ಕೃಷಿ-ಪರಿಸರ

ನೀರು ಹಲಸು

ಬೇಸಿಗೆಯಲ್ಲಿ ಎಳೆಯ ಹಲಸಿನ ಮಿಡಿಯ ಸಾಂಬರ್, ಪಲ್ಯ, ಗೊಜ್ಜಿನ ರುಚಿ ಸವಿದು ಬಹಳ...

ಬೇಸಿಗೆಯಲ್ಲಿ ಎಳೆಯ ಹಲಸಿನ ಮಿಡಿಯ ಸಾಂಬರ್, ಪಲ್ಯ, ಗೊಜ್ಜಿನ ರುಚಿ ಸವಿದು ಬಹಳ ದಿನಗಳಾಗಿರಬಹುದು. ಅದೇ ಹಲಸಿನ ಮಿಡಿಯ ರುಚಿ ನೆನಪಿಸುವ, ಅದಕ್ಕಿಂತ ಜಾಸ್ತಿ ರುಚಿಯಾಗಿರುವ ಅಪರೂಪದ ತರಕಾರಿ ದೊರೆಯುವ ಕಾಲವಿದು.
ಹೌದು, ನೋಡಲು ಹಲಸಿನಕಾಯಿಯಂತಿರುವ ಬಣ್ಣದಲ್ಲಿ ಮಾತ್ರ ಹಸಿರಾಗಿರುವ ತರಕಾರಿ ಹಲಸೇ ನೀರು ಹಲಸು. ಇದನ್ನು ಕೆಲವು ಕಡೆ ಮುಳ್ಳು ಹಲಸೆಂದೂ ಕರೆಯುವುದುಂಟು. ಸಸ್ಯಶಾಸ್ತ್ರೀಯವಾಗಿ ಇದನ್ನು Artocarpus insicus ಅಂತಾರೆ. ಮಧ್ಯಮ ಗಾತ್ರದ ಹಲಸಿನ ಮರದಷ್ಟೇ ಎತ್ತರ. ಕರಾವಳಿಗರ ಕೈತೋಟಗಳಲ್ಲಿ ಕಾಣುವ ಈ ಮರಗಳು ಬೇರೆಡೆ ಅತಿ ವಿರಳ.

ಆಕಾರ ಹೇಗೆ?
ನೀರು ಹಲಸಿನ ಕಾಯಿಯು ಗೋಲವಾಗಿರುತ್ತದೆ. ಕಾಯಿಯ ಮೇಲೆಲ್ಲಾ ಹಲಸಿನ ಕಾಯಿಯ ಮೇಲಿರುವಂತೆ ಮುಳ್ಳುಗಳು. ಕಾಯಿಯೊಳಗೆ 8- 20 ಬೀಜಗಳು. ಇದೇ ಜಾತಿಗೆ ಸೇರಿದ ಬೇರು ಹಲಸಿನ ಕಾಯಿಯ ಮೇಲೆ ಮುಳ್ಳುಗಳಿರವು. ಅಂತೆಯೇ ಕಾಯಿಯ ಒಳಗೆ ಬೀಜಗಳೇ ಇರಲಾರವು. ಬೇರು ಹಲಸಿನ ಮರದ ಬೇರುಗಳು ಮೊಳಕೆಯೊಡೆದು ಮರಿ ಗಿಡಗಳನ್ನು ನೀಡುತ್ತವೆ. ಆದ್ದರಿಂದಲೇ ಇದನ್ನು ಬೇರು ಹಲಸೆಂದು ಕರೆಯುತ್ತಾರೆ. ಆದರೆ, ಕೆಲವು ಕಡೆ ಬೇರು ಹಲಸನ್ನೇ ನೀರು ಹಲಸೆಂದು ಕರೆಯುತ್ತಾರೆ.
ನೀರು ಹಲಸಿನ ಕಾಯಿಯಲ್ಲಿ ಬೀಜಗಳಿದ್ದರೂ ಕೆಲವೇ ಕೆಲವು ಬೀಜಗಳು ಮೊಳಕೆಯೊಡೆದು ಸಸ್ಯಗಳು ಬೆಳೆಯುತ್ತವೆ. ಇಂಥ ಮರಿಗಿಡವನ್ನು ಅತ್ಯಂತ ಕಾಳಜಿ ವಹಿಸಿ, ಲಾಲನೆ- ಪಾಲನೆ ಮಾಡಿದರೆ ಮಾತ್ರ ಹೊಸ ಗಿಡ ಬೆಳೆಯಬಹುದು.

ಇಳುವರಿ
ಗಿಡ ನೆಟ್ಟು 5- 6 ವರ್ಷದಲ್ಲಿ ಮರವು ಕಾಯಿ ಬಿಡಲಾರಂಭಿಸುತ್ತದೆ. ಆರಂಭದಲ್ಲಿ ಕೆಲವು ಗಿಡಗಳು ವರ್ಷಕ್ಕೊಮ್ಮೆ ಮಾತ್ರ ಕಾಯಿ ಬಿಡುತ್ತವೆ. 10-15 ವರ್ಷ ವಯಸ್ಸಿನ ಮರವು ತನ್ನ ಗಾತ್ರಕ್ಕೆ ತಕ್ಕಂತೆ 100- 300 ಕಾಯಿಗಳನ್ನು ವರ್ಷದಲ್ಲಿ 2 ಬಾರಿ ಬಿಡುತ್ತವೆ.

ಬಲು ಬೇಡಿಕೆ
ಆಗಸ್ಟ್- ಸೆಪ್ಟೆಂಬರ್‌ನಲ್ಲಿ ಒಮ್ಮೆ ಕಾಯಿಯಾದರೆ ಪುನಃ ಡಿಸೆಂಬರ್‌ನಲ್ಲಿ ಕಾಯಿ ಬಿಡುತ್ತವೆ. ಕೇವಲ ತರಕಾರಿಯಾಗಿ ಮಾತ್ರ ಈ ಹಲಸನ್ನು ಬೆಳೆಸಬಹುದು. ಸಂತೆ ಅಥವಾ ಮಾರುಕಟ್ಟೆಯಲ್ಲಿ ಅಪರೂಪಕ್ಕೆ ಕಾಣುವ ಈ ತರಕಾರಿಗೆ ಬಲು ಬೇಡಿಕೆ. ಒಂದು ಕಾಯಿಗೆ ರು. 20-40ರವರೆಗೆ ಮಾರುಕಟ್ಟೆಯಲ್ಲಿ ರೇಟಿದೆ.

ಬಳಕೆ
ಎಳೆಯ ನೀರು ಹಲಸಿನ ಸಾಂಬಾರ್ ಬಲು ರುಚಿ. ಅಂತೆಯೇ ಇದರ ಪಲ್ಯ, ಚಟ್ನಿ ರುಚಿಕಟ್ಟು. ಬೀಜವನ್ನು ಬೆಂಕಿಯಲ್ಲಿ ಸುಟ್ಟು ತಿಂದರೆ ಆ ಟೇಸ್ಟನ್ನು ನಿಮ್ಮ ನಾಲಗೆ ಎಂದೂ ಮರೆಯದು. ನೀರು ಹಲಸಿನ ಕಾಯಿಯಲ್ಲಿ ಅಧಿಕ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಅಂಶವಿದ್ದು, ಕೊಬ್ಬು ಮತ್ತು ಪ್ರೊಟೀನ್ ಅಂಶ ಬಹಳ ಕಡಿಮೆ ಪ್ರಮಾಣದಲ್ಲಿರುತ್ತದೆ. ಕಾಯಿ ಮತ್ತು ಬೀಜಗಳಲ್ಲಿ ವಿಟಮಿನ್ 'ಬಿ' ಅಧಿಕವಿರುತ್ತದೆ.

- ಪ್ರೊ. ಶಿವಾನಂದ ಎಸ್. ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್