ವಯಸ್ಸಾದಂತೆ ನಡಿಗೆಯಲ್ಲಿ ಹಿಡಿತ ತಪ್ಪುವುದು ಹೆಚ್ಚು. ದೇಹ ವಾಲತೊಡಗುತ್ತದೆ. ಬಾತ್ರೂಂನೊಳಗೆ ಬಾಗಿಲು ಹಾಕಿಕೊಂಡಿರುವಾಗ ಕಾಲು ಜಾರುವುದು, ಟಬ್ನಲ್ಲಿ ನೀರು ತುಂಬಿ ಮುಳುಗುವ ಸಾಧ್ಯತೆ ಹೆಚ್ಚು. ಅಲ್ಲದೆ ಅವರು ಆಧುನಿಕ ಉಪಕರಣಗಳನ್ನು ಬಳಸಲು ಸಾಹಸ ಮಾಡಬೇಕಿರುತ್ತದೆ. ಹೀಗಾಗಿ ಹಿರಿಯರಿರುವ ಮನೆಯಲ್ಲಿ ಬಾತ್ರೂಂಗೆ ಒಂದಿಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅವಶ್ಯಕ.
ಹೀಟರ್ನ ಉಷ್ಣಾಂಶ 120 ಡಿಗ್ರಿಗಿಂತಲೂ ಹೆಚ್ಚಾಗದಂತೆ ನೋಡಿಕೊಳ್ಳಿ.
ಅವರಿಗೆ ಸ್ನಾನ ಮಾಡುವುದು ಅತ್ಯಂತ ಕಷ್ಟದ ಕೆಲಸವಾಗಿದ್ದರೆ ಬಾಗಿಲನ್ನು ಲಾಕ್ ಮಾಡಿಕೊಳ್ಳದೆ ಸ್ನಾನ ಪೂರೈಸಲು ಹೇಳಿ.
ರಾತ್ರಿ ಹೊತ್ತು ಬಚ್ಚಲಲ್ಲಿ ಸರಿಯಾದ ಬೆಳಕಿರುವಂತೆ ದೀಪ ಅಳವಡಿಸಿ.
ಜಾರದ ಫ್ಲೋರಿಂಗ್ ಇರುವಂತೆ ಎಚ್ಚರಿಕೆ ವಹಿಸಿ.
ಎತ್ತರದ ಬಾತ್ ಟಬ್ಗಳನ್ನು ದಾಟಿ ಬಳಕೆ ಮಾಡುವುದು ಕಷ್ಟ ಆದ್ದರಿಂದ ಅವರಿಗೆ ಟಬ್ ಬೇಡವೇ ಬೇಡ.
ಬಿಸಿ ನೀರು ತಣ್ಣೀರನ್ನು ಸರಿಯಾದ ಹದದಲ್ಲಿ ಅವರು ಸ್ನಾನಕ್ಕೆ ಹೋಗುವ ಮೊದಲೇ ಬಕೆಟ್ನಲ್ಲಿ ತುಂಬಿಡುವುದು ಒಳಿತು.