ಜೋಹಾನ್ಸ್ ಬರ್ಗ್: ಗೂಗಲ್ ವಿಜ್ಞಾನ ಉತ್ಸವ-2016 ರ ಫೈನಲ್ ನಲ್ಲಿ ವಿಜೇತೆಯಾಗಿರುವ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ 16 ವರ್ಷದ ಯುವತಿ 50,000 ಡಾಲರ್ ಬಹುಮಾನ ಗಳಿಸಿದ್ದಾರೆ.
ಸ್ಪರ್ಧೆಯಲ್ಲಿ ಗೆದ್ದಿರುವ 16 ವರ್ಷದ ಭಾರತೀಯ ಮೂಲದ ಬಾಲಕಿ ಕಿಯರಾ ನಿರ್ಘಿನ್, ಅಗ್ಗದ ದರದಲ್ಲಿ ಮಣ್ಣು ಹೆಚ್ಚು ನೀರನ್ನು ಹಿಡಿದಿಟ್ಟುಕೊಳ್ಳಲು ಸಹಕಾರಿಯಾಗುವಂತಹ ವಸ್ತುವನ್ನು ಅಭಿವೃದ್ಧಿಪಡಿಸುವ ಬಗ್ಗೆ ಗೂಗಲ್ ವಿಜ್ಞಾನ ಉತ್ಸವ-2016 ರಲ್ಲಿ ಪ್ರಾಜೆಕ್ಟ್ ನ್ನು ಸಲ್ಲಿಸಿದ್ದರು.
ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಬಳಕೆ ಮಾಡಿ ನೀರನ್ನು ಹೆಚ್ಚು ಹಿಡಿದಿಟ್ಟುಕೊಳ್ಳುವ ಮಣ್ಣಿನ ಶಕ್ತಿಯನ್ನು ವೃದ್ಧಿಗೊಳಿಸುವ ಪ್ರಾಜೆಕ್ಟ್ ಗೆ ಬಹುಮಾನ ಘೋಷಿಸಲಾಗಿದ್ದು, ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ವಿದ್ಯಾರ್ಥಿನಿಗೆ 50,000 ಡಾಲರ್ ಬಹುಮಾನ ಬಂದಿದೆ.
ನೋ ಮೋರ್ ಟರ್ಸ್ಟಿ ಕ್ರಾಪ್ಸ್ ಎಂಬ ಶೀರ್ಷಿಕೆಯಡಿ ನಿರ್ಘಿನ್ ದಕ್ಷಿಣ ಆಫ್ರಿಕಾದಲ್ಲಿ ಉಂಟಾಗಿರುವ ಬರಗಾಲಕ್ಕೆ ಕೀಟಲೆ ಹಣ್ಣಿನ ಸಿಪ್ಪೆಯನ್ನು ಬಳಸಿ ಮಣ್ಣು ಹೆಚ್ಚು ನೀರನ್ನು ಹೀರಿಕೊಳ್ಳುವಂತೆ ಮಾಡಲು ಪ್ರಶಸ್ತಿ ವಿಜೇತೆ ತನ್ನ ಯೋಜನೆಯಲ್ಲಿ ತಿಳಿಸಿದ್ದರು, ಈ ಬಾಲಕಿಯ ಯೋಜನೆಗೆ ಮೆಚ್ಚುಗೆ ವ್ಯಕ್ತವಾಗಿದ್ದು ಮುಂದೊಂದು ದಿನ ತಾನು ವಿಜ್ಞಾನಿಯಾಗುವ ಭರವಸೆ ಹೊಂದಿದ್ದಾಳೆ ಕಿಯರಾ ನಿರ್ಘಿನ್. ಗೂಗಲ್ ವಿಜ್ಞಾನ ಉತ್ಸವ-2016 ಕ್ಕಾಗಿ ವಿಶ್ವದ 9 ರಾಷ್ಟ್ರಗಳಿಂದ ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅತ್ಯುತ್ತಮವಾದ 16 ಯೋಜನೆಗಳನ್ನು ವಿದ್ಯಾರ್ಥಿಗಳಿಂದ ಪಡೆಯಲಾಗಿತ್ತು.