ಕೃಷಿ-ಪರಿಸರ

ಮಾಕಂದಿ ಮಹಿಮೆ

ಬಿಳಿಯಾಗಿರುವ ತಲೆಗೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ಸಿಗುವ ಅನೇಕ ತೈಲಗಳಲ್ಲಿ...

ಬಿಳಿಯಾಗಿರುವ ತಲೆಗೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ಸಿಗುವ ಅನೇಕ ತೈಲಗಳಲ್ಲಿ ಮುಖ್ಯವಾಗಿ ಬೆರೆಯುವುದು ಈ ಬೇರಿನ ಸತ್ವವೇ. ಆದುದರಿಂದ ಮಾಕಂದಿಗೆ ಯೌವ್ವನಪ್ರದಾಯಿನಿ ಎಂದೂ ಕರೆಯಲಾಗುತ್ತದೆ.
ಸಂಸ್ಕೃತದಲ್ಲಿ ಪಾಷಾಣಭೇದಿ, ಗುಜರಾತಿನಲ್ಲಿ ಗರ್ಮಾ, ಹಿಂದಿಯಲ್ಲಿ ಪಥಾರ್ಚರ್, ತಮಿಳಿನಲ್ಲಿ ಮರಂದ್ ಕೂರ್ಕನ ಎಂಬ ಹೆಸರಿನಿಂದ ಕರೆಯಲಾಗುವ ಅದರ ವ್ಯವಸಾಯ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ರಾಜಸ್ಥಾನಗಳಲ್ಲಿದೆ. ಇದರ ಎಲೆಗಳಿಂದ ಅನೇಕ ಉದರ ಸಂಬಂಧಿ ರೋಗಗಳಿಗೆ ಔಷಧಗಳು ತಯಾರಾಗಿ ಮಾರುಕಟ್ಟೆಗೆ ಬಂದಿವೆ.

ಹಲವು ರೋಗಕ್ಕೆ ಮದ್ದು
ಹೃದಯರೋಗ, ಆಸ್ತಮಾ, ರಕ್ತದ ಒತ್ತಡ ಕಣ್ಣಿನ ತೊಂದರೆ ಗುಣಪಡಿಸುವ ಶಕ್ತಿಯಿರುವ ಮಾಕಂದಿಯ ಬೇರಿಗೆ ಕೆಲವು ವಿಧದ ಕ್ಯಾನ್ಸರ್ ರೋಗದ ಕೋಶ ನಾಶಪಡಿಸುವ ಶಕ್ತಿ ಇದೆ ಎನ್ನುವುದು ಸಂಶೋಧನೆಗಳಿಂದ ಗೊತ್ತಾಗಿದೆ.
ಮಹಾರಾಷ್ಟ್ರದ ಹವೆ ಮತ್ತು ಮಣ್ಣು ಮಾಕಂದಿ ಕೃಷಿಗೆ ಅತ್ಯಂತ ಸೂಕ್ತವಾದುದು ಎಂದು ತಿಳಿದುಬಂದಿದ್ದರೂ ಇತರ ರಾಜ್ಯಗಳಲ್ಲೂ ಅದು ಬೆಳೆದವನಿಗೆ ನಷ್ಟವುಂಟು ಮಾಡಿಲ್ಲ. ಆದರೆ, ಇದನ್ನು ಒಂದೆರಡು ಎಕರೆಗಳಲ್ಲಿ ಬೆಳೆದರೆ ಮಾರುಕಟ್ಟೆ ಸಿಗುವುದು ಕಷ್ಟ. ಒಂದು ಪರಿಸರದಲ್ಲಿ ಹೆಚ್ಚು ಪ್ರದೇಶದಲ್ಲಿ ಹೆಚ್ಚು ಮಂದಿ ರೈತರು ಬೆಳೆಯಬೇಕಾಗುತ್ತದೆ.

ಹಲವು ತಳಿಗಳುಂಟು
ಸಸ್ಯ ವಿಜ್ಞಾನದಲ್ಲಿ ಕೊಲಿಯಸ್ ಪೋರ್ಸ್ಕೋಲೈ ಎಂದು ಹೆಸರಿರುವ ಮಾಕಂದಿಗೆ ಫೊರ್‌ಸ್ಕೊಲಿನ್ ಎಂದೂ ಕರೆಯಲಾಗುತ್ತದೆ. ಅದರಲ್ಲಿ ಮೈಮುಲ್ ಮಾಂಗನಿಪೇರು ಜರ್ಮಾಯಿ ಮುಂತಾದ ಹಲವು ತಳಿಗಳಿವೆ. ಹೊಲವನ್ನು ಉತ್ತು ಎತ್ತರದ ಸಾಲು ತಯಾರಿಸಲಾಗುತ್ತದೆ.

ಬೆಳೆಯುವ ವಿಧಾನ
ಮಾಕಂದಿ ಗಿಡದ ಮಧ್ಯ ಅಥವಾ ಕೆಳಭಾಗದ ತುಂಡುಗಳನ್ನು ಮಡಿಗಳಲ್ಲಿ ಮೊದಲೇ ನೆಡಲಾಗುತ್ತದೆ. ಅದರಲ್ಲಿ ಬೇರು ಕೊಟ್ಟ ತುಂಡುಗಳನ್ನು ಕಿತ್ತು ಎರಡು ಅಡುಗೆ ಒಂದರಂತೆ ಸಾಲುಗಳಲ್ಲಿ ನೆಡಲಾಗುತ್ತದೆ. ಜುಲೈ ತಿಂಗಳು ನಾಟಿಗೆ ಸೂಕ್ತ ಸಮಯ. ಮಾರ್ಚ್ ತಿಂಗಳಲ್ಲಿ ಬೇರುಗಳು ಅಗೆಯಲು ಸಿದ್ಧವಾಗುತ್ತವೆ. ಸಾವಯವ ಗೊಬ್ಬರ ಅಲ್ಲದೆ ರಸಗೊಬ್ಬರವನ್ನೂ ಬಳಸಲಾಗುತ್ತದೆ. ಗೆದ್ದಲಿನ ಕಾಟ ತಡೆಯಲು ಕಾರ್ಬೊಫ್ಯೂರಾನ್ ಹರಳು, ಬೇವಿನ ಹಿಂಡಿ ಉಪಯೋಗಿಸುತ್ತಾರೆ. ಒಂದು ಹೆಕ್ಟೇರಿಗೆ 55 ಸಾವಿರ ಗಿಡ ಬೇಕಾಗುತ್ತವೆ. ಬೇಸಗೆಯಲ್ಲಿ ಹನಿ ನೀರಾವರಿ ಅಗತ್ಯ.
ಕಳೆ ಬಾರದಂತೆ ನೋಡಿಕೊಳ್ಳುವುದು ಈ ಬೆಳೆಗೆ ಅವಶ್ಯ. ಗಿಡ ಒಣಗುತ್ತಿರುವಾಗ ಕೈಯಿಂದಲೇ ಕೀಳಬಹುದು. ಬೇರುಸಹಿತ ಗೆಡ್ಡೆ ಪ್ರತ್ಯೇಕಿಸಿ, ಶುಚಿಗೊಳಿಸಿ ಒಣಗಿಸುತ್ತಾರೆ. ಬೇರಿನಲ್ಲಿ ಶೇ. 0.08ರಿಂದ ಶೇ. 0.15ರಷ್ಟು ತೈಲಾಂಶವಿದೆ. ಗಿಡದ ತುದಿ ಭಾಗದ ಎಲೆಗಳಲ್ಲೂ ತೈಲ ಸಿಗುತ್ತದೆ. ಜಪಾನ್, ಅಮೆರಿಕ, ರಷ್ಯಾ ಜರ್ಮನಿಗಳಿಂದ ಇದರ ಬೇರುಗಳಿಗೆ ಅಪಾರ ಬೇಡಿಕೆಯಿದೆ.

ಖರ್ಚು ಕಡಿಮೆ, ಲಾಭ ಅಧಿಕ
ಎಕರೆಗೆ ಖರ್ಚು 12ರಿಂದ 15 ಸಾವಿರ. ಕಿಲೋಗೆ 200- 250 ಸಿಗುತ್ತದೆ. ಇದರ ಎಲೆಗಳಿಗೆ ತೂಕ ಹೆಚ್ಚಿಸುವ ಶಕ್ತಿಯಿದೆಯೆಂದೂ ನಂಬಿಕೆಯಿದೆ. ಮಸಾಲೆಯಾಗಿ ಅದನ್ನು ಬಳಸುತ್ತಾರೆ. ಒಂದು ಹೆಕ್ಟೇರಿಗೆ ಹಸಿಯಿರುವ ಬೇರುಗಳು ಗರಿಷ್ಠ 200 ಟನ್ ಸಿಗುತ್ತದೆ. ಒಣಗಿದಾಗ ಇದು 22 ಟನ್ನಿಗಿಳಿಯುತ್ತದೆ. ಬರುವ ಲಾಭ ಗರಿಷ್ಠ ಎರಡು ಲಕ್ಷ ರು.

- ಪ.ರಾಮಕೃಷ್ಣ ಶಾಸ್ತ್ರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

'ತಂದಿಟ್ಟ ಗಿಡ ಮನೆಗೇ ಹಾನಿ ಮಾಡಿದ್ರೆ..'; 'ನೋ ಕ್ಲಾಸ್', BiggBoss ಇತಿಹಾಸದ ಅತಿದೊಡ್ಡ ನಿರ್ಧಾರದ ಸುಳಿವು ನೀಡಿದ ಕಿಚ್ಚಾ ಸುದೀಪ್

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌‌ವೇಯಲ್ಲಿ ಅಪಘಾತಕ್ಕೆ ಬಿಗ್ ಟ್ವಿಸ್ಟ್: ಸ್ನೇಹಿತನಿಂದಲೇ ಭೂಮಿಕಾ ಕೊಲೆ?

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!