ಕೃಷಿ-ಪರಿಸರ

ಗಲಾಟಿ ಹೂವು

ಪುಷ್ಪ ಬೆಳೆಯಲ್ಲಿ ಮುಂಚೂಣಿಗೆ ಬರುತ್ತಿರುವ ಹೆಸರು ಗಲಾಟಿ ಹೂವು. ನೋಡಲು ಸೇವಂತಿಯಂತೆ ಕಾಣುವ ಇದು ಬಲು ಆಕರ್ಷಕ ಹಾಗೂ ಸುವಾಸನೆಭರಿತ. ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಇದನ್ನು ಯಥೇಚ್ಛವಾಗಿ ಬೆಳೆಯುತ್ತಾರೆ.

ಬೆಳೆಯುವ ವಿಧಾನ
ಜಮೀನನ್ನು ಹದ ಮಾಡಿ ಗೊಬ್ಬರ ಹಾಕಿದ ನಂತರ 2x2 ಅಡಿ ಅಂತರದಲ್ಲಿ ಗುಂಡಿ ತೋಡಬೇಕು. ಬಳಿಕ ಬೇರು ಮುಚ್ಚುವಷ್ಟು ಮಾತ್ರ ಆಳದಲ್ಲಿ ಸಸಿ ನಾಟಿ ಮಾಡಬೇಕು. ಸಾಲಿನಿಂದ ಸಾಲಿಗೆ 3 ಅಡಿ ಅಂತರವಿದ್ದರೆ ಸಾಕು. ನಂತರ ಆಗಾಗ ನೀರು, ಗೊಬ್ಬರ ನೀಡಬೇಕು. ಒಂದು ಎಕರೆಗೆ 10 ಸಾವಿರ ಸಸಿಗಳು ಬೇಕಾಗುತ್ತವೆ. ಇನ್ನು ಸಸಿ ನಾಟಿ ಮಾಡಿದ 3 ತಿಂಗಳ ನಂತರ ಹೂವು ಬಿಡಲು ಪ್ರಾರಂಭಿಸುತ್ತದೆ. ಹೂವು ಕೊಡಲು ಪ್ರಾರಂಭಿಸಿದ ನಂತರ ನಿರಂತರ 6 ತಿಂಗಳು ಇಳುವರಿ ಸಿಗುತ್ತವೆ. ಹೂವಿನ ಬೆಳೆಯ ಮಧ್ಯೆ ಅಲ್ಪಾವಧಿ ಬೆಳೆಗಳನ್ನು ಬೆಳೆಯಬಹುದು. ಮೆಣಸಿನಕಾಯಿ, ಉಳ್ಳಾಗಡ್ಡಿ, ಬದನೆ, ಪಾಲಕ್ ಮೊದಲಾದ ಬೆಳೆಗಳನ್ನು ಗಲಾಟಿ ಹೂವಿನ ಮಧ್ಯೆ ಹಾಕಬಹುದು. ಗಲಾಟಿ ಹೂವಿಗೆ ಪ್ರಮುಖವಾಗಿ ಸೀರು ಬಾಧೆ ಕಾಡಬಹುದು. ತಕ್ಷಣ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಎಕರೆಗೆ 15- 20 ಸಾವಿರ ಖರ್ಚು ಬರುತ್ತದೆ. ಕನಿಷ್ಠ 2 ಲಕ್ಷ ಆದಾಯ ಗಳಿಸಬಹುದು.

ಮಣ್ಣು
ಇದಕ್ಕೆ ಮರಳು ಮಿಶ್ರಿತ ಕೆಂಪು ಮಣ್ಣು ಇದ್ದರೆ ಉತ್ತಮ. ಇತರೇ ಮಣ್ಣಲ್ಲಿಯೂ ಬೆಳೆಯಬಹುದು. ಆದರೆ, ಮರಳು ಮಿಶ್ರಿತ ಕೆಂಪು ಮಣ್ಣಲ್ಲಿ ಬೆಳೆದರೆ ಇಳುವರಿ ಜಾಸ್ತಿ ಬರುತ್ತೆ. ಒಟ್ಟಿನಲ್ಲಿ ಜಮೀನಿನಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತಿರಬೇಕು.
ಹೆಚ್ಚಿನ ಮಾಹಿತಿಗಾಗಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಬನಹಟ್ಟಿಯ ರೈತ ಗಿರಿಮಲ್ಲಪ್ಪ ಹೂಗಾರ (ಮೊ:7760893077) ಅವರನ್ನು ಸಂಪರ್ಕಿಸಬಹುದು.

- ಮಹೇಶ್ ಅರಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್