AI ವಿರುದ್ಧ ಮನುಷ್ಯರ ಹಕ್ಕುಗಳಿಗಾಗಿ ರೋಬೋಟ್‌ ಸಮರ; ಕೃತಕ ಬುದ್ಧಿಮತ್ತೆ ನಿಯಂತ್ರಣಕ್ಕೆ 30 ರೋಬೋಟ್‌ಗಳಿಂದ ವಿಶಿಷ್ಟ ಹೋರಾಟ!

ಕೃತಕ ಬುದ್ಧಿಮತ್ತೆ ಮತ್ತು ರೋಬೋಟ್‌ಗಳು ಮನುಷ್ಯರ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿವೆ ಎಂಬ ಆತಂಕದ ನಡುವೆ ಇತ್ತೀಚೆಗೆ ಸುಮಾರು 30 ರೋಬೋಟ್‌ಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿರುವ ವಿಚಿತ್ರ ಹಾಗೂ ಅಪರೂಪದ ಘಟನೆ ನಡೆದಿದೆ. ಆ ಕುರಿತ ವರದಿ ಇಲ್ಲಿದೆ:
Robots Take to Streets in Poland Demanding Strict AI Regulations to Protect Human Jobs
AI ವಿರುದ್ಧ ಮನುಷ್ಯರ ಹಕ್ಕುಗಳಿಗಾಗಿ ರೋಬೋಟ್‌ ಸಮರOnline Desk
Updated on

ವಾರ್ಸಾ (ಪೋಲೆಂಡ್‌): ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮಿತಿಮೀರಿದ ಬೆಳವಣಿಗೆಯಿಂದ ಮಾನವರ ಉದ್ಯೋಗ ಮತ್ತು ಹಕ್ಕುಗಳಿಗೆ ಎದುರಾಗಿರುವ ಭೀತಿಯನ್ನು ಖಂಡಿಸಿ, ಪೋಲೆಂಡ್‌ನ ರಾಜಧಾನಿ ವಾರ್ಸಾ ನಗರದಲ್ಲಿ ಸುಮಾರು 30 ಹೈಟೆಕ್ ರೋಬೋಟ್‌ಗಳು ರಸ್ತೆಗಿಳಿದು ವಿಶಿಷ್ಟ ಪ್ರತಿಭಟನೆ ನಡೆಸಿವೆ. ಅದರಲ್ಲೂ, ಮಾನವರ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿರುವ ತಂತ್ರಜ್ಞಾನದ ವಿರುದ್ಧ ಸ್ವತಃ ಯಂತ್ರಗಳೇ (ರೋಬೋಟ್‌ಗಳು) ಪ್ರತಿಭಟನಾ ನಿರತರಾಗಿರುವುದು ಜಗತ್ತಿನಾದ್ಯಂತ ಭಾರಿ ಸಂಚಲನ ಮತ್ತು ಚರ್ಚೆಯನ್ನು ಸೃಷ್ಟಿಸಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

ಪೋಲೆಂಡ್‌ನ ರಾಜಧಾನಿ ವಾರ್ಸಾದಲ್ಲಿರುವ ಡಿಜಿಟಲ್ ವ್ಯವಹಾರಗಳ ಸಚಿವಾಲಯದ ಹೊರಗಡೆ,  ಎರಡು ಕಾಲುಗಳಲ್ಲಿ ನಡೆಯುವ ಹ್ಯೂಮನಾಯ್ಡ್ (ಮಾನವರೂಪಿ) ರೋಬೋಟ್‌ಗಳು, ನಾಲ್ಕು ಕಾಲುಗಳ ರೋಬೋಟ್ ನಾಯಿಗಳು ಮತ್ತು ಚಕ್ರಗಳಿರುವ ಸುಧಾರಿತ ತಂತ್ರಜ್ಞಾನದ ಯಂತ್ರಗಳು ಕೈಯಲ್ಲಿ ಬಾವುಟಗಳನ್ನು ಹಿಡಿದು ವೃತ್ತಾಕಾರದಲ್ಲಿ ಮಾರ್ಚ್ ಮಾಡುವ ಮೂಲಕ ಧರಣಿ ನಡೆಸಿವೆ. ಈ ವೇಳೆ,  ರೋಬೋಟ್‌ಗಳಿಗೆ ಅಳವಡಿಸಲಾಗಿದ್ದ ಧ್ವನಿವರ್ಧಕಗಳ ಮೂಲಕ ಕೆಲಸದ ಜಾಗಗಳನ್ನು ರಕ್ಷಿಸಿ, ನಿಯಮ ರೂಪಿಸಲು ಇದುವೇ ಸಕಾಲ ಮತ್ತು ಕಾಯಬೇಡಿ, ನಿಯಂತ್ರಿಸಿ ಎಂಬ ಸ್ಲೋಗನ್‌ಗಳು ಮೊಳಗಿದೆ. ಈ ವೇಳೆ ಮಾತನಾಡಿದ,  ಪ್ರತಿಭಟನೆಯಲ್ಲಿದ್ದ ಅಗಿಬೋಟ್ ಎ3 ಎಂಬ ಎಐ ಚಾಲಿತ ಹ್ಯೂಮನಾಯ್ಡ್ ರೋಬೋಟ್, "ತಂತ್ರಜ್ಞಾನವು ಈಗಾಗಲೇ ನಮ್ಮ ದೈನಂದಿನ ಜೀವನದ ವಾಸ್ತವತೆಯಾಗಿದೆ ಎಂಬುದನ್ನು ತೋರಿಸಲು ನಾವಿಲ್ಲಿ ಬಂದಿದ್ದೇವೆ" ಎಂದು ಹೇಳಿಕೆ ನೀಡಿದೆ.

ಹಾಗಾದ್ರೆ, ಪ್ರತಿಭಟನೆಯ ಹಿಂದಿನ ಅಸಲಿ ಉದ್ದೇಶವೇನು?

ಈ ಪ್ರತಿಭಟನೆಯನ್ನು ರೋಬೋಟ್‌ಗಳು ಸ್ವತಃ ನಿರ್ಧರಿಸಿ ಮಾಡಿಲ್ಲ. ಬದಲಿಗೆ, ಡೆಮೋಕ್ರಾಟಿಸಂ ಎಂಬ ಸಾಮಾಜಿಕ ಸಂಘಟನೆಯು ಈ ಪ್ರತಿಭಟನೆಯನ್ನು ರೂಪಿಸಿತ್ತು. ಕೃತಕ ಬುದ್ಧಿಮತ್ತೆ ಮತ್ತು ರೋಬೋಟಿಕ್ಸ್ ತಂತ್ರಜ್ಞಾನವು ಕೇವಲ ದೈಹಿಕ ಶ್ರಮದ ಕೆಲಸಗಳನ್ನಷ್ಟೇ ಅಲ್ಲದೆ, ಮಾನವರ ಆಲೋಚನಾ ಸಾಮರ್ಥ್ಯದ ಉದ್ಯೋಗಗಳನ್ನೂ ನುಂಗಿ ಹಾಕುತ್ತಿದೆ ಎಂಬುದನ್ನು ಜಗತ್ತಿಗೆ ಮನವರಿಕೆ ಮಾಡಿಕೊಡಲು ಈ ಯಂತ್ರಗಳನ್ನೇ ಬಳಸಿ ಜಾಗೃತಿ ಮೂಡಿಸಲಾಗಿದೆ.

Robots Take to Streets in Poland Demanding Strict AI Regulations to Protect Human Jobs
ಈ ದಶಕದ ಅಂತ್ಯಕ್ಕೆ AI ನಮ್ಮನ್ನೆಲ್ಲಾ ಕೊಲ್ಲುತ್ತೆ: Anthropic ಸಂಶೋಧಕ ರಾಜೀನಾಮೆ!

ಏತನ್ಮಧ್ಯೆ, ಪೋಲೆಂಡ್‌ನ ಡಿಜಿಟಲ್ ವ್ಯವಹಾರಗಳ ಸಚಿವ ಕ್ರಿಸ್ತೋಫ್ ಗಾವ್ಕೋವ್ಸ್ಕಿ ಅವರು ಖುದ್ದಾಗಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ನಿಯಂತ್ರಣವಿಲ್ಲದ AI ಮಾದರಿಗಳನ್ನು ಹ್ಯೂಮನಾಯ್ಡ್ ರೋಬೋಟ್‌ಗಳಿಗೆ ಅಳವಡಿಸುವುದು ಭವಿಷ್ಯದಲ್ಲಿ ಉದ್ಯೋಗ ಮಾರುಕಟ್ಟೆಗೆ ದೊಡ್ಡ ಸವಾಲಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಅದರಲ್ಲೂ, ಯೂರೋಪಿಯನ್ ಯೂನಿಯನ್‌ನ ಎಐ ಕಾಯ್ದೆಯಡಿ ಪೋಲೆಂಡ್ ಹೊಸ ನಿಯಮಗಳನ್ನು ಜಾರಿಗೆ ತರುತ್ತಿರುವ ಬೆನ್ನಲ್ಲೇ ಈ ಘಟನೆ ನಡೆದಿದೆ.

Robots Take to Streets in Poland Demanding Strict AI Regulations to Protect Human Jobs
ಕರ್ನಾಟಕದಲ್ಲಿ 2 ಲಕ್ಷ ಮಂದಿಗೆ ಕೃತಕ ಬುದ್ಧಿಮತ್ತೆ ತರಬೇತಿ: Anthropic ಸಹಕಾರ ಕೋರಿದ ರಾಜ್ಯ ಸರ್ಕಾರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com