ಕೃಷಿ-ಪರಿಸರ

ಅವರಾದಿ ಬದನೆ

ಕುಂದಾನಗರಿ ಬೆಳಗಾವಿ ಜಿಲ್ಲೆ ತರಕಾರಿ ಬೆಳೆಗೂ ಹೆಸರುವಾಸಿ. ಇಲ್ಲಿನ ಕಾಯಿಪಲ್ಲೆ ನೆರೆಯ ಗೋವಾ, ಮಹಾರಾಷ್ಟ್ರದ ಸತಾರಾ, ಪುಣೆ ಹೀಗೆ ಹತ್ತು- ಹಲವು ಕಡೆಗಳಲ್ಲಿ ಭಾರಿ ಬೇಡಿಕೆ. ಇದಕ್ಕೆ ಕಾರಣ ಇಲ್ಲಿನ ದೇಸಿ ತಳಿಗಳು. ಆದರೆ, ಇವುಗಳಿಗೆ ಹೆಚ್ಚು ಪ್ರಚಾರ ಸಿಕ್ಕಿಲ್ಲ ಅನ್ನೋದು ನೋವಿನ ಸಂಗತಿ. ಹೀಗಾಗಿ ಕೇವಲ ಸ್ಥಳೀಯವಾಗಿ ಮಾತ್ರ ಪರಿಚಿತ. ಅಂಥ ಅಪರೂಪದ ತಳಿ ಪೈಕಿ ಅವರಾದಿ ಬದನೆಯೂ ಒಂದು.
ಹೈಬ್ರಿಡ್ ತಳಿ ಬೀಜಗಳ ನಡುವೆ ಇದು ತನ್ನ ಖದರ್ ಕಳೆದುಕೊಂಡಿಲ್ಲ. ಅಷ್ಟೇ ಅಲ್ಲ, ಅದಕ್ಕೆ ಸೆಡ್ಡು ಹೊಡೆದು ನಿಂತಿದೆ ಎನ್ನುವುದು ಸಂತಸದ ಸಂಗತಿ.
ಬೆಳಗಾವಿ ಜಿಲ್ಲೆಯಲ್ಲಿ ಕಬ್ಬನ್ನು ಹೆಚ್ಚು ಬೆಳೆಯಲಾಗುತ್ತದೆ. ಇದರ ಮಧ್ಯೆ ಕೆಲವು ಗ್ರಾಮಗಳಲ್ಲಿ ಅವರಾದಿ ಬದನೆಯನ್ನೂ ಬೆಳೆಯಲಾಗುತ್ತದೆ. ಅವರಾದಿ ಬದನೆಯ ಅಡುಗೆ ರುಚಿ ಜನರ ನಾಲಗೆಯ ಮೇಲಿದೆ. ಕಿತ್ತೂರು ತಾಲೂಕಿನ ಅವರಾದಿಯ ಬದನೆ 'ಕಿತ್ತೂರಿನ ಸೋಮವಾರ ಪೇಟೆಯ ರಾಜ' ಎಂದೇ ಜನಜನಿತ. ಅಷ್ಟರ ಮಟ್ಟಿಗೆ ಅವರಾದಿ ಬದನೆ ಫೇಮಸ್ಸು.

ರೋಗ ನಿರೋಧಕ
ಬದನೆಯನ್ನು ಮಳೆಯಾಶ್ರಿತ ಮತ್ತು ನೀರಾವರಿ ಪದ್ಧತಿಯಲ್ಲೂ ಬೆಳೆಯಬಹುದು. ಅಗಸ್ಟ್‌ನಲ್ಲಿ ನಾಟಿ ಮಾಡಲು ಸಕಾಲ. ಎಕರೆಗೆ 250 ಗ್ರಾಂ ಬೀಜ ಸಾಕು. ಜನವರಿಯಿಂದ ಫಸಲು ಕೈಗೆ ಬರಲು ಶುರುವಾಗುತ್ತದೆ. ವಾರದಲ್ಲಿ 2 ಬಾರಿ ಕಟಾವು ಮಾಡಬೇಕು. ಚೆನ್ನಾಗಿ ನಿರ್ವಹಣೆ ಮಾಡಿದರೆ ಪ್ರತಿ ಬಾರಿ ಎಕರೆಗೆ 8ರಿಂದ 10 ಕ್ವಿಂಟಲ್ ಇಳುವರಿ ಸಿಗುತ್ತದೆ. ಇದು ರೋಗ ನಿರೋಧಕ ಗುಣ ಹೊಂದಿದೆ ಎಂಬುದು ಮತ್ತೊಂದು ವೈಶಿಷ್ಟ್ಯ.

ಸಕತ್ ರುಚಿ
ಬದನೆಯು ಹಸಿರು ಮಿಶ್ರಿತ ಬಿಳಿ ಬಣ್ಣ ಹೊಂದಿದೆ. ಇದರಿಂದ ಮಾಡಿದ ಎಳೆಯ ಕಾಯಿಯ ಎಣಗಾಯಿ(ಪಲ್ಯ) ಬಲು ರುಚಿ. ಹಬ್ಬ- ಹರಿದಿನಗಳಲ್ಲಿ ಇದು ವಿಶೇಷ ಖಾದ್ಯ. ಅವರಾದಿ ಸುತ್ತಲೂ ಇರುವ ಗ್ರಾಮಗಳಾದ ಬಾಗೇವಾಡಿ ಎಂ.ಕೆ. ಹುಬ್ಬಳ್ಳಿ, ಸಂಪಗಾಂವ ಸಂತೆಗಳಲ್ಲಿ ಇದರದೇ ಪಾರಮ್ಯ.
ಇಂಥವೇ ಹಲವಾರು ತಳಿಗಳು ರಾಜ್ಯದ ಹಲವು ಭಾಗಗಳಲ್ಲಿ ಅವಸಾನದ ಅಂಚಿನಲ್ಲಿವೆ. ಆದರೆ, ಅವುಗಳನ್ನು ಸಂರಕ್ಷಿಸುವ ಕಾರ್ಯ ಮಾತ್ರ ನಡೆಯುತ್ತಿಲ್ಲ ಎಂಬುದು ಪ್ರಜ್ಞಾವಂತ ರೈತರ ಕೊರಗು. ಅಂಥ ದುರದೃಷ್ಟದ ಸಾಲಿಗೆ ಅವರಾದಿ ಬದನೆ ತಲುಪದಿರಲಿ. ಅವರಾದಿ ಬದನೆ ಕುರಿತ ಅನುಭವ ಕೇಳಲು ಅವರಾದಿ ಗ್ರಾಮದ ಮಲ್ಲಪ್ಪ ಬಶೆಟ್ಟಿ (ಮೊ. 7353809729) ಅವರನ್ನು ಸಂಪರ್ಕಿಸಬಹುದು.

- ವಿನೋದ ರಾ. ಪಾಟೀಲ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್