ಕೃಷಿ-ಪರಿಸರ

ಅಗಸೆ

ಬರನಿರೋಧಕ ಶಕ್ತಿ ಹೊಂದಿರುವ ಬೆಳೆಗಳ ಪೈಕಿ ಅಗಸೆಯೂ ಒಂದು. ಮಲೆನಾಡು ಮತ್ತು ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಇದನ್ನು ಬೆಳೆಯುತ್ತಾರೆ. ಹಲವು ಔಷಧೀಯ ಗುಣಗಳನ್ನು ತನ್ನೊಡಲಲ್ಲಿ ಇರಿಸಿಕೊಂಡಿರುವ ಅಗಸೆಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ, ಇದನ್ನು ಬೆಳೆಯುವ ಪ್ರಮಾಣ ಇತ್ತೀಚೆಗೆ ತೀರಾ ಇಳಿಮುಖವಾಗುತ್ತಿದೆ.

ಬೆಳೆಯುವ ವಿಧಾನ
ಅಗಸೆಯನ್ನು ಏಕಬೆಳೆಯಾಗಿ ಬೆಳೆಯುವುದು ತೀರಾ ಕಮ್ಮಿ. ಇದಕ್ಕೆ ಕಾರಣವೂ ಉಂಟು. ಇದನ್ನು ಹೆಚ್ಚಾಗಿ ಜಮೀನಿನ ಮೇರೆಯಲ್ಲಿ ಬಿತ್ತುತ್ತಾರೆ. ಇದರಿಂದ ಜಮೀನಿನಲ್ಲಿರುವ ಇತರ ಬೆಳೆಗಳಿಗೆ ಕೀಟ, ರೋಗ ಬಾರದಂತೆ ತಡೆಯುವ ಸೈನಿಕನಂತೆ ಕೆಲಸ ಮಾಡುತ್ತದೆ. ಹಾಗಾಗಿ ಮೇರೆಯಲ್ಲಿ ಬಿತ್ತುತ್ತಾರೆ ಎಂದು ಅನುಭವಿ ಕೃಷಿಕರು ಹೇಳುತ್ತಾರೆ. ಬೀಜವನ್ನು ಸಾಲಿನಿಂದ ಸಾಲಿಗೆ 10- 12 ಇಂಚು ಅಂತರದಲ್ಲಿ ಬಿತ್ತಬೇಕು. ಕಾಳಿನಿಂದ ಕಾಳಿಗೆ ಎರಡೂವರೆ ಇಂಚು ಅಂತರವಿರಬೇಕು. ಅಗಸೆಯನ್ನು ಹೆಚ್ಚಾಗಿ ಜೋಳ, ಗೋದಿ, ಕಡಲೆ ಬಿತ್ತುವಾಗ ಮೇರೆಯಲ್ಲಿ ಬಿತ್ತುವುದು ವಾಡಿಕೆ. ಬಿತ್ತಿದ ಎರಡೂವರೆ ತಿಂಗಳಿಗೆ ಫಸಲು ಕೈಗೆ ಬರುತ್ತದೆ. ಇದಕ್ಕೆ ಯಾವುದೇ ಕೀಟ, ರೋಗ ಬಾಧೆ ಬಾರದು. ಬಿತ್ತನೆಗೆ ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ಸಕಾಲ. ಬಿತ್ತುವ ಸಮಯದಲ್ಲಿ ಭೂಮಿ ಹಸಿಯಾಗಿದ್ದರೆ ಸಾಕು. ಇದಕ್ಕೆ ಮಳೆ ಅಥವಾ ನೀರು ಹಾಯಿಸಬೇಕೆಂದಿನಿಲ್ಲ. ವಾತಾವರಣದಲ್ಲಿನ ತೇವಾಂಶ ಹೀರಿಕೊಂಡು ಬೆಳೆಯುವ ತಾಕತ್ತು ಅಗಸೆಗಿದೆ. ಹಾಗಾಗಿಯೇ ಇದಕ್ಕೆ ಬರನಿರೋಧಕ ಬೆಳೆ ಎಂದು ಕರೆಯುತ್ತಾರೆ.

ಮಣ್ಣು
ಸಾಮಾನ್ಯವಾಗಿ ಅಗಸೆಯನ್ನು ಎಲ್ಲ ನಮೂನೆಯ ಮಣ್ಣಲ್ಲಿ ಬೆಳೆಯುತ್ತಾರೆ. ಹೆಚ್ಚಿನ ಇಳುವರಿಗಾಗಿ ಕಪ್ಪು, ಕೆಂಪು ಮಣ್ಣು ಇದ್ದರೆ ಉತ್ತಮ.

ಉಪಯೋಗ
ಅಗಸೆಯಲ್ಲಿ ಹಲವು ರೋಗ ನಿವಾರಿಸುವ ಶಕ್ತಿ ಇದೆ. ಮುಖ್ಯವಾಗಿ ಹೃದಯಸಂಬಂಧಿ ರೋಗ, ಅಸ್ತಮಾ, ರಕ್ತದೊತ್ತಡ ಇತರ ರೋಗಗಳಿಗೆ ಔಷಧವಾಗಿ ಇದನ್ನು ಬಳಸುತ್ತಾರೆ. ಅಗಸೆ ಎಣ್ಣೆಯಿಂದ ಕಟ್ಟಿಗೆಗೆ ಹಚ್ಚುವುದರಿಂದ ಅದಕ್ಕೆ ಯಾವುದೇ ಥರದ ಹುಳು ಬಾಧೆ ಕಾಡದು. ಅಲ್ಲದೆ, ಕಟ್ಟಿಗೆ ಲಕಲಕ ಎಂದು ಹೊಳೆಯುತ್ತದೆ. ಅಗಸೆಯಿಂದ ಮಾಡುವ ಚಟ್ನಿ ಬಲು ರುಚಿಕರವಾಗಿರುತ್ತದೆ.
ಹೆಚ್ಚಿನ ಮಾಹಿತಿಗೆ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ರೈತ ಕಲ್ಲಪ್ಪ (ಮೊ.9980634062) ಅವರನ್ನು ಸಂಪರ್ಕಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್