ಉಕ್ರೇನ್ ಯುದ್ಧದಲ್ಲಿ ರಷ್ಯಾ ಪರ ಭಾರತೀಯರು? ಪುಟಿನ್ ವಿರುದ್ಧ ಝೆಲೆನ್ಸ್ಕಿ ಗಂಭೀರ ಆರೋಪ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು, ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ತನ್ನ ಸೈನಿಕರಷ್ಟೇ ಅಲ್ಲದೆ ಭಾರತ ಸೇರಿದಂತೆ ಬರೋಬ್ಬರಿ 47 ದೇಶಗಳ ನಾಗರಿಕರನ್ನು ವಂಚಿಸಿ ಬಳಸಿಕೊಳ್ಳುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
Zelenskyy Slams Russia at UNGA for Luring Foreigners into War
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿOnline Desk
Updated on

ನ್ಯೂಯಾರ್ಕ್‌ (ಅಮೆರಿಕ): ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ದಕ್ಕೆ 4 ವರ್ಷಗಳು ಮತ್ತು 7 ತಿಂಗಳುಗಳು. ಆದರೂ ಈ ಯುದ್ದ ಕೊನೆಯಾಗೋ ಲಕ್ಷಣಗಳು ಕಾಣಿಸುತ್ತಿಲ್ಲ! ಇದರ ನಡುವೆಯೇ, ರಷ್ಯಾ ಮೇಲೆ ಗಂಭೀರವಾದ ಆರೋಪ ಮಾಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು, ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ತನ್ನ ಸೈನಿಕರಷ್ಟೇ ಅಲ್ಲದೆ ಭಾರತ ಸೇರಿದಂತೆ ಬರೋಬ್ಬರಿ 47 ದೇಶಗಳ ನಾಗರಿಕರನ್ನು ವಂಚಿಸಿ ಬಳಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (UNGA) 81ನೇ ಅಧಿವೇಶನದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಉಕ್ರೇನ್ ಗಡಿಯಲ್ಲಿ ಮರಣ ಹೊಂದುತ್ತಿರುವವರಲ್ಲಿ ರಷ್ಯನ್ನರು ಮಾತ್ರವಲ್ಲದೆ, ಜಗತ್ತಿನ ಬೇರೆ ಬೇರೆ ದೇಶಗಳ ನಾಗರಿಕರೂ ಇದ್ದಾರೆ. ರಷ್ಯಾವು ಹಣಕಾಸಿನ ಆಮಿಷ, ನಕಲಿ ಉದ್ಯೋಗ ಸೌಕರ್ಯ ಅಥವಾ ಶಿಕ್ಷಣದ ಭರವಸೆಗಳನ್ನು ನೀಡಿ, ಮೋಸ ಹಾಗೂ ತಂತ್ರಗಳ ಮೂಲಕ ವಿದೇಶಿಗರನ್ನು ತನ್ನ ದೇಶಕ್ಕೆ ಕರೆಸಿಕೊಂಡು ಬಲವಂತವಾಗಿ ಯುದ್ಧಭೂಮಿಗೆ ತಳ್ಳುತ್ತಿದೆ ಎಂದು ಝೆಲೆನ್ಸ್ಕಿ ದೂರಿದ್ದಾರೆ.

ಉಕ್ರೇನ್ ಯುದ್ಧದಲ್ಲಿ ಭಾರತ ಸೇರಿದಂತೆ 47 ರಾಷ್ಟ್ರಗಳ ನಾಗರಿಕರು

ಮುಂದುವರೆದು, ಉಕ್ರೇನ್ ಸೇನೆಯು ಕೇವಲ ಉತ್ತರ ಕೊರಿಯಾದ ಸೈನಿಕರನ್ನು ಮಾತ್ರವಲ್ಲದೆ, ಬೇರೆ ಬೇರೆ ದೇಶಗಳ ಪ್ರಜೆಗಳನ್ನು ಯುದ್ಧ ಕೈದಿಗಳಾಗಿ ಸೆರೆಹಿಡಿದಿದೆ. ಅದರಂತೆ, ರಷ್ಯಾದ ಸೇನೆಯಲ್ಲಿ ಭಾರತ, ನೇಪಾಳ, ಘಾನಾ, ತಜಕಿಸ್ತಾನ, ಯೆಮೆನ್, ಕೀನ್ಯಾ, ಜಿಂಬಾಬ್ವೆ, ಕ್ಯೂಬಾ, ಬೆಲಾರಸ್, ಸುಡಾನ್ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ 47 ರಾಷ್ಟ್ರಗಳ ನಾಗರಿಕರು ಸಿಲುಕಿಕೊಂಡಿದ್ದಾರೆ ಎಂದ ಝೆಲೆನ್ಸ್ಕಿ, "ರಷ್ಯಾ ನಿಮ್ಮ ನಾಗರಿಕರೊಂದಿಗೆ ಏನು ಮಾಡುತ್ತಿದೆ ಎಂದು ನಿಮಗೆ ತಿಳಿದಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಈ ಹುಚ್ಚುತನದ ಯುದ್ಧಕ್ಕಾಗಿ ನಿಮ್ಮ ದೇಶದ ಜನರ ಜೀವಗಳನ್ನು ಬಲಿ ಕೊಡಬೇಡಿ. ಅವರನ್ನು ತಕ್ಷಣವೇ ರಕ್ಷಿಸಿ" ಎಂದು ಮನವಿ ಮಾಡಿದ್ದಾರೆ.

Zelenskyy Slams Russia at UNGA for Luring Foreigners into War
ನಾವು 'ಭಯೋತ್ಪಾದನೆಯ ಸಂತ್ರಸ್ತರು, ಆದರೆ ಮಂಡಿಯೂರಿ ಶರಣಾಗಲಿಲ್ಲ; UN ಸಾಮಾನ್ಯ ಸಭೆಯಲ್ಲಿ ಇರಾನ್ ಅಧ್ಯಕ್ಷರ ಪ್ರಬಲ ಭಾಷಣ!

ಇದೇ ಸಂದರ್ಭದಲ್ಲಿ, ರಷ್ಯಾಕ್ಕೆ ಆರ್ಥಿಕವಾಗಿ ಬೆಂಬಲ ನೀಡುತ್ತಿರುವ ದೇಶಗಳ ವಿರುದ್ಧವೂ ಅಸಮಾಧಾನ ಹೊರಹಾಕಿದ ಝೆಲೆನ್ಸ್ಕಿ, "ಯಾರಾದರೂ ರಷ್ಯಾದೊಂದಿಗೆ ವ್ಯಾಪಾರ ನಡೆಸಿ ಹೆಚ್ಚಿನ ಹಣ ನೀಡಿದರೆ, ಅವರು ಈ ಯುದ್ಧ ದೀರ್ಘಕಾಲ ಮುಂದುವರಿಯಲು ಸಹಾಯ ಮಾಡಿದಂತೆ" ಎಂದು ಹೇಳಿರುವ ಅವರು, ರಷ್ಯಾದ ಆರ್ಥಿಕ ಶಕ್ತಿಯನ್ನು ಕುಗ್ಗಿಸಲು ಭಾರತವು ರಷ್ಯಾದೊಂದಿಗಿನ ಇಂಧನ ಹಾಗೂ ತೈಲ ವ್ಯಾಪಾರವನ್ನು ತಕ್ಷಣವೇ ಕೊನೆಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಹಾಗಾದ್ರೆ, ರಷ್ಯನ್ ಸೇನೆಯಲ್ಲಿರುವ ಭಾರತೀಯರ ಸ್ಥಿತಿ ಏನು?

ಭಾರತದ ವಿದೇಶಾಂಗ ಸಚಿವಾಲಯವು, ಇತ್ತೀಚೆಗೆ ಬಿಡುಗಡೆ ಮಾಡಿದ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ರಷ್ಯಾದ ಸಶಸ್ತ್ರ ಪಡೆಗಳಿಗೆ ಒಟ್ಟು 227 ಭಾರತೀಯ ನಾಗರಿಕರು ಸೇರ್ಪಡೆಗೊಂಡಿರುವುದು ದೃಢಪಟ್ಟಿದೆ ಎಂದು ತಿಳಿಸಿದೆ. ಇದರೊಂದಿಗೆ, ಭಾರತ ಸರ್ಕಾರದ ಸಚಿವಾಲಯ ಮತ್ತು ಮಾಸ್ಕೋದಲ್ಲಿರುವ ರಾಯಭಾರ ಕಚೇರಿಯ ನಿರಂತರ ರಾಜತಾಂತ್ರಿಕ ಪ್ರಯತ್ನಗಳ ಫಲವಾಗಿ ಈಗಾಗಲೇ 139 ಭಾರತೀಯರನ್ನು ಸೇನೆಯಿಂದ ಬಿಡುಗಡೆಗೊಳಿಸಿ ಸ್ವದೇಶಕ್ಕೆ ಕರೆತರಲಾಗಿದೆ. ದುರದೃಷ್ಟವಶಾತ್, ಈ ಯುದ್ಧದ ಸಂಘರ್ಷದಲ್ಲಿ ಸಿಲುಕಿ ಇದುವರೆಗೆ 51 ಭಾರತೀಯರು ಪ್ರಾಣ ಕಳೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com