ಗ್ರೀನ್ ಟ್ಯಾಲೆಂಟ್ಸ್ 2016 ಪ್ರಶಸ್ತಿ ಪುರಸ್ಕೃತರು (ಒಳಚಿತ್ರ: ಭಾರತದ ಶಮಿಕ್ ಚೌದರಿ) 
ಸಾಧನೆ

ಭಾರತೀಯ ಯುವ ವಿಜ್ಞಾನಿಗೆ "ಗ್ರೀನ್ ಟ್ಯಾಲೆಂಟ್ಸ್ 2016" ಪ್ರಶಸ್ತಿ ಪ್ರದಾನ

25 ಯುವ ವಿಜ್ಞಾನಿಗಳಿಗೆ ಗ್ರೀನ್ ಟ್ಯಾಲೆಂಟ್ಸ್ ಅಲ್ಯೂಮ್ನಿ 2016ರ ಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು.

- ಜರ್ಮನಿಯ ಸಂರಕ್ಷಣೆ ಸಂಶೋಧನಾ ಗಣ್ಯರನ್ನು ಭೇಟಿ ಆಗಲಿರುವ ಪ್ರಮುಖ 16 ದೇಶಗಳ ಯುವ ವಿಜ್ಞಾನಿಗಳು
- ಅಕ್ಟೋಬರ್ 17-26ರವರೆಗೆ ಅಲ್ಲಿನ ಪ್ರಮುಖ ವಿಜ್ಞಾನ ತಾಣಗಳಿಗೆ ಭೇಟಿ
- ಗ್ರೀನ್ ಟ್ಯಾಲೆಂಟ್ಸ್ ಅಲುಮ್ನಿ ಸಮ್ಮೇಳನದಲ್ಲಿ ನಡೆಯಲಿರುವ ಅಧಿಕೃತ ಪ್ರಶಸ್ತಿ ಪ್ರದಾನ ಸಮಾರಂಭ
- ಗ್ರೀನ್ ಟ್ಯಾಲೆಂಟ್ಸ್ ಅಲುಮ್ನಿಗಳು, ಜರ್ಮನಿಯ ಸಂರಕ್ಷಣೆ ಸಂಶೋಧಕರು, ಕಂಪನಿಗಳು ಮತ್ತು  ಸರ್ಕಾರಿ ಪ್ರತಿನಿಧಿಗಳಿಗಾಗಿ ವೈವಿಧ್ಯಮಯವಾದ ಕಾರ್ಯಾಗಾರ, ಇವೆಂಟ್ ಗಳು ಹಾಗೂ ಕಾರ್ಯಕ್ರಮಗಳು

ಬೆಂಗಳೂರು: ಜರ್ಮನ್ ಸಂಶೋಧನಾ ಸಚಿವರಾದ ಜೋಹಾನ್ ವಾಂಕಾ ಅವರ ಆಶ್ರಯದಲ್ಲಿ ನಡೆಸಲಾಗುವ ಗ್ರೀನ್ ಟ್ಯಾಲೆಂಟ್ಸ್ ಪ್ರಶಸ್ತಿಯ ಮೂಲಕ ಯುವ ಪ್ರತಿಭಾವಂತ ಸಂಶೋಧಕರನ್ನು ಗುರುತಿಸುತ್ತ ಬರಲಾಗಿದೆ. ಇದೀಗ ಎಂಟನೇ ಬಾರಿ ಅಂತಹ ವಿಜ್ಞಾನಿಗಳು ತಮ್ಮ ನವೀನ ಮತ್ತು ಸೃಜನಾತ್ಮಕ ಕಲ್ಪನೆಗಳನ್ನು ಹಂಚಿಕೊಳ್ಳಲು ವೇದಿಕೆ ಒದಗಿಸಲಾಗಿದೆ. ಇಂದಿನ ಸಂರಕ್ಷಣೆ ಮತ್ತು ಪರಿಸರ ರಕ್ಷಣೆ ಕುರಿತ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಪ್ರಯತ್ನ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. 104ಕ್ಕೂ ಅಧಿಕ ದೇಶಗಳ 757 ಅರ್ಜಿಗಳಲ್ಲಿ  25 ಯುವ ವಿಜ್ಞಾನಿಗಳನ್ನು ಉನ್ನತ ಶ್ರೇಣಿಯ ತಜ್ಞ ತೀರ್ಪುಗಾರರ ತಂಡ ಆಯ್ಕೆ ಮಾಡಿದೆ. ಈ ಕಾರ್ಯಕ್ರಮದ ಭಾಗವಾಗಿ ಪ್ರಶಸ್ತಿ ಪುರಸ್ಕೃತರು ಎರಡು ವಾರಗಳ ಕಾಲ ಜರ್ಮನಿಯ ಪ್ರಮುಖ ತಾಣಗಳಿಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಮುಂಬರುವ ವರ್ಷಗಳಲ್ಲಿ ಈ ಗ್ರೀನ್ ಟ್ಯಾಲೆಂಟ್ಸ್ ವಿಜ್ಞಾನಿಗಳು 3 ತಿಂಗಳ ಕಾಲ ಜರ್ಮನಿಯಲ್ಲಿ ಸಂಶೋಧನೆ ಕೈಗೊಳ್ಳುವ ಸಂಭಾವ್ಯತೆ ಇದೆ.

ಈ ವರ್ಷ '"ಗ್ರೀನ್ ಟ್ಯಾಲೆಂಟ್ಸ್" ಪ್ರಮುಖ ತಜ್ಞ ಸಂಶೋಧನಾ ಸಂಸ್ಥೆ ಮತ್ತು ಕಂಪನಿಗಳಾದ ಪೋಲಾರ್ ಮತ್ತು ಮರಿನ್ ಸಂಶೋಧನಾ ಸಂಸ್ಥೆಯಾದ ಆಲ್ಫ್ರೆಡ್ ವೆಗೆನರ್ ಇನ್‍ಸ್ಟಿಟ್ಯೂಟ್, ಹ್ಯಾಂಬರ್ಗ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ, ಪ್ಲಾಸ್ಮಾ ಫಿಸಿಕ್ಸ್ ಸಂಸ್ಥೆಯಾದ ಮ್ಯಾಕ್ಸ್ ಪ್ಲಾಂಕ್ ಇನ್‍ಸ್ಟಿಟ್ಯೂಟ್, ಕ್ಲೈಮೆಟ್ ಇಂಪ್ಯಾಕ್ಟ್ ಸಂಶೋಧನಾ ಸಂಸ್ಥೆಯಾದ ಪೋಟ್ಸ್ ಡ್ಯಾಮ್, ಸಿಮನ್ಸ್ ಎಜಿ ದಕ್ಷಿಣ ಆಫ್ರಿಕಾದ ವಾತಾವರಣ ಬದಲಾವಣೆ ಮತ್ತು ಅಡಾಪ್ಟಿವ್ ಲ್ಯಾಂಡ್ ಮ್ಯಾನೆಜ್‍ಮೆಂಟ್ ಸಂಸ್ಥೆಗಳು ಸಂವಹನ ನಡೆಸುವ ಸಾಧ್ಯತೆಯಿದೆ.

25 ಯುವ ವಿಜ್ಞಾನಿಗಳಿಗೆ ಗ್ರೀನ್ ಟ್ಯಾಲೆಂಟ್ಸ್ ಅಲ್ಯೂಮ್ನಿ 2016ರ ಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ಸಂಸ್ಥೆಗಳು, ತಜ್ಞರು, ತೀರ್ಪುಗಾರರ ಸಮಿತಿಯ ಸದಸ್ಯರು, ರಾಜಕಾರಣಿಗಳು ಮತ್ತು ಇತರ ವಿಶೇಷ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ. ಸಚಿವರಾದ ಜೋಹಾನ್ ವಾಂಕಾ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಕ್ಲೈಮೆಟ್ ಇಂಪ್ಯಾಕ್ಟ್ ಸಂಶೋಧನಾ ಸಂಸ್ಥೆಯಾದ ಪೋಟ್ಸ್ ಡ್ಯಾಮ್  ನಿರ್ದೇಶಕರಾದ ಪ್ರೊಫೆಸರ್ ಹ್ಯಾನ್ಸ್ ಜೋಕಿಮ್ ಅವರು "ಹವಾಮಾನ ಪರಿಣಾಮಗಳು ಮತ್ತು ದುರ್ಬಲತೆ" ಬಗ್ಗ ಸಮ್ಮೇಳನದ ಪ್ರಮುಖ ಭಾಷಣ ಮಾಡಲಿದ್ದಾರೆ.

ಭಾರತದ ಪಿಎಚ್.ಡಿ ವಿದ್ಯಾರ್ಥಿಯಾದ ಶಮಿಕ್ ಚೌದರಿ ಸಿಂಗಪುರ್ ವಿಶ್ವವಿದ್ಯಾನಿಲಯದಲ್ಲಿ ಎನ್ವಿರಾನ್ಮೆಂಟಲ್ ಎಂಜಿನಿಯರಿಂಗ್‍ನಲ್ಲಿ "ಗ್ರೀನ್ ಸಿಂತಸಿಸ್" ಮೇಲೆ ಸಂಶೋಧನೆ ಮಾಡುತ್ತಿದ್ದು ಗ್ರೀನ್ ಟ್ಯಾಲೆಂಟ್ಸ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ.

ಸಮ್ಮೇಳನವು ತುಂಬಾ ವೈವಿಧ್ಯಮಯವಾಗಿದ್ದು, ಭಾಗವಹಿಸುವವರಿಗೆ ಅಗಣಿತವಾದ ಸಂಪರ್ಕ ಸಾಧ್ಯತೆಯನ್ನು ಒದಗಿಸುವ ಸಾಧ್ಯತೆಯಿದೆ. ಗ್ರೀನ್ ಟ್ಯಾಲೆಂಟ್ಸ್ ಸಮ್ಮೇಳನ  ವಿಜ್ಞಾನ ಸಮುದಾಯದವರೊಂದಿಗೆ ಸಂಪರ್ಕ ಹೊಂದಲು ಮತ್ತು ವಿಚಾರ ವಿನಿಮಯ ಮಾಡಿಕೊಳ್ಳಲು ಮತ್ತು ಭವಿಷ್ಯದ ಸಹಕಾರಕ್ಕೆ ಒಂದು ಅಡಿಪಾಯವಾಗಲಿದೆ.  ಈ ತರಹದ ಪ್ರಯತ್ನಗಳು ಪ್ರಶಸ್ತಿ ಪಡೆದವರಿಗೆ ಪೂರ್ಣ ಪ್ರಮಾಣದಲ್ಲಿ ಅನುದಾನದ ನೆರವಿನೊಂದಿಗೆ ಸಂಶೊಧನೆಯನ್ನು ಕೈಗೊಳ್ಳಲು ಸಹಕರಿಸುತ್ತದೆ. ಎರಡು ಸಮ್ಮೇಳನಗಳು ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ 27ನೇ ಅಕ್ಟೋಬರ್ 2016 ರಂದು ಕಾಸ್ಮೊಸ್, ಬರ್ಲಿನ್‍ನಲ್ಲಿ ನಡೆಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ ಹೈಕಮಾಂಡ್ ಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ: CM ಪುತ್ರ ಯತೀಂದ್ರ ಸ್ಫೋಟಕ ಹೇಳಿಕೆ

ಹಿರಿಯ ನಾಯಕರೊಂದಿಗಿನ ಚರ್ಚೆ ಬಳಿಕ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ: ದೆಹಲಿಗೆ ತೆರಳುವ ಮುನ್ನ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ

ಹೃದಯ ಛಿದ್ರವಾಗಿದೆ: ಆಫ್ರಿಕಾ ವಿರುದ್ಧದ ಸರಣಿ ಹೀನಾಯ ಸೋಲಿನ ನಂತರ ಇಡೀ ದೇಶದ ಕ್ಷಮೆಯಾಚಿಸಿದ ರಿಷಭ್ ಪಂತ್!

WPL Auction 2026: ಬರೋಬ್ಬರಿ 3.2 ಕೋಟಿ ರೂ. ಗೆ ಆಲ್ ರೌಂಡರ್ ದೀಪ್ತಿ ಶರ್ಮಾ ಸೋಲ್ಡೌಟ್‌! ಸ್ಟನ್ ಆದ ಗಂಗೂಲಿ

ತಮಿಳುನಾಡು-ಆಂಧ್ರ ತೀರಕ್ಕೆ ದಿತ್ವಾ ಚಂಡಮಾರುತ: ಬೆಂಗಳೂರು ಸೇರಿ ಕರ್ನಾಟಕದಲ್ಲಿ 4 ದಿನ ಭಾರೀ ಮಳೆ ಸಾಧ್ಯತೆ; IMD ಎಚ್ಚರಿಕೆ

SCROLL FOR NEXT