West Asia War: ರಾಜತಾಂತ್ರಿಕ ಒಪ್ಪಂದಕ್ಕೆ ಬರದಿದ್ದರೆ ಮತ್ತೊಂದು ‘ಎಪಿಕ್ ಫ್ಯೂರಿ’ ಖಚಿತ: ಇರಾನ್‌ಗೆ ಟ್ರಂಪ್ ಕಠಿಣ ಎಚ್ಚರಿಕೆ..!

ನಾವು ಮತ್ತೊಂದು ‘ಎಪಿಕ್ ಫ್ಯೂರಿ’ ಕಾರ್ಯಾಚರಣೆ ನಡೆಸಬಹುದು ಅಥವಾ ಅವರು ಒಪ್ಪಂದಕ್ಕೆ ಒಪ್ಪಿಕೊಳ್ಳಬಹುದು. ಮಾತುಕತೆ ವಿಫಲವಾದರೆ ಸೇನಾ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂಬ ಸುಳಿವನ್ನು ನೀಡಿದರು.
US President Donald Trump
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Updated on: 

ವಾಷಿಂಗ್ಟನ್: ರಾಜತಾಂತ್ರಿಕ ಒಪ್ಪಂದಕ್ಕೆ ಬರದಿದ್ದರೆ ಮತ್ತೊಮ್ಮೆ ಭಾರೀ ಸೇನಾದಾಳಿ ನಡೆಸುವುದಾಗಿ ಇರಾನ್'ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್ಚರಿಕೆ ನೀಡಿದ್ದಾರೆ.

ಒಪ್ಪಂದಕ್ಕೆ ಒಪ್ಪದಿದ್ದರೆ ಇರಾನ್ ವಿರುದ್ಧ ಮತ್ತೊಂದು ‘ಎಪಿಕ್ ಫ್ಯೂರಿ’ ಕಾರ್ಯಾಚರಣೆ ನಡೆಸಬಹುದು ಎಂದು ಡೊನಾಲ್ಟ್ ಟ್ರಂಪ್ ಅವರು ಹೇಳಿದ್ದಾರೆ.

ಫ್ಲೋರಿಡಾದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ತಮ್ಮ ಹಿಂದಿನ ರಾಷ್ಟ್ರೀಯ ಭದ್ರತಾ ನಿರ್ಧಾರಗಳನ್ನು ಪ್ರಸ್ತಾಪಿಸುವುದರ ಜೊತೆಗೆ ಇರಾನ್ ನಾಯಕತ್ವದ ವಿರುದ್ಧ ವಾಗ್ದಾಳಿ ನಡೆಸಿದರು.

ನಾವು ಮತ್ತೊಂದು ಸಣ್ಣ ಪ್ರಮಾಣದ ‘ಎಪಿಕ್ ಫ್ಯೂರಿ’ ಕಾರ್ಯಾಚರಣೆ ನಡೆಸಬಹುದು ಅಥವಾ ಅವರು ಒಪ್ಪಂದಕ್ಕೆ ಒಪ್ಪಿಕೊಳ್ಳಬಹುದು. ಮಾತುಕತೆ ವಿಫಲವಾದರೆ ಸೇನಾ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂಬ ಸುಳಿವನ್ನು ಅವರು ನೀಡಿದರು.

ಇದೇ ವೇಳೆ ಇರಾನ್‌ನ ಕಾರ್ಯತಂತ್ರದ ನಿರ್ಧಾರಗಳನ್ನು ಪ್ರಶ್ನಿಸಿದ ಟ್ರಂಪ್ ಅವರು, ಅವರು ಬುದ್ಧಿವಂತರಾಗಿದ್ದರೆ, ನಾವು ಮಾತುಕತೆ ಆರಂಭಿಸೋಣ ಎಂದು ಹೇಳುತ್ತಿದ್ದರು. ಆದರೆ, ಅವರು ಹಾಗೆ ಮಾಡುತ್ತಾರೆ ಎಂಬ ನಂಬಿಕೆ ನನಗಿಲ್ಲ. ಏಕೆಂದರೆ ಬಹುಶಃ ಅವರು ಬುದ್ಧಿವಂತರಲ್ಲ ದು ವ್ಯಂಗ್ಯವಾಡಿದರು.

ಬಳಿಕ ಕೆರಿಬಿಯನ್ ಸಮುದ್ರದಲ್ಲಿ ಅಮೆರಿಕದ ನೌಕಾಪಡೆಯ ಉಪಸ್ಥಿತಿಯನ್ನು ಪ್ರಸ್ತಾಪಿಸಿದ ಟ್ರಂಪ್, ಮಧ್ಯಪ್ರಾಚ್ಯದಿಂದ ವಾಪಸಾಗುವ ಅಮೆರಿಕದ ಯುದ್ಧನೌಕೆಗಳು ಕ್ಯೂಬಾ ಬಳಿ ತೆರಳಬಹುದು ಎಂಬ ರೀತಿಯಲ್ಲಿ ಮಾತನಾಡಿದರು. ಅಲ್ಲದೆ, ಫ್ಲೋರಿಡಾದ ಸೆನೆಟರ್ ಮಾರ್ಕೊ ರೂಬಿಯೊ ಅವರನ್ನು ಕಳುಹಿಸಿ ರಾಜತಾಂತ್ರಿಕ ಉದ್ದೇಶಗಳನ್ನು ಪೂರ್ಣಗೊಳಿಸುವುದಾಗಿ ಹಾಸ್ಯಭರಿತವಾಗಿ ಹೇಳಿದರು.

US President Donald Trump
ನೊಬೆಲ್ ಕನಸು ಭಗ್ನ: ಮತ್ತೊಂದು ಪುರಸ್ಕಾರದ ಮೇಲೆ ಟ್ರಂಪ್ ಕಣ್ಣು; ನನ್ನ ಬರವಣಿಗೆಗೆ ಪುಲಿಟ್ಜರ್ ಪ್ರಶಸ್ತಿ ಕೊಡಬೇಕಿತ್ತು ಎಂದ ಅಮೆರಿಕ ಅಧ್ಯಕ್ಷ

ನಾವು ಇರಾನ್‌ನಿಂದ ವಾಪಸಾಗುತ್ತೇವೆ. ಆ ಸುಂದರ ಯುದ್ಧನೌಕೆಗಳು ಕ್ಯೂಬಾ ಬಳಿ ಸಾಗಲಿವೆ. ಅವುಗಳಲ್ಲಿ ಒಂದನ್ನು ಕರಾವಳಿಯಿಂದ ಸುಮಾರು 50 ಗಜಗಳಷ್ಟು ದೂರದಲ್ಲಿ ನಿಲ್ಲಿಸುತ್ತೇವೆ. ಆಗ ಅವರು ಕೈಗಳನ್ನು ಮೇಲಕ್ಕೆತ್ತುತ್ತಾರೆ. ಬಳಿಕ ಕೆಲಸವನ್ನು ಮುಗಿಸಲು ಮಾರ್ಕೊ ರೂಬಿಯೊ ಅವರನ್ನು ಕಳುಹಿಸುತ್ತೇವೆ ಎಂದು ತಿಳಿಸಿದರು.

ವಿದೇಶಗಳಲ್ಲಿ ಬಂಧನಕ್ಕೊಳಗಾಗಿದ್ದ ಅಮೆರಿಕದ ನಾಗರಿಕರನ್ನು ಸುರಕ್ಷಿತವಾಗಿ ವಾಪಸ್ ಕರೆತಂದ ತಮ್ಮ ಸಾಧನೆಯನ್ನು ಉಲ್ಲೇಖಿಸಿದ ಟ್ರಂಪ್, ಗಾಜಾ ಮತ್ತು ರಷ್ಯಾ ಸೇರಿದಂತೆ ಸಂಘರ್ಷಪೀಡಿತ ಪ್ರದೇಶಗಳಲ್ಲಿ ಒತ್ತೆಯಾಳುಗಳಾಗಿದ್ದವರ ಬಿಡುಗಡೆಗೂ ತಮ್ಮ ಆಡಳಿತ ಶ್ರಮಿಸಿದೆ ಎಂದು ಹೇಳಿದರು.

ಹಮಾಸ್ ವಶದಲ್ಲಿದ್ದ 28 ಒತ್ತೆಯಾಳುಗಳನ್ನು ಜೀವಂತವಾಗಿದ್ದವರು ಮತ್ತು ಮೃತಪಟ್ಟವರು ಸೇರಿದಂತೆ ಅವರ ಕುಟುಂಬಗಳಿಗೆ ಮರಳಿಸಿದ್ದೇವೆ. ಅದಕ್ಕೂ ಮೊದಲು ನೂರಾರು ಜನರನ್ನು ವಾಪಸ್ ಕರೆತಂದಿದ್ದೇವೆ. ನಿನ್ನೆಯಷ್ಟೇ ರಷ್ಯಾದಿಂದ ಸ್ಟೀಫನ್ ಹಬ್ಬರ್ಡ್ ಅವರನ್ನು ಮರಳಿ ಕರೆತಂದಿದ್ದೇವೆ ಎಂದು ತಿಳಿಸಿದರು.

ಇದೇ ವೇಳೆ, ದೇಶದ ವೃದ್ಧರ ಆರೈಕೆ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಅಮೆರಿಕದ ಆಡಳಿತವು ಹೊಸ ಹೂಡಿಕೆ ಘೋಷಿಸಿದೆ. ಈ ಯೋಜನೆಯಡಿ ವೃದ್ಧರ ಆರೈಕೆ ಕೇಂದ್ರಗಳಲ್ಲಿ ಕನಿಷ್ಠ 5,000 ಹೊಸ ನರ್ಸ್‌ಗಳನ್ನು ನೇಮಕ ಮಾಡಿಕೊಳ್ಳಲು 250 ಮಿಲಿಯನ್ ಡಾಲರ್, ಅಂದರೆ ಸುಮಾರು 2,200 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುವುದಾಗಿ ಟ್ರಂಪ್ ಘೋಷಿಸಿದರು.

ಇಂದು, ಅಮೆರಿಕದಾದ್ಯಂತ ವೃದ್ಧರ ಆರೈಕೆ ಕೇಂದ್ರಗಳಲ್ಲಿ ಕನಿಷ್ಠ 5,000 ಹೊಸ ನರ್ಸ್‌ಗಳನ್ನು ನೇಮಿಸಿಕೊಳ್ಳಲು ನಮ್ಮ ಆಡಳಿತವು 250 ಮಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿದೆ ಎಂದು ಘೋಷಿಸಲು ಸಂತೋಷವಾಗುತ್ತಿದೆ. ಇದರಲ್ಲಿ ಫ್ಲೋರಿಡಾ ಕೂಡ ಸೇರಿದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com