಖ್ಯ ಪೈಲಟ್ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದನು. ಈ ಘಟನೆ ಬೆನ್ನಲ್ಲೇ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್‌ಗೆ ತಿರುಗಿಸಲಾಯಿತು. ಇನ್ನು ಪೈಲಟ್ ಸ್ಮಿತ್ ಮಚ್ಚರ್ ಗಂಭೀರವಾಗಿ ಗಾಯಗೊಂಡಿದ್ದರೂ ವಿಮಾನದ ಕಾಕ್ ಪಿಟ್ ಡೋರ್ ಓಪನ್ ಮಾಡುವ ಮೂಲಕ ದೊಡ್ಡ ವಿಪತ್ತನ್ನು ತಡೆದಿದ್ದರು. ಕಾಕ್ ಪಿಟ್ ನಲ್ಲಿ ಘಟನೆ ಬೆನ್ನಲ್ಲೇ ಒಳಗೆ ನುಗ್ಗಿದ ಪ್ರಯಾಣಿಕರು ಸಹ ಪೈಲಟ್ ನನ್ನು ಹಿಡಿದುಕೊಂಡು ವಿಮಾನ ಪತನವಾಗುವುದನ್ನು ತಪ್ಪಿಸಿದ್ದರು.

Smit Machchhar
'ಒಂದೇ ಒಂದು ಪೋಸ್ಟ್ ಕೂಡ ಮಾಡಿಲ್ಲ: ಸ್ಮಿತ್ ಮಚ್ಚರ್ ವಿಚಾರದಲ್ಲಿ ರಾಹುಲ್ ಗಾಂಧಿಯ ಮೌನವನ್ನು ಪ್ರಶ್ನಿಸಿದ ಕಿಶನ್ ರೆಡ್ಡಿ!

ಯುಎಇ ಫ್ಲೈದುಬೈ ವಿಮಾನದಲ್ಲಿ ನಡೆದ ಇರಿತ ಘಟನೆಯ ತನಿಖೆಗೆ ಆದೇಶಿಸಿದ್ದು ಯಾವುದೇ ಭಯೋತ್ಪಾದಕ ಸಂಪರ್ಕಗಳ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದೆ. ವಿಮಾನವು ದೇಶದಲ್ಲಿ ನೋಂದಾಯಿಸಲ್ಪಟ್ಟಿದ್ದರಿಂದ ಘಟನೆಯ ಸಂದರ್ಭಗಳು ಮತ್ತು ಕಾರಣಗಳನ್ನು ತನಿಖೆ ಮಾಡಲು ತಂಡವನ್ನು ರಚಿಸಲಾಗುವುದು ಎಂದು ಯುಎಇ ವಿದೇಶಾಂಗ ಸಚಿವಾಲಯ ತಿಳಿಸಿದೆ. ಘಟನೆಯ ಸಂದರ್ಭಗಳು ಮತ್ತು ಕಾರಣಗಳನ್ನು ತನಿಖೆ ಮಾಡಲು ಯುಎಇ ಅಟಾರ್ನಿ-ಜನರಲ್ ಕೌನ್ಸೆಲರ್ ಡಾ. ಹಮದ್ ಅಲ್ ಶಮ್ಸಿ ಅವರು ಪಬ್ಲಿಕ್ ಪ್ರಾಸಿಕ್ಯೂಷನ್‌ನ ನಿರ್ದಿಷ್ಟ ಸದಸ್ಯರನ್ನು ಒಳಗೊಂಡ ತಂಡವನ್ನು ರಚಿಸುವಂತೆ ಆದೇಶಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ ಎಂದು ಸಚಿವಾಲಯ Xನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com