ಸಾಧನೆ

ಶ್ರವಣ್ ದಿಗ್ರೇಟ್!

ನೊಯ್ಡಾದಲ್ಲಿ ನಡೆದ 'ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ 2013'ರಲ್ಲಿ ಬೆಂಗಳೂರು ಸದ್ದು ಮಾಡಿದ್ದು ಸುದ್ದಿಯಾಗಲೇ ಇಲ್ಲ. ಪ್ರತಿಷ್ಠಿತ ಚಿತ್ರೋತ್ಸವದಲ್ಲಿ ನಗರದ ಹುಡುಗ ಪ್ರಶಸ್ತಿ ಗೆದ್ದಿದ್ದಾನೆ. ಮೊಬೈಲ್ ಸಾಕ್ಷ್ಯಚಿತ್ರ ವಿಭಾಗದಲ್ಲಿ ಅವಾರ್ಡ್ ಮುಡಿಗೇರಿಸಿಕೊಂಡಿರುವ ಶ್ರವಣ್ ರಿಗ್ರೆಟ್ ಅಯ್ಯರ್ ಪತ್ರಿಕೋದ್ಯಮ ವಿದ್ಯಾರ್ಥಿ!
ಇರುಳಿಗರ ಸಮುದಾಯದವರ ಜೀವನಕ್ರಮ ಆಧರಿಸಿ ಶ್ರವಣ್ ಮೊಬೈಲ್‌ನಲ್ಲಿ ಚಿತ್ರೀಕರಿಸಿರುವ 'ಇರುಳಿಗಾಸ್- ದಿ ಪೀಪಲ್ ಆಫ್ ದಿ ನೈಟ್‌' (ಐಖ್ಖಔಐಎಆಖ- ಝಿಜ ಕಿಜ್ಟಠಟಜ ್ಟಜಿ ಝಿಜ ಝ್ಝ್ಜಡಿ) ಎಂಬ ಸಾಕ್ಷ್ಯಚಿತ್ರ 'ಬೆಸ್ಟ್ ಮೊಬೈಲ್ ವೀಡಿಯೋ' ವಿಭಾಗದಲ್ಲಿ ಪ್ರಶಸ್ತಿಗೆ ಪಾತ್ರವಾಗಿದೆ. ಜರ್ಮನಿ, ಫ್ರಾನ್ಸ್, ಸ್ಪೇನ್ ಸೇರಿದಂತೆ ವಿಶ್ವದ ನಾನಾ ಭಾಗದಿಂದ ಸುಮಾರು 100 ಸಾಕ್ಷ್ಯಚಿತ್ರಗಳು ಈ ವಿಭಾಗದಲ್ಲಿ ನಾಮಕರಣಗೊಂಡಿದ್ದವು. ಭಾರತೀಯ ಫಿಲ್ಮ್ ಒಕ್ಕೂಟದ ಉಪಾಧ್ಯಕ್ಷ ವಿನೋದ್ ಕೆ. ಲಾಂಬಾ, ಚಿತ್ರ ನಿರ್ಮಾಪಕ ಮತ್ತು ಪತ್ರಕರ್ತ ಸೈಯದ್ ಮೊಹಮ್ಮದ್ ನವಾಜ್, ಶಿಕ್ಷಣತಜ್ಞ ಹಾಗೂ ಚಿತ್ರ ನಿರ್ಮಾಪಕ ಸಿ.ಜಿ. ಜೈನ್‌ರನ್ನು ಒಳಗೊಂಡ ತೀರ್ಪುಗಾರ ಮಂಡಳಿ ಶ್ರವಣ್‌ರ ಸಾಕ್ಷ್ಯಚಿತ್ರವನ್ನು ಶ್ರೇಷ್ಠ ಎಂದು ಘೋಷಿಸಿತು. ಆರು ನಿಮಿಷ ಅವಧಿಯ ಸಾಕ್ಷ್ಯಚಿತ್ರದಲ್ಲಿ ಶ್ರವಣ್, ಇಲಿಗಳನ್ನು ಬೇಟೆಯಾಡಿ ತಿನ್ನುವ ಇರುಳಿಗ ಸಮುದಾಯ ತಮ್ಮ ಸಂಪ್ರದಾಯವನ್ನು ಆಧುನಿಕ ಸಂದರ್ಭದಲ್ಲೂ ಕಾಪಾಡಿಕೊಂಡು ಮುಂದುವರಿಸಿಕೊಂಡು ಹೋಗಲು ಪಡುತ್ತಿರುವ ಬವಣೆಯನ್ನು ಮನೋಜ್ಞವಾಗಿ ಚಿತ್ರಿಸಿದ್ದಾನೆ.
'ನನ್ನ ಸಾಕ್ಷ್ಯಚಿತ್ರದ ಮೂಲಕ ಇರುಳಿಗ ಸೇರಿದಂತೆ ಎಲ್ಲ ಬಗೆಯ ಸಮುದಾಯದವರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಲಿದ್ದೇನೆ' ಎನ್ನುತ್ತಾನೆ ಶ್ರವಣ್ ರಿಗ್ರೆಟ್ ಅಯ್ಯರ್ (94485 44997).
ಶ್ರವಣ್ ಇದುವರೆಗೆ ನಾನಾ ವಿಷಯವಾಗಿ ಎಂಟು ಮೊಬೈಲ್ ಸಾಕ್ಷ್ಯಚಿತ್ರಗಳನ್ನು ತಯಾರಿಸಿದ್ದಾನೆ. ಇದಕ್ಕಾಗಿ ಆತನಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳೂ ಲಭಿಸಿವೆ. ಆತನಿಗೆ ಶೃತಿ ಅಯ್ಯರ್, ವಿನಯ್ ಎಸ್. ರಿಗ್ರೆಟ್ ಅಯ್ಯರ್ ಸಾಥ್ ನೀಡಿದ್ದಾರೆ.
ಇರುಳಿಗ ಸಮುದಾಯದ ಸಂಪ್ರದಾಯ ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಇಂಥ ವಿಶಿಷ್ಟ ಸಂಪ್ರದಾಯದ ಬಗೆಗಿನ ವಿವರಗಳನ್ನು ಸಂಗ್ರಹಿಸಿ ಮುಂದಿನ ಪೀಳಿಗೆಯವರಿಗೆ ಹೇಳಬೇಕಾದ ಅವಶ್ಯಕತೆಯಿದೆ.

- ಶ್ರವಣ್ ರಿಗ್ರೆಟ್ ಅಯ್ಯರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್