ಚಿತ್ರಾ ವಿಶ್ವನಾಥ್ 
ಸಾಧನೆ

ಆ್ಯಪ್‌ನಲ್ಲೇ ಅಡುಗೆ ಕಲಿಸುವ 76ರ ಹರೆಯದ ಮೈಲಾಪುರ್ ಮಾಮಿ

ಮೈಲಾಪುರ್ ಮಾಮಿ ಎಂದೇ ಕರೆಯಲ್ಪಡುವ ಚಿತ್ರಾ ನೆಟ್‌ಲೋಕದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ. ಓಹೋ..ಫೇಸ್‌ಬುಕ್, ಟ್ವಿಟರ್ ನಲ್ಲಿ ಆ್ಯಕ್ಟಿವ್ ಇದ್ದಾರಾ?

ವೃದ್ಧಾಪ್ಯ ಆವರಿಸುತ್ತಿದ್ದಂತೆ ಯಾವುದರಲ್ಲೂ ಆಸಕ್ತಿ ಇಲ್ಲದವರಂತೆ ಸುಮ್ಮನೆ ಹಳೇ ಕಾಲದ ನೆನಪುಗಳನ್ನು ಮೆಲುಕು ಹಾಕುತ್ತಾ ಕುಳಿತಿರುವವರನ್ನು ನೋಡಿರುತ್ತೇವೆ. ಇನ್ನು ಕೆಲವರೂ ವಯಸ್ಸಾದರೂ ವಯಸ್ಸು ಕೇವಲ ಸಂಖ್ಯೆ ಅಷ್ಟೇ ಅನ್ನುತ್ತಾ ಏನಾದರೊಂದು ಕೆಲಸದಲ್ಲಿ ಸಕ್ರಿಯರಾಗಿರುತ್ತಾರೆ. ಅಂಥವರ ಪಟ್ಟಿಯಲ್ಲಿ ಚಿತ್ರಾ ವಿಶ್ವನಾಥನ್ ಎಂಬವರಿಗೆ ವಿಶಿಷ್ಟ
 ಸ್ಥಾನವಿದೆ.
ತಮಿಳ್ನಾಡಿನ ಚೆನ್ನೈ ಬಳಿ ಮೈಲಾಪುರ್ ನಿವಾಸಿಯಾಗಿರುವ ಚಿತ್ರಾ ವಿಶ್ವನಾಥನ್ ಅವರಿಗೀಗ 76ರ ಹರೆಯ. ಮೈಲಾಪುರ್ ಮಾಮಿ ಎಂದೇ ಕರೆಯಲ್ಪಡುವ ಚಿತ್ರಾ ನೆಟ್‌ಲೋಕದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ. ಓಹೋ..ಫೇಸ್‌ಬುಕ್, ಟ್ವಿಟರ್ ನಲ್ಲಿ ಆ್ಯಕ್ಟಿವ್ ಇದ್ದಾರಾ? ಎಂದು ಕೇಳಬೇಡಿ. ಈಕೆ ಆಕ್ಟಿವ್ ಆಗಿರುವುದು ಮೊಬೈಲ್ ಆ್ಯಪ್‌ನಲ್ಲಿ. ಹೌದು ಚಿತ್ರಾ ವಿಶ್ವನಾಥನ್ ಅವರಿಗೆ ತಮ್ಮದೇ ಆದ ಮೊಬೈಲ್ ಆ್ಯಪ್ ಇದೆ. ಅಡುಗೆಯ ರೆಸಿಪಿ ಹೊಂದಿರುವ ಈ ಆ್ಯಪ್‌ನ ಹೆಸರು Ask Chitvish. ಈ ಆ್ಯಪ್ ಮೂಲಕ ಪಾಯಸ, ಕಡುಬು, ಜಿಗರ್ ತಂಡಾ, ರವೆ ದೋಸೆ ಮೊದಲಾದ ಮನೆ ಅಡುಗೆಗಳ ಪಾಕ ವಿಧಾನಗಳನ್ನು ಅರಿಯಬಹುದು.
ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್ (ಐಒಎಸ್ ಮತ್ತು ಆ್ಯಂಡ್ರಾಯಿಡ್) ನಲ್ಲಿ ಲಭ್ಯವಾಗುವ ಈ ಆ್ಯಪ್‌ನಲ್ಲಿ  3,000ಕ್ಕಿಂತಲೂ ಹೆಚ್ಚು ರೆಸಿಪಿಗಳಿವೆ. ತಮ್ಮ ಆ್ಯಪ್‌ಲೋಕದ ಬಗ್ಗೆ ಚಿತ್ರಾ ಮಾಮಿ ಏನಂತಾರೆ ಎಂಬುದನ್ನು ಅವರ ಮಾತುಗಳಲ್ಲೇ ಕೇಳಿ. 
ನನ್ನ 50ನೇ ಹುಟ್ಟುಹಬ್ಬಕ್ಕೆ ನನ್ನ ಮಗಳು ಕೊಟ್ಟ ಬರ್ತ್ ಡೇ ಗಿಫ್ಟ್ ಈ ಆ್ಯಪ್. ಪ್ರತೀ ದಿನ 6 ರಿಂದ 8 ಗಂಟೆಗಳ ಕಾಲ ನಾನು ಬ್ರೌಸಿಂಗ್‌ನಲ್ಲಿ  ಕಾಲ ಕಳೆಯುತ್ತೇನೆ. ಸದಾ ಬ್ಯುಸಿಯಾಗಿರುವುದೆಂದರೆ ನನಗಿಷ್ಟ. ಬಳಕೆದಾರರು ಎಸ್ಸೆಮ್ಮೆಸ್, ವಾಟ್ಸಾಪ್, ಫೇಸ್‌ಬುಕ್, ಇಮೇಲ್ ಅಥವಾ ಫೋನ್ ಮೂಲಕ ಪ್ರಶ್ನೆಗಳನ್ನು ಕೇಳಿದರೆ ಅವರಿಗೆ ತಕ್ಷಣವೇ ಉತ್ತರಿಸುತ್ತೇನೆ. ಮೊದ ಮೊದಲು ನನ್ನ ಮಕ್ಕಳಿಗಾಗಿಯೇ ನಾನು ರೆಸಿಪಿ ಬರೆಯ ತೊಡಗಿದ್ದು ಆದರೆ ಅದೀಗ ಆನ್ ಲೈನ್ ಮೂಲಕ ಎಲ್ಲರಿಗೂ ಸಿಗುತ್ತದೆ. ನನ್ನ ಆ್ಯಪ್ ನಲ್ಲಿ ಬಳಕೆದಾರರಿಗೆ ಹಂತ ಹಂತವಾಗಿ ಅಡುಗೆ ಮಾಡುವ ವಿಧಾನಗಳನ್ನು ಲಭ್ಯವಾಗುವಂತೆ ಮಾಡಿದ್ದೇನೆ. 
2003 ರಲ್ಲಿ ನಾನು ಹಾಸಿಗೆ ಹಿಡಿದಿದ್ದೆ. ಆ ಸಮಯದಲ್ಲಿ ಮಗಳು ಮನೆಗೆ ಇಂಟರ್‌ನೆಟ್ ಸಂಪರ್ಕ ಕೊಡಿಸಿದಳು. ಹಾಗೆ ನನ್ನ ಮೊಮ್ಮಕ್ಕಳು ನನಗೆ ಕಂಪ್ಯೂಟರ್ ಬಳಕೆಯ ಬಗ್ಗೆ ಕಲಿಸಿ, ಗೂಗಲ್ ಬಗ್ಗೆ ತಿಳಿಸಿದರು. ಆಮೇಲೆ ನಾನು ಹಿಂತಿರುಗಿ ನೋಡಲೇ ಇಲ್ಲ. ಈ ಆ್ಯಪ್  ಇಷ್ಟು ಹಿಟ್ ಆಗುತ್ತದೆ ಎಂದು ನಾನು ಕನಸು ಮನಸ್ಸಲ್ಲೂ ಅಂದುಕೊಂಡಿರಲಿಲ್ಲ.
ಇಷ್ಟೆಲ್ಲಾ ಕೆಲಸ ಮಾಡಲು ಸುಸ್ತಾಗುವುದಿಲ್ಲವೇ?
ಇಲ್ಲ, ನನಗೆ ಹೊಸ ಹೊಸ ಪ್ರಯೋಗಗಳನ್ನು ಮಾಡುವುದು ಇಷ್ಟ.
ಅಡುಗೆ ಪುಸ್ತಕಗಳನ್ನು ಬರೆಯುವ ಯೋಚನೆ ಇದೆಯೇ?
ಇಲ್ವೇ ಇಲ್ಲ. ಪುಸ್ತಕ ಬರೆದು ಪ್ರಕಾಶಕರನ್ನು ಹುಡುಕುವುದು ಕಷ್ಟ. ಅದಕ್ಕಾಗಿ ಪುಸ್ತಕ ಪ್ರಕಟಿಸುವ ಗೋಜಿಗೆ ಹೋಗುವುದಿಲ್ಲ. ಆದಾಗ್ಯೂ, ರು. 250 ಕೊಟ್ಟು ಪುಸ್ತಕ ಖರೀದಿಸಿದನಿಗೆ ಆ ಪುಸ್ತಕದಲ್ಲಿ ಬರೆದಿರುವ ಅಡುಗೆಗಳು ಮಾತ್ರ ಸಿಗುತ್ತವೆ. ಅಂದರೆ 50 ಅಥವಾ ನೂರು ಅಡುಗೆ ಸಿಗಬಹುದು. ಅಷ್ಟು ಸಾಲದು ಅಲ್ವಾ?  ಅಂತಾರೆ ಈ ಮಾಮಿ.
ರುಚಿ ರುಚಿಯಾದ ಅಡುಗೆ ಮಾಡುವ ಚಿತ್ರಾ ತನ್ನ ಪಾಕ ವಿಧಾನವನ್ನೂ ಮುಂದಿನ ಜನಾಂಗಕ್ಕೆ ದಾಟಿಸಲು ಆ್ಯಪ್ ಸಹಾಯ ಪಡೆದುಕೊಂಡಿದ್ದಾರೆ. ತಂತ್ರಜ್ಞಾನವನ್ನು ಯುವ ಜನಾಂಗ ಮಾತ್ರ ನೆಚ್ಚಿಕೊಂಡಿದೆ ಎಂಬ ಊಹೆಯನ್ನು ಬದಲಿಸಿ, ಆ್ಯಪ್ ಮೂಲಕ ಅಡುಗೆ ಕಲಿಸುವ ಚಿತ್ರಾ ಮಾಮಿಗೆ ಜೈ ಹೋ.
ಚಿತ್ರಾ ಅವರ ಅಡುಗೆ ಆ್ಯಪ್ ಮಾಹಿತಿ ಇಲ್ಲಿದೆ
http://askchitvish.com/

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT