ಚುನಾವಣೆಯಲ್ಲಿ ಗೆದ್ದರೆ ಪ್ರತಿಯೊಬ್ಬರಿಗೂ 4 ಲಕ್ಷ! ಮತದಾರರಿಗೆ ಡಿವಿಡೆಂಡ್ ಗ್ಯಾರಂಟಿ ಘೋಷಿಸಿದ ಟ್ರಂಪ್ ಸರ್ಕಾರ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಯನ್ನು ಗೆಲ್ಲಲು ಪ್ರತಿ ವಯಸ್ಕ ಅಮೆರಿಕನ್ ಪ್ರಜೆಗೆ $5,000 (ಸುಮಾರು ₹4.2 ಲಕ್ಷ) 'ಗ್ಯಾರಂಟಿ' ಹಣ ನೀಡುವುದಾಗಿ ಘೋಷಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
American Dollar
ಅಮೆರಿಕನ್ ಡಾಲರ್Online Desk
Updated on

ವಾಷಿಂಗ್ಟನ್ ಡಿ.ಸಿ. (ಅಮೆರಿಕ): ಪ್ರತಿ ನಾಗರಿಕನ ಖಾತೆಗೆ ಬರೋಬ್ಬರಿ 4 ಲಕ್ಷ ರೂಪಾಯಿ ಜಮಾ ಆಗಲಿದೆ ಎಂದರೆ ಯಾರಿಗೆ ತಾನೇ ಅಚ್ಚರಿಯಾಗಲ್ಲ ಹೇಳಿ? ಮುಂಬರುವ ಚುನಾವಣೆಯ ಕಾವು ದಿನೇದಿನೆ ಏರುತ್ತಿರುವ ಬೆನ್ನಲ್ಲೇ ಅಮೆರಿಕ ರಾಜಕೀಯ ಅಂಗಳದಲ್ಲಿ ಇಂತಹದೊಂದು ನಂಬಲಸಾಧ್ಯವಾದ ಘೋಷಣೆ ಹೊರಬಿದ್ದಿದ್ದು, ಜಾಗತಿಕ ಮಟ್ಟದಲ್ಲಿ ಭಾರೀ ಸಂಚಲನ ಮೂಡಿಸಿದೆ. ಹೌದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಯನ್ನು ಗೆಲ್ಲಲು ಪ್ರತಿ ವಯಸ್ಕ ಅಮೆರಿಕನ್ ಪ್ರಜೆಗೆ $5,000 ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಸರಿಸುಮಾರು ₹4.2 ಲಕ್ಷ ಗ್ಯಾರಂಟಿ ಹಣ ನೀಡುವುದಾಗಿ ಘೋಷಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಅಮೆರಿಕದಲ್ಲಿ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಯನ್ನು ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತದಾರರನ್ನು ಸೆಳೆಯಲು ಭರ್ಜರಿ ಆಫರ್ ನೀಡಿದ್ದಾರೆ. ಅದರಂತೆ, ಡಲ್ಲಾಸ್‌ನಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಟ್ರಂಪ್, ಈ ಚುನಾವಣೆಯಲ್ಲಿ ತಮ್ಮ ಪಕ್ಷವು ಯುಎಸ್ ಕಾಂಗ್ರೆಸ್‌ನ ಉಭಯ ಸದನಗಳಲ್ಲಿ ಬಹುಮತ ಪಡೆದು ಅಧಿಕಾರ ಉಳಿಸಿಕೊಂಡರೆ, ಈ ಹಣವನ್ನು ಟ್ರಂಪ್ ಡಿವಿಡೆಂಡ್ ಹೆಸರಿನಲ್ಲಿ ವಿತರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಆದರೆ, ಅಮೆರಿಕನ್ನರಿಗೆ ಈ $5,000 ಸಿಗಬೇಕಾದರೆ ಮುಂಬರುವ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷವು ಉಭಯ ಸದನಗಳಲ್ಲೂ ಸಂಪೂರ್ಣ ಜಯ ಸಾಧಿಸಬೇಕು ಎಂದಿರುವ ಟ್ರಂಪ್, ಈ ಹಣವನ್ನು ಪಡೆದ ನಾಗರಿಕರು ಅದನ್ನು ಅಮೆರಿಕದ ಒಳಗಡೆಯೇ ಖರ್ಚು ಮಾಡಬೇಕೇ ಹೊರತು, ವಿದೇಶ ಪ್ರವಾಸಗಳಿಗೆ (ಕೆನಡಾ, ಚೀನಾ ಅಥವಾ ಜರ್ಮನಿ) ಬಳಸಬಾರದು ಎಂಬ ವಿಚಿತ್ರ ಷರತ್ತನ್ನು ವಿಧಿಸಿದ್ದಾರೆ.

American Dollar
7ನೇ ತಿಂಗಳಿಗೆ ಕಾಲಿಟ್ಟ US-Iran ಸಂಘರ್ಷ: ಯುದ್ಧ ಅಂತ್ಯಕ್ಕೆ ಕೌಂಟ್‌ಡೌನ್; ಇನ್ನು ಅವರ ಆಟ ನಡೆಯಲ್ಲ, ಅಮೆರಿಕ ಎಲೆಕ್ಷನ್ ಬೆನ್ನಲ್ಲೇ ಇರಾನ್'ಗೆ ಖೆಡ್ಡಾ ಎಂದ ಟ್ರಂಪ್..!

ಬಹಿರಂಗವಾಗಿ ಲಂಚದ ಆಫರ್

ಮುಂದುವರೆದು, ಟ್ರಂಪ್ ಅವರ ಈ ಘೋಷಣೆ ಹೊರಬೀಳುತ್ತಿದ್ದಂತೆ ಅಮೆರಿಕದ ರಾಜಕೀಯ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿದ್ದು, ಡೆಮೋಕ್ರಾಟ್ ಪಕ್ಷದ ನಾಯಕರು ಹಾಗೂ ರಾಜಕೀಯ ವಿಮರ್ಶಕರು ಈ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ. ಸದ್ಯ ಅಮೆರಿಕದಲ್ಲಿ ಹೆಚ್ಚುತ್ತಿರುವ ಜೀವನ ವೆಚ್ಚ ಮತ್ತು ಮಧ್ಯಪ್ರಾಚ್ಯ ಯುದ್ಧದ ಪರಿಣಾಮಗಳಿಂದ ನಾಗರಿಕರು ಆಕ್ರೋಶಗೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜನರ ಕೋಪ ತಣಿಸಲು ಮತ್ತು ಮತಗಳನ್ನು ಸೆಳೆಯಲು ಟ್ರಂಪ್ ಬಹಿರಂಗವಾಗಿಯೇ ಮತದಾರರಿಗೆ ಲಂಚ ನೀಡಲು ಮುಂದಾಗಿದ್ದಾರೆ ಎಂದು ವಿಪಕ್ಷಗಳು ಗಂಭೀರ ಆರೋಪ ಮಾಡಿವೆ.

American Dollar
ನಾವು ನೋಡುತ್ತಿರುವ World Map ತಪ್ಪಾ?ವಿಶ್ವಸಂಸ್ಥೆಯಿಂದ ಬಂತು ಹೊಸ Equal Earth ಮ್ಯಾಪ್; 164 ದೇಶ ಒಪ್ಪಿದ ಭೂಪಟವನ್ನ ಅಮೆರಿಕ ಮಾತ್ರ ವಿರೋಧಿಸಿದ್ದು ಯಾಕೆ?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com