Hormuz ಜಲಸಂಧಿಯಲ್ಲಿ ಅಮೆರಿಕಕ್ಕೆ ಬಿಗ್ ಶಾಕ್: ಯುಎಸ್ ಮಿಲಿಟರಿಯ ಮತ್ತೊಂದು ಅತ್ಯಾಧುನಿಕ ‘Kingfish’ Drone Iran ವಶಕ್ಕೆ..!

ಇರಾನ್‌ನ ಸರ್ಕಾರಿ ಸುದ್ದಿ ಸಂಸ್ಥೆ 'IRIB' ಪ್ರಸಾರ ಮಾಡಿದ ವರದಿಯ ಪ್ರಕಾರ, ಇರಾನ್ ಸೇನೆಯು ತನ್ನ ಅತ್ಯಾಧುನಿಕ ಮಿಲಿಟರಿ ಇಂಟೆಲಿಜೆನ್ಸ್ ಮತ್ತು ಎಲೆಕ್ಟ್ರಾನಿಕ್ ವಾರ್‌ಫೇರ್ (ವಿದ್ಯುನ್ಮಾನ ಯುದ್ಧ) ತಂತ್ರಜ್ಞಾನವನ್ನು ಬಳಸಿ ಈ ಕ್ಲಿಷ್ಟಕರ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದೆ.
US Drone
ಅಮೆರಿಕಾ ಡ್ರೋನ್
Updated on: 

ಟೆಹ್ರಾನ್: ಜಾಗತಿಕ ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸುವಂತಹ ಘಟನೆಯೊಂದರಲ್ಲಿ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೌಕಾಪಡೆಯು ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ಎರಡನೇ ಅತ್ಯಾಧುನಿಕ ನೀರೊಳಗಿನ ಡ್ರೋನ್ ಅನ್ನು ವಶಪಡಿಸಿಕೊಂಡಿರುವುದಾಗಿ ಅಧಿಕೃತವಾಗಿ ಘೋಷಿಸಿದೆ.

ಮೊದಲಿಗೆ ಈ ಡ್ರೋನ್ ಅನ್ನು 'REMUS 600' ಎಂದು ಗುರುತಿಸಲಾಗಿದ್ದರೂ, ಇರಾನ್ ಮಿಲಿಟರಿ ವಕ್ತಾರರಾದ ಬ್ರಿಗೇಡಿಯರ್ ಜನರಲ್ ಹೊಸೈನ್ ಮೊಹೆಬ್ಬಿ ಅವರು ಈಗ ಇದು ಅಮೆರಿಕ ಮಿಲಿಟರಿಗೆ ಸೇರಿದ ಬಹುಕೋಟಿ ಮೌಲ್ಯದ 'Mk 18 Mod 2 Kingfish' ಎಂಬ ಸ್ವಯಂಚಾಲಿತ ನೀರೊಳಗಿನ ವಾಹನ (AUV) ಎಂದು ಸ್ಪಷ್ಟಪಡಿಸಿದ್ದಾರೆ.

ಇರಾನ್‌ನ ಸರ್ಕಾರಿ ಸುದ್ದಿ ಸಂಸ್ಥೆ 'IRIB' ಪ್ರಸಾರ ಮಾಡಿದ ವರದಿಯ ಪ್ರಕಾರ, ಇರಾನ್ ಸೇನೆಯು ತನ್ನ ಅತ್ಯಾಧುನಿಕ ಮಿಲಿಟರಿ ಇಂಟೆಲಿಜೆನ್ಸ್ ಮತ್ತು ಎಲೆಕ್ಟ್ರಾನಿಕ್ ವಾರ್‌ಫೇರ್ (ವಿದ್ಯುನ್ಮಾನ ಯುದ್ಧ) ತಂತ್ರಜ್ಞಾನವನ್ನು ಬಳಸಿ ಈ ಕ್ಲಿಷ್ಟಕರ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದೆ ಎಂದು ತಿಳಿಸಿದೆ.

ಅಮೆರಿಕದ ಈ ರಹಸ್ಯ ಡ್ರೋನ್ ಜಲಸಂಧಿಯಲ್ಲಿ ಇರಾನ್‌ನ ಮಿಲಿಟರಿ ಚಟುವಟಿಕೆಗಳ ಮೇಲೆ ಬೇಹುಗಾರಿಕೆ (Espionage) ನಡೆಸುತ್ತಿತ್ತು ಎಂದು ಇರಾನ್ ಆರೋಪಿಸಿದೆ.

ಸದ್ಯ ಈ ಡ್ರೋನ್ ಅನ್ನು ಇರಾನ್‌ನ ತಾಂತ್ರಿಕ ತಜ್ಞರ ವಶಕ್ಕೆ ನೀಡಲಾಗಿದ್ದು, ಅದರೊಳಗಿರುವ ರಹಸ್ಯ ಡೇಟಾವನ್ನು ಹೊರತೆಗೆಯುವ ಪ್ರಕ್ರಿಯೆ ಆರಂಭವಾಗಿದೆ.

ಅಮೆರಿಕಕ್ಕೆ ಸೇರಿದ ಈ ನೀರೊಳಗಿನ ಸಾಧನವು ಅತ್ಯಾಧುನಿಕ ಸ್ವಯಂಚಾಲಿತ ನೀರೊಳಗಿನ ವಾಹನವಾಗಿದ್ದು, ಸೋನಾರ್ ಹಾಗೂ ನಿಖರ ಸಂಚರಣೆ ವ್ಯವಸ್ಥೆ ಹೊಂದಿದೆ ಎಂದು ಐಆರ್‌ಜಿಸಿ ಹೇಳಿದೆ.

US Drone
ಮಧ್ಯಪ್ರಾಚ್ಯ ಸಂಘರ್ಷ: ಮಧ್ಯಾವಧಿ ಚುನಾವಣೆಗೂ ಮುನ್ನ ಇರಾನ್ ಮೇಲೆ ಅಮೆರಿಕ ದಾಳಿ?: ಟ್ರಂಪ್ ಸ್ಫೋಟಕ ಹೇಳಿಕೆ..!

ಹಾರ್ಮುಜ್ ಜಲಸಂಧಿ ತೆರೆದಿರುವುದು ಮಾತ್ರವಲ್ಲ, ಅಮೆರಿಕದ ಜಲಾಂತರ್ಗಾಮಿ ನೌಕೆಗಳನ್ನು ಗುರಿಯಾಗಿಸುವ ಐಆರ್‌ಜಿಸಿ ನೌಕಾಪಡೆಯ ಕಾರ್ಯಾಚರಣೆ ಪ್ರದೇಶವಾಗಿದೆ. ಎರಡನೇ ಸಾಧನವೂ ನಮ್ಮ ಕೈಗೆ ಸಿಕ್ಕಿದೆ. ಈ ಬಾರಿ ಎಂಕೆ-18 ಮಾಡ್ 2 ಕಿಂಗ್‌ಫಿಶ್. ಹಲವು ಮಿಲಿಯನ್ ಡಾಲರ್ ಮೌಲ್ಯದ ಈ ಅತ್ಯಾಧುನಿಕ ಸ್ವಯಂಚಾಲಿತ ನೀರೊಳಗಿನ ವಾಹನ ಸೋನಾರ್ ಮತ್ತು ನಿಖರ ಸಂಚರಣೆ ವ್ಯವಸ್ಥೆ ಹೊಂದಿದೆ.

ಇರಾನ್‌ನ ಸರ್ಕಾರಿ ಪ್ರಸಾರ ಸಂಸ್ಥೆ ಐಆರ್‌ಐಬಿಯೂ ಈ ಹೇಳಿಕೆಯನ್ನು ಪ್ರಸಾರ ಮಾಡಿದ್ದು, ಆಯಕಟ್ಟಿನ ಜಲಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ “ಅಮೆರಿಕದ ಭಯೋತ್ಪಾದಕ ಸೇನೆಯ ಎರಡನೇ ನೀರೊಳಗಿನ ನೌಕೆ”ಯನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಲಾಗಿದೆ ಎಂದು ಇರಾನ್ ಸೇನಾ ಅಧಿಕಾರಿಗಳು ಹೇಳಿರುವುದಾಗಿ ವರದಿ ಮಾಡಿದೆ.

ಐಆರ್‌ಐಬಿ ಉಲ್ಲೇಖಿಸಿರುವ ಐಆರ್‌ಜಿಸಿ ಹೇಳಿಕೆಯ ಪ್ರಕಾರ, ಇರಾನ್‌ನ ಸೇನಾ ಗುಪ್ತಚರ ಹಾಗೂ ಎಲೆಕ್ಟ್ರಾನಿಕ್ ಯುದ್ಧ ಸಾಮರ್ಥ್ಯಗಳನ್ನು ಬಳಸಿಕೊಂಡು ಸಮನ್ವಯದೊಂದಿಗೆ ಸಂಕೀರ್ಣ ಕಾರ್ಯಾಚರಣೆ ನಡೆಸಿ ಸಾಧನವನ್ನು ವಶಪಡಿಸಿಕೊಳ್ಳಲಾಗಿದೆ.

ದೇವರ ಕೃಪೆಯಿಂದ, ಐಆರ್‌ಜಿಸಿ ನೌಕಾಪಡೆಯ ಯೋಧರು ಗುಪ್ತಚರ ಹಾಗೂ ಎಲೆಕ್ಟ್ರಾನಿಕ್ ಯುದ್ಧ ಸಾಮರ್ಥ್ಯಗಳನ್ನು ಒಳಗೊಂಡ ಸಮನ್ವಯದ ಸಂಕೀರ್ಣ ಕಾರ್ಯಾಚರಣೆಯ ಮೂಲಕ, ಗುಪ್ತಚರ ಸಂಗ್ರಹಿಸುವ ಉದ್ದೇಶದಿಂದ ಹಾರ್ಮುಜ್ ಜಲಸಂಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಮೆರಿಕದ ಅತ್ಯಾಧುನಿಕ ಮಾನವರಹಿತ ನೀರೊಳಗಿನ ವಾಹನವನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com