ರಷ್ಯಾದಿಂದ ತೈಲ ಆಮದು: ಭಾರತದ ಮೇಲೆ ಶೇ.100 ರಷ್ಟು ಸುಂಕ ವಿಧಿಸಲು ಅಮೆರಿಕ ಸಂಸದರ ಪ್ರಸ್ತಾಪ!

ಕಳೆದ ತಿಂಗಳು ರಷ್ಯಾ ಹಾಗೂ ಇರಾನ್ ಮೇಲೆ ನಿರ್ಬಂಧ ಹೇರುವ ಮಸೂದೆಗೆ( The Lindsey O Graham Sanctioning Russia and Iran Act)ಅಮೆರಿಕ ಸಂಸತ್ 89-11 ಮತಗಳಿಂದ ಒಪ್ಪಿಗೆ ನೀಡಿತ್ತು. ಇದು ಈಗ ಪ್ರತಿನಿಧಿಗಳ ಸಭೆ(House of Representatives) ಮುಂದಿದೆ.
PM modi, Donald Trump
ಪ್ರಧಾನಿ ಮೋದಿ, ಡೊನಾಲ್ಡ್ ಟ್ರಂಪ್ ಸಾಂದರ್ಭಿಕ ಚಿತ್ರ
Updated on

ವಾಷಿಂಗ್ಟನ್: ಭಾರತ ಸೇರಿದಂತೆ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ದೇಶಗಳನ್ನು ಶೇ.100 ರಷ್ಟು ಸುಂಕ ನಿರ್ಬಂಧ ಹೇರುವ ಕಾನೂನಿಗೆ ಸೇರಿಸಬೇಕು ಎನ್ನುವ ತಿದ್ದುಪಡಿಗೆ ಅಮೆರಿಕ ಸಂಸದರು ಸೂಚಿಸಿದ್ದಾರೆ. ಅಲ್ಲದೇ ತೆರಿಗೆ ವಿಧಿಸುವ ಪ್ರಸ್ತಾಪವನ್ನೇ ತೆಗೆದುಹಾಕಬೇಕು ಎನ್ನುವ ತಿದ್ದುಪಡಿಯನ್ನು ಕೆಲವು ಸಂಸದರು ಮುಂದಿಟ್ಟಿದ್ದಾರೆ.

ಕಳೆದ ತಿಂಗಳು ರಷ್ಯಾ ಹಾಗೂ ಇರಾನ್ ಮೇಲೆ ನಿರ್ಬಂಧ ಹೇರುವ ಮಸೂದೆಗೆ( The Lindsey O Graham Sanctioning Russia and Iran Act)ಅಮೆರಿಕ ಸಂಸತ್ 89-11 ಮತಗಳಿಂದ ಒಪ್ಪಿಗೆ ನೀಡಿತ್ತು. ಇದು ಈಗ ಪ್ರತಿನಿಧಿಗಳ ಸಭೆ(House of Representatives) ಮುಂದಿದೆ.

ಮಸೂದೆ ಕಾನೂನಾಗಬೇಕಾದರೆ ಮೊದಲು ಪ್ರತಿನಿಧಿಗಳ ಸಭೆಯಲ್ಲಿ ಅಂಗೀಕಾರಗೊಳ್ಳಬೇಕು. ಬಳಿಕ ಅಧ್ಯಕ್ಷರ ಸಹಿಗೆ ಕಳುಹಿಸಲಾಗುತ್ತದೆ. ನವೆಂಬರ್ 3 ರಂದು ನಡೆಯಲಿರುವ ಮಧ್ಯಂತರ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿನಿಧಿಗಳ ಸಭೆ ಶೀಘ್ರದಲ್ಲೇ ರಜೆಗೆ ತೆರಳಲಿದ್ದು, ಅದಕ್ಕೂ ಮುನ್ನ ಕೇವಲ ನಾಲ್ಕು ದಿನಗಳು ಮಾತ್ರ ಉಳಿದಿವೆ.

PM modi, Donald Trump
ರಷ್ಯಾದಿಂದ ತೈಲ ಖರೀದಿ: ಭಾರತದ ಮೇಲೆ ಶೇ.100 ರಷ್ಟು ಸುಂಕ ವಿಧಿಸುವ ಮಸೂದೆಗೆ 60 ಯುಎಸ್ ಸೆನೆಟರ್‌ಗಳ ಬೆಂಬಲ!

ಈ ಮಸೂದೆಯು ರಷ್ಯಾದ ನಾಯಕತ್ವ ಮತ್ತು ಇಂಧನ ವಲಯದ ಮೇಲೆ ನಿರ್ಬಂಧ ವಿಧಿಸುವುದಲ್ಲದೆ, ರಷ್ಯಾದ ತೈಲ ಸಾಗಣೆಗೆ ನೆರವಾಗುತ್ತಿರುವ ಹಡಗುಗಳ ಗುಪ್ತಜಾಲಗಳ ಮೇಲೂ ನಿರ್ಬಂಧ ವಿಧಿಸುತ್ತದೆ.

ಈ ನಡುವೆ ಡೆಮಾಕ್ರಟಿಕ್ ಪಕ್ಷದ ಸಂಸದ ಸ್ಟೆನಿ ಹೋಯರ್ ಮಂಡಿಸಿರುವ ತಿದ್ದುಪಡಿಯಲ್ಲಿ ಶೇ. 100ರಷ್ಟು ಸುಂಕ ವಿಧಿಸಬಹುದಾದ ರಾಷ್ಟ್ರಗಳನ್ನು ಸ್ಪಷ್ಪವಾಗಿ ಹೆಸರಿಸಲಾಗಿದೆ. ಚೀನಾ, ಭಾರತ, ಟರ್ಕಿ, ಅಜರ್ ಬೈಜಾನ್, ಹಂಗೇರಿ, ಸ್ಲೋವಾಕ್ ಗಣರಾಜ್ಯ, ಯುನೈಟೆಡ್ ಅರಬ್ ಎಮಿರೇಟ್ಸ್, ಸಿಂಗಪುರ, ಕಜಕಿಸ್ತಾನ ಮತ್ತು ಕಿರ್ಗಿಜ್ ಗಣರಾಜ್ಯಗಳು ಈ ಪಟ್ಟಿಯಲ್ಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com