ಸಾಧನೆ

ಕೆವಿಕಲೆ

ಮಗುವಿನ ಸುಪ್ತ ಪ್ರತಿಭೆಗೆ ಸಕಾಲದಲ್ಲಿ ಪ್ರೋತ್ಸಾಹ ದೊರೆತರೆ ಅದು ಅರಳುತ್ತದೆ. ಹಾಗೆ ಅರಳಿದ ಕಲಾ ಪ್ರತಿಭೆಗೆ ಪ್ರತ್ಯಕ್ಷ ಉದಾಹರಣೆ ಅಳಿಕೆಯ ಕೆ.ವಿ. ಸುರೇಶ.
ಕೇರಳದ ಹಳ್ಳಿಯೊಂದರಲ್ಲಿ ಹುಟ್ಟಿ, ಕೊಡಗಿನ ಸಿದ್ದಾಪುರದ ನೆಲ್ಯಹುದಿಕೇರಿಯಲ್ಲಿ ಬೆಳೆದ ಸುರೇಶ, ತಾಯಿ ತನ್ನ ಮಗ ವಿದ್ಯೆ ಕಲಿಯಲೆಂಬ ಮಹತ್ವಾಕಾಂಕ್ಷೆಯಿಂದ ಶಾಲೆಗೆ ಸೇರಿಸಿದರೆ ಹೋಗುತ್ತಿದ್ದದ್ದು ನಿಸರ್ಗದ ಮಡಿಲಲ್ಲಿ ಹರಿಯುವ ಕಾವೇರಿ ನದಿಯಲ್ಲಿ ಈಜುವುದು ಮತ್ತು ನದಿ ದಂಡೆಯಲ್ಲಿ ಮರಳನ್ನು ಉಬ್ಬಿಸಿ ತಗ್ಗಿಸಿ ಆಡಲಿಕ್ಕೆ. ಮಗನಲ್ಲಿದ್ದ ಈ ಪ್ರವೃತ್ತಿಯನ್ನು ಕಂಡ ತಾಯಿ ಅಳಿಕೆಯ ಬಾಪೂಜಿ ಬಾಲನಿಕೇತನದ ಮೊರೆ ಹೊಕ್ಕರು. ಚಿತ್ರಕಲೆಯಲ್ಲಿ ಈತನಿಗಿದ್ದ ಅಪಾರ ಆಸಕ್ತಿಯನ್ನು ಗಮನಿಸಿದ ಶ್ರೀ ಸತ್ಯಸಾಯಿ ವಿದ್ಯಾ ಸಂಸ್ಥೆಗಳ ಅಧಕ್ಷ ಯು. ಗಂಗಾಧರ ಭಟ್ ಕಾರ್ಕಳದ ಶಿಲ್ಪಕಲಾ ಶಾಲೆಗೆ ಸೇರುವಂತೆ ಸುರೇಶನಿಗೆ ಸೂಚಿಸಿದರು. ಶಿಲ್ಪಕಲೆಯಲ್ಲಿ ಈತನ ಕರಕುಶಲತೆಯಿಂದ ಅರಳಿದ ಕೃತಿಗಳಲ್ಲಿ ಶಿಲಾಮೂರ್ತಿಗಳಾದ ಕಾಳಿಂಗ ಮರ್ದನ, ಮಹಾವೀರ, ಶಿವ, ನಂದಿ, ಸತ್ಯನಾರಾಯಣ, ಶಾರದೆ, ಕಾಳಿ, ಹನುಮಂತ, ರಾಮ, ನಾಗನಕಲ್ಲು, ದಾರು ಶಿಲ್ಪಗಳಾದ ದರ್ಪಣ ಸುಂದರಿ, ಗಂಧರ್ವ ಕನ್ಯೆ, ಗರುಡ, ಪಲ್ಲಕ್ಕಿ, ಬೇಟೆಗಾರ್ತಿ ಇನ್ನೂ ಅನೇಕ ಕೆತ್ತನೆಗಳು ಈತನ ಕಲಾ ನೈಪುಣ್ಯವನ್ನು ಪ್ರತಿಬಿಂಬಿಸುತ್ತದೆ. ಇದರ ಜತೆಗೆ ಶ್ರೀಗಂಧದ ಕೆತ್ತನೆಯಲ್ಲಿಯೂ ವಿಶೇಷ ಪರಿಣತಿ ಹೊಂದಿದ್ದಾನೆ.
ಶಿಲ್ಪಕಲೆ ಬಗ್ಗೆ ಇನ್ನಷ್ಟು ತಿಳಿಯುವ ಹಂಬಲದಿಂದ ಬೆಂಗಳೂರಿನಲ್ಲಿ ಫೈಬರ್ ಮೌಲ್ಡಿಂಗ್, ತಮಿಳುನಾಡಿನಲ್ಲಿ ಸಿಮೆಂಟಿನ ಗೋಪುರ ಮತ್ತು ಮೂರ್ತಿ ರಚನೆಯನ್ನು, ಮುಂಬೈನಲ್ಲಿ ಪೂಜಾ ಮಂಟಪ ರಚನೆ, ಕೆತ್ತನೆ, ಜೋಡಣೆಯನ್ನು ಕಲಿತ. ಒಂದು ವರ್ಷ ಪತ್ರಕರ್ತನಾಗಿಯೂ ಕೆಲಸ ಮಾಡಿದ ಈತ, ಕಂಪ್ಯೂಟರ್ ಬಳಕೆಯಲ್ಲಿಯೂ ಪಳಗಿದ್ದಾನೆ.
ಪುಟ್ಟಪರ್ತಿಯಲ್ಲಿ ಅಪಾರ ಜನಸ್ತೋಮದ ನಡುವೆ ನಡೆಯುವ ವಿದ್ಯಾರ್ಥಿಗಳ ನಾಟಕಕ್ಕೆ ಏಳು ಅಡಿ ಎತ್ತರದ ವೆಂಕಟೇಶ್ವರ, 24 ಅಡಿ ಎತ್ತರದ ತಿರುಪತಿ ದೇವಸ್ಥಾನ, 36 ಅಡಿ ಎತ್ತರದ ನಟರಾಜ, ಕೃಷ್ಣ ಮತ್ತು ಸುಬ್ರಹ್ಮಣ್ಯನ ಮೂರ್ತಿಗಳನ್ನು ಥರ್ಮಾಕೋಲ್‌ನಲ್ಲಿ ತಯಾರಿಸಿದ ಕೀರ್ತಿ ಸುರೇಶನದ್ದು.
ಈ ಸಾಧನೆಗೆ ಉತ್ತೇಜನ ನೀಡಿದ ಅಳಿಕೆ ವಿದ್ಯಾಸಂಸ್ಥೆಯ ಬಾಪೂಜಿ ಬಾಲನಿಕೇತನಕ್ಕೆ ಸುಂದರವಾದ ಕೃಷ್ಣಶಿಲೆಯ ಗಣಪತಿಯನ್ನು ನಿರ್ಮಿಸಿ ಕೊಟ್ಟಿರುವ ಕೆ.ವಿ. ಸುರೇಶನಿಗೆ ಸಾಂಪ್ರದಾಯಿಕ ಶಿಲ್ಪಕಲೆಯನ್ನು ಬೆಳೆಸುವ ಮಹತ್ವಾಕಾಂಕ್ಷೆ ಇದೆ.  
ಐದು ಭಾಷೆ ಮಾತನಾಡುವ, ಸದಾ ನಗುನಗುತ್ತಾ ಎಲ್ಲರೊಂದಿಗೆ ಸ್ನೇಹಶೀಲನಾದ ಇವನು ಉತ್ಸಾಹಿ ಯುವಕ. ಪ್ರಸ್ತುತ ಅಳಿಕೆ ವಿದ್ಯಾಸಂಸ್ಥೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿತ್ರಕಲೆ ತರಗತಿ ತೆಗೆದುಕೊಳ್ಳುತ್ತಿದ್ದಾನೆ. ಚಿತ್ರಕಲೆಯ ಬಗ್ಗೆ ರಾಜ್ಯಾದ್ಯಂತ ಹಲವು ಶಾಲೆಗಳಲ್ಲಿ ಶಿಬಿರಗಳನ್ನು ನಡೆಸಿದ್ದಾನೆ. ಸಂಪರ್ಕ: 9483156565.

- ಉದಯ್ ವಿಟ್ಲ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್