ಯುದ್ಧ, ಜೀವನ ವೆಚ್ಚ ಏರಿಕೆ ನಡುವೆ ಇಸ್ರೇಲ್ ಚುನಾವಣೆ: ಪ್ರಧಾನಿ ರೇಸ್‌ನಲ್ಲಿ ಮಾಜಿ ಸೇನಾ ಮುಖ್ಯಸ್ಥ; ನೆತನ್ಯಾಹುಗೆ ಬಿಗ್ ಶಾಕ್​!

ನೆತನ್ಯಾಹು ರಾಜಕೀಯ ಭವಿಷ್ಯ ನಿರ್ಧರಿಸಲಿರುವ ಇಸ್ರೇಲ್ ಸಾರ್ವತ್ರಿಕ ಚುನಾವಣೆಗೆ ಮಂಗಳವಾರ ಮತದಾನ ಆರಂಭವಾಗಿದೆ.
Israel Elections:  Benjamin Netanyahu Faces Eisenkot Challenge Amid Gaza War
ಗಾಡಿ ಐಸೆನ್‌ಕೋಟ್ - ಬೆಂಜಮಿನ್ ನೆತನ್ಯಾಹು
Updated on: 

ಇಸ್ರೇಲ್ ನಿರ್ಣಾಯಕ 26ನೇ ನೆಸ್ಸೆಟ್‌(ಸಂಸತ್) ಚುನಾವಣೆ ನಡೆಯುತ್ತಿದ್ದು, ಯುದ್ಧ, ಭದ್ರತೆ, ರಾಜಕೀಯ ಮತ್ತು ಆರ್ಥಿಕ ಸವಾಲುಗಳ ನಡುವೆಯೂ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೋರಾಡುತ್ತಿದ್ದಾರೆ.

ನೆತನ್ಯಾಹು ರಾಜಕೀಯ ಭವಿಷ್ಯ ನಿರ್ಧರಿಸಲಿರುವ ಇಸ್ರೇಲ್ ಸಾರ್ವತ್ರಿಕ ಚುನಾವಣೆಗೆ ಮಂಗಳವಾರ ಮತದಾನ ಆರಂಭವಾಗಿದೆ.

ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನಾಯಕತ್ವಕ್ಕೆ ಅಗ್ನಿಪರೀಕ್ಷೆಯಾಗಿರುವ ಈ ಚುನಾವಣೆಯಲ್ಲಿ, ಅವರ ‘ಲಿಕುಡ್’ ಪಕ್ಷ ಮತ್ತು ಬಲಪಂಥೀಯ ಮಿತ್ರಪಕ್ಷಗಳ ವಿರುದ್ಧ ಮಾಜಿ ಸೇನಾ ಮುಖ್ಯಸ್ಥ ಗಾಡಿ ಐಸೆನ್‌ಕೋಟ್ ನೇತೃತ್ವದ ವಿರೋಧ ಪಕ್ಷಗಳ ಮೈತ್ರಿಕೂಟ ಪ್ರಬಲ ಪೈಪೋಟಿ ನೀಡುತ್ತಿವೆ.

Israel Elections:  Benjamin Netanyahu Faces Eisenkot Challenge Amid Gaza War
'ಬಟ್ಟೆ ಹರಿದಿತ್ತು, ರಕ್ತಸ್ರಾವವಾಗುತ್ತಿತ್ತು': ಮಾಜಿ ಮಿಸ್ ಸ್ವಿಟ್ಜರ್ಲ್ಯಾಂಡ್ ಮೇಲೆ ಡೊನಾಲ್ಡ್ ಟ್ರಂಪ್ 'ಕ್ರೂರ' ಅತ್ಯಾಚಾರ!

ಇಸ್ರೇಲ್ ರಕ್ಷಣಾಪಡೆಯಲ್ಲಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಐಸೆನ್‌ಕೋಟ್, ಈಗ ನೆತನ್ಯಾಹು ಆಡಳಿತಕ್ಕೆ ನೇರ ಪೈಪೋಟಿ ನೀಡುತ್ತಿದ್ದಾರೆ.

ಮತದಾರರು ಗಾಜಾ ಯುದ್ಧ, ಅಕ್ಟೋಬರ್ 7 ರ ದಾಳಿಯ ನಂತರದ ಭದ್ರತಾ ಹೊಣೆಗಾರಿಕೆ, ಮಿಲಿಟರಿ ಬಲವಂತದ ನೀತಿಗಳು ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚ ಸೇರಿದಂತೆ ಪ್ರಮುಖ ವಿಷಯಗಳು ಈ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿವೆ.

ಮತದಾನಕ್ಕೂ ಮುನ್ನ ನೆತನ್ಯಾಹು ಅವರನ್ನು ಬೆಂಬಲಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇರಾನ್ ಅನ್ನು ಎದುರಿಸಲು ಅಗತ್ಯವಿರುವ ಯೋಧ, ಪ್ರಧಾನಿ ಎಂದರೆ ಅದು ನೆತನ್ಯಾಹು ಬಣ್ಣಿಸಿದ್ದರು.

ಯಾರು ಈ ಐಸೆನ್‌ಕೋಟ್?

ಮೊರೊಕ್ಕೊದಿಂದ ಬಂದು ನೆಲೆಸಿದ ಯಹೂದಿ ದಂಪತಿಗಳ ಮಗನಾಗಿ ಜನಿಸಿದ ಐಸೆನ್‌ಕೋಟ್, ಟಿಬೇರಿಯಾಸ್ ಮತ್ತು ಈಲಾಟ್‌ನಲ್ಲಿ ಬೆಳೆದರು. 1978 ರಲ್ಲಿ ಇಸ್ರೇಲ್ ಸೇನೆಯ (IDF) ಗೋಲಾನಿ ಬ್ರಿಗೇಡ್‌ಗೆ ಸೇರಿದ ಇವರು, ತಮ್ಮ 40 ವರ್ಷಗಳ ಸೇನಾ ಜೀವನದಲ್ಲಿ ಹಂತ-ಹಂತವಾಗಿ ಬೆಳೆದು 2015 ರಿಂದ 2019 ರವರೆಗೆ ಸೇನೆಯ ಪ್ರಧಾನ ಮುಖ್ಯಸ್ಥರಾಗಿ (Chief of Staff) ಜವಾಬ್ದಾರಿ ನಿರ್ವಹಿಸಿದರು.

2016 ರಲ್ಲಿ ಹೆಬ್ರಾನ್‌ನಲ್ಲಿ ಗಾಯಗೊಂಡಿದ್ದ ಪ್ಯಾಲಸ್ಟೈನ್ ದಾಳಿಕೋರನನ್ನು ಗುಂಡಿಕ್ಕಿ ಕೊಂದ ಇಸ್ರೇಲ್ ಸೈನಿಕ ಎಲೋರ್ ಅಜಾರಿಯಾ ಪ್ರಕರಣದ ತನಿಖೆ ಮತ್ತು ವಿಚಾರಣೆಯನ್ನು ಬೆಂಬಲಿಸುವ ಮೂಲಕ ಐಸೆನ್‌ಕೋಟ್ ಸುದ್ದಿಯಲ್ಲಿದ್ದರು. ರಾಜಕೀಯ ಒತ್ತಡಗಳ ನಡುವೆಯೂ ಸೇನಾ ಶಿಸ್ತು ಮತ್ತು ನೈತಿಕತೆಯನ್ನು ಕಾಯ್ದುಕೊಳ್ಳುವಲ್ಲಿ ಅವರು ಬದ್ಧರಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com