ಕನಿಷ್ಕಾ ಬಿಜೇಶ್ 
ಸಾಧನೆ

ಈಕೆ ಜಗತ್ತಿನ ಅತೀ ಕಿರಿಯ ಚಿತ್ರ ಕಲಾವಿದೆ!

ಈ ಪುಟ್ಟ ಪೋರಿಯ ವಯಸ್ಸು ಕೇವಲ 2 ವರ್ಷ. ಹೆಸರು ಕನಿಷ್ಕಾ ಬಿಜೇಶ್. ಮುದ್ದಿನಿಂದ ಈಕೆಯನ್ನು ಎಲ್ಲರೂ ಬೇಬೂ ಎಂದೇ...

ಈ ಪುಟ್ಟ ಪೋರಿಯ ವಯಸ್ಸು ಕೇವಲ 2 ವರ್ಷ. ಹೆಸರು ಕನಿಷ್ಕಾ ಬಿಜೇಶ್. ಮುದ್ದಿನಿಂದ ಈಕೆಯನ್ನು ಎಲ್ಲರೂ ಬೇಬೂ ಎಂದೇ ಕರೆಯುತ್ತಾರೆ. ಈಕೆ ಜಗತ್ತಿನ ಅತೀ ಕಿರಿಯ ಚಿತ್ರ ಕಲಾವಿದೆ ಎಂದರೆ ನೀವು ನಂಬಲೇ ಬೇಕು. ಅಬ್ರಾಸ್ಟ್ರಾಕ್ಟ್ ಪೇಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿರುವ ಈ ಬಾಲೆ ದೇಶ ವಿದೇಶಗಳಲ್ಲಿ ಚಿತ್ರ ಪ್ರದರ್ಶನವನ್ನು ಏರ್ಪಡಿಸಿ ಜನ ಮೆಚ್ಚುಗೆ ಗಳಿಸಿದ್ದಾಳೆ.  

2014 ಅಕ್ಟೋಬರ್ 30-ನವೆಂಬರ್2 ರಂದು ದುಬೈನಲ್ಲಿ ನಡೆದ ಅಂತಾರಾಷ್ಟ್ರೀಯ ಆರ್ಟ್ ಫೇರ್‌ನಲ್ಲಿ  ಆನ್‌ಸ್ಟೇಜ್ ಪೇಟಿಂಗ್ ಮೂಲಕ ಗಮನ ಸೆಳೆದ ಈಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಎರಡು ಬಾರಿ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ . ಈ ಆರ್ಟ್ ಫೇರ್‌ನಲ್ಲಿ ಈಕೆ ಪ್ರದರ್ಶನ ನೀಡಿದಾಗ ಈಕೆಯ ವಯಸ್ಸು 15 ತಿಂಗಳು. ದೇಶದ ಅತೀ ಕಿರಿಯ ಕಲಾವಿದೆಯಾದ ಕನಿಷ್ಕಾ ಹುಟ್ಟಿದ್ದು ಕೇರಳದ ತ್ರಿಶ್ಶೂರ್ ಜಿಲ್ಲೆಯಲ್ಲಿ. ಫೆ. 8 2013ರಂದು ಜನಿಸಿದ ಈಕೆ 8 ತಿಂಗಳಿನಲ್ಲೇ ಪ್ರೊಫೆಷನಲ್ ಪೇಟಿಂಗ್ ಬ್ರಷ್ ಹಿಡಿದು ಪೇಟಿಂಗ್ ಮಾಡಲು ತೊಡಗಿದ್ದಾಳಂತೆ. ಮಗಳಲ್ಲಿರುವ ಆಸಕ್ತಿಯನ್ನು ಬೇಗನೆ ಪತ್ತೆ ಹಚ್ಚಿದ ಅಪ್ಪ ಅಮ್ಮ ಮಗಳಿಗೆ ಚಿತ್ರಕಲೆ ಮುಂದುವರಿಸುವಂತೆ ಪ್ರೋತ್ಸಾಹ ನೀಡಿದ್ದಾರೆ.

2014 ಜುಲೈ 12ರಂದು ಆಯಿಲ್ ಕಲರ್ ಬಳಸಿ 5 ಮೀ 15 ಸೆಮಿ ಉದ್ದ X 30 ಸೆ.ಮೀ ಅಗಲದ ಕ್ಯಾನ್ವಾಸ್‌ನಲ್ಲಿ ಪೇಟಿಂಗ್ ಮಾಡಿ ಈಕೆ ದಾಖಲೆ ಸೃಷ್ಟಿಸಿದ್ದಳು. ಇತ್ತೀಚೆಗೆ ಕೇರಳ ಲಲಿತ ಕಲಾ ಅಕಾಡೆಮಿ ತ್ರಿಶ್ಶೂರ್‌ವಲ್ಲಿ ಸೋಲೋ ಚಿತ್ರಪ್ರದರ್ಶನ ಆಯೋಜಿಸಿದ ಈಕೆ ಕಿರಿಯ ಚಿತ್ರಕಲಾವಿದೆ ಮತ್ತು ಕಿರಿಯ ಸ್ಟೇಜ್ ಪರ್‌ಫಾರ್ಮರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾಳೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT