ಜಾವಾ ಸಮುದ್ರದಲ್ಲಿ ಕಣ್ಮರೆಯಾದ 243 ಪ್ರಯಾಣಿಕರಿದ್ದ ಹಡಗು: 102 ಪ್ರಯಾಣಿಕರ ರಕ್ಷಣೆ, ಒಬ್ಬ ಸಾವು; 140 ಮಂದಿಗಾಗಿ ಹುಡುಕಾಟ

Java Sea Ferry Tragedy: ಇಂಡೋನೇಷ್ಯಾದ ಜಾವಾ ಕಡಲಿನಲ್ಲಿ 243 ಪ್ರಯಾಣಿಕರಿದ್ದ ವಿರ್ಗೋ ಟ್ರಾನ್ಸ್‌ಪೋರ್ಟ್ 8 ಹೆಸರಿನ ಬೃಹತ್ ಹಡಗು ಭಾನುವಾರ ಮುಂಜಾನೆ ಭೀಕರ ಹವಾಮಾನದ ನಡುವೆ ದಿಢೀರ್ ಕಣ್ಮರೆಯಾಗಿದೆ. ಆ ಕುರಿತ ವರದಿ ಇಲ್ಲಿದೆ:
Virgo Transport 8
ವಿರ್ಗೋ ಟ್ರಾನ್ಸ್‌ಪೋರ್ಟ್ 8Online Desk
Updated on

ಜಾವಾ (ಇಂಡೋನೇಷ್ಯಾ): ಇಂಡೋನೇಷ್ಯಾದ ಜಾವಾ ಕಡಲಿನಲ್ಲಿ 243 ಪ್ರಯಾಣಿಕರಿದ್ದ ವಿರ್ಗೋ ಟ್ರಾನ್ಸ್‌ಪೋರ್ಟ್ 8 (Virgo Transport 8) ಹೆಸರಿನ ಬೃಹತ್ ಹಡಗು ಭಾನುವಾರ ಮುಂಜಾನೆ ಭೀಕರ ಹವಾಮಾನದ ನಡುವೆ ದಿಢೀರ್ ಕಣ್ಮರೆಯಾಗಿದೆ. ಇನ್ನು, ಕಣ್ಮರೆಯಾಗಿದ್ದ ಹಡಗು ಕಡಲಿನಲ್ಲಿ ಮುಳುಗಿದ್ದು, ರಕ್ಷಣಾ ಪಡೆಗಳು ಭಾರಿ ಕಾರ್ಯಾಚರಣೆ ನಡೆಸಿ 102 ಜನರನ್ನು ಯಶಸ್ವಿಯಾಗಿ ರಕ್ಷಿಸಿದ್ದಾರೆ. ಈ ವೇಳೆ ಒಬ್ಬರು ಸಾವನ್ನಪ್ಪಿರುವುದು ದೃಢಪಟ್ಟಿದ್ದು, ಇನ್ನುಳಿದ ಸುಮಾರು 140 ಪ್ರಯಾಣಿಕರ ಪತ್ತೆಗಾಗಿ ತೀವ್ರ ಹುಡುಕಾಟ ಮುಂದುವರಿದಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

ಇಂಡೋನೇಷ್ಯಾದ ಜಾವಾ ಸಮುದ್ರದಲ್ಲಿ 243 ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದ ವಿರ್ಗೋ ಟ್ರಾನ್ಸ್‌ಪೋರ್ಟ್ 8 ಪ್ರಯಾಣಿಕರ ಹಡಗು, ಪೂರ್ವ ಜಾವಾದ ಸುರಬಾಯಾದಿಂದ ದಕ್ಷಿಣ ಕಾಲಿಮಂತನ್‌ನ ಬಂಜರಮಾಸಿನ್‌ಗೆ ಶನಿವಾರ ಬೆಳಗ್ಗೆ ಪ್ರಯಾಣ ಬೆಳೆಸಿತ್ತು. ಆದರೆ, ಭಾನುವಾರ ಮುಂಜಾನೆ ಸುಮಾರು 2:00 ಗಂಟೆಗೆ ಜಾವಾ ಸಮುದ್ರದಲ್ಲಿ ಭೀಕರ ಬಿರುಗಾಳಿಗೆ ಸಿಲುಕಿ ಆಪರೇಟರ್‌ಗಳೊಂದಿಗೆ ಸಂಪರ್ಕ ಕಳೆದುಕೊಂಡಿದೆ. ಸಂಪರ್ಕ ಕಡಿತಗೊಂಡ ಕೇವಲ ಎರಡು ಗಂಟೆಗಳಲ್ಲಿ ಬಂಜರಮಾಸಿನ್ ರಕ್ಷಣಾ ಸಂಸ್ಥೆ ಕಾರ್ಯಾಚರಣೆಗಿಳಿದಿದ್ದು, ವರದಿಗಳ ಪ್ರಕಾರ, ಇದುವರೆಗೆ 102 ರಿಂದ 103 ಜನರನ್ನು ಯಶಸ್ವಿಯಾಗಿ ರಕ್ಷಿಸಲಾಗಿದ್ದು, ದುರದೃಷ್ಟವಶಾತ್ ಒಬ್ಬ ಪ್ರಯಾಣಿಕ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಇನ್ನೂ 140 ಜನ ನಾಪತ್ತೆ...

ಹಡಗಿನಲ್ಲಿದ್ದ ಉಳಿದ ಸುಮಾರು 140 ಕ್ಕೂ ಹೆಚ್ಚು ಜನರನ್ನು ಪತ್ತೆಹಚ್ಚಲು ಹೆಲಿಕಾಪ್ಟರ್‌ಗಳು, ರಕ್ಷಣಾ ನೌಕೆಗಳು ಹಾಗೂ ಟಗ್‌ಬೋಟ್‌ಗಳನ್ನು ಬಳಸಿ ತೀವ್ರ ಶೋಧ ನಡೆಸಲಾಗುತ್ತಿದೆ.

Indonesian authorities reported the Virgo Transport 8 lost contact in the Java Sea while en route from Surabaya to Banjarmasin
ಜಾವಾ ಸಮುದ್ರದಲ್ಲಿ ಕಣ್ಮರೆಯಾದ 243 ಪ್ರಯಾಣಿಕರಿದ್ದ ಹಡಗುOnline Desk
Virgo Transport 8
ಭಾರತ ಮತ್ತು ಇಂಡೋನೇಷ್ಯಾ ಸಂಬಂಧ: ರಾಮಾಯಣದ ಕೊಂಡಿಯಿಂದ ರಕ್ಷಣೆಯ ತಂತಿಯವರೆಗೆ

ಏತನ್ಮಧ್ಯೆ, ಇಂಡೋನೇಷ್ಯಾದಲ್ಲಿ 17,000ಕ್ಕೂ ಹೆಚ್ಚು ದ್ವೀಪಗಳನ್ನು ಒಳಗೊಂಡಿರುವ ವಿಶ್ವದ ಅತಿದೊಡ್ಡ ದ್ವೀಪಸಮೂಹ ರಾಷ್ಟ್ರವಾಗಿದ್ದು, ಹಾಗಾಗಿ ಇಲ್ಲಿ ಸಂಚಾರಕ್ಕೆ ಹಡಗು ಮತ್ತು ಫೆರಿಗಳನ್ನು ಹೆಚ್ಚಾಗಿ ಅವಲಂಬಿಸಲಾಗಿದೆ. ಆದರೆ, ಕಟ್ಟುನಿಟ್ಟಾದ ಸುರಕ್ಷತಾ ನಿಯಮಗಳ ಕೊರತೆ ಮತ್ತು ಹಠಾತ್ ಹವಾಮಾನ ವೈಪರೀತ್ಯಗಳಿಂದಾಗಿ ಇಲ್ಲಿ ಇಂತಹ ಕಡಲ ಅಪಘಾತಗಳು ಆಗಾಗ ಸಂಭವಿಸುತ್ತಿರುತ್ತವೆ. 

Virgo Transport 8
ಇಂಡೋನೇಷ್ಯಾ: 271 ಪ್ರಯಾಣಿಕರಿದ್ದ ಫೆರ್ರಿಯಲ್ಲಿ ಹಠಾತ್ ಬೆಂಕಿ; ಕನಿಷ್ಠ 5 ಸಾವು, 41 ಪ್ರಯಾಣಿಕರು ನಾಪತ್ತೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com