ಕೃಷಿ-ಪರಿಸರ

ಗುಲಾಬಿ ಚೆಂಡು

ಗುಲಾಬಿ, ಚೆಂಡು ಹೂವನ್ನು ಮಿಶ್ರಬೆಳೆಯಾಗಿ ಬೆಳೆದು ಇಲ್ಲೊಬ್ಬರು ರೈತರು...

ಪುಷ್ಪ ಕೃಷಿಯಿಂದಲೂ ಲಕ್ಷಾಂತರ ಆದಾಯ ಗಳಿಸಬಹುದು. ಆ ಮೂಲಕ ಬದುಕು ಕಟ್ಟಿಕೊಳ್ಳಬಹುದು. ಗುಲಾಬಿ, ಚೆಂಡು ಹೂವನ್ನು ಮಿಶ್ರಬೆಳೆಯಾಗಿ ಬೆಳೆದು ಇಲ್ಲೊಬ್ಬರು ರೈತರು ಕಾಸು ಸಂಪಾದಿಸುತ್ತಿದ್ದಾರೆ. ಅದು ತುಂಡು ಜಮೀನಲ್ಲಿ.
ಶಿವಮೊಗ್ಗದಿಂದ ಚಿತ್ರದುರ್ಗ ಮಾರ್ಗದಲ್ಲಿ 20 ಕಿ.ಮೀ. ಪಯಣಿಸಿದರೆ ಕೈಮರ ಸಿಗುತ್ತದೆ. ಅಲ್ಲೊಂದು ಸಣ್ಣ ಹಳ್ಳಿ ಇದೆ. ಅಲ್ಲಿರುವುದೇ ಪಿ. ಮಲ್ಲೇಶಪ್ಪ ಎಂಬವರ ಪುಷ್ಪ ಕೃಷಿ ಜಮೀನು. 30 ಗುಂಟೆ ಜಾಗದಲ್ಲಿ 600ಕ್ಕೂ ಮಿಕ್ಕಿ ಗುಲಾಬಿ ಗಿಡ ನೆಟ್ಟಿದ್ದಾರೆ. (ಕೆಂಪು ಮುಳ್ಳು ಗುಲಾಬಿ) ಅದು ನೋಡಲು ಬಲು ಆಕರ್ಷಕ.

ಬೆಳೆಯುವ ಕ್ರಮ
ಮೊದಲು ಗದ್ದೆಯನ್ನು ಹದ ಮಾಡಿಕೊಂಡಿರಬೇಕು. ಒಂದು ಸಾಲಿನಿಂದ ಇನ್ನೊಂದು ಸಾಲಿಗೆ 9 ಅಡಿ ಅಂತರ ಇರಬೇಕು. ಗಿಡದಿಂದ ಗಿಡಕ್ಕೆ ನಾಲ್ಕೂವರೆ ಅಡಿ ಅಂತರ ಅಗತ್ಯ. ಒಂದೂವರೆ ಅಡಿ ಗುಂಡಿ ತೆಗೆದು ಕೆಂಪು ಮಣ್ಣನ್ನು ಬಿಟ್ಟು, ಬೇರೆ ಯಾವ ಮಣ್ಣನ್ನು ಹಾಕಬಹುದು. ಬುಡಕ್ಕೆ ಕೊಟ್ಟಿಗೆ, ರಸಗೊಬ್ಬರ ಹಾಕದಿರುವುದು ಒಳಿತು.
ಗಿಡ ನೆಟ್ಟ ಒಂದೂವರೆ ತಿಂಗಳ ನಂತರ ಸಾವಯವ ಗೊಬ್ಬರ ಕೊಡಬೇಕು. ಎರಡು ತಿಂಗಳವರೆಗೆ ಯಾವುದೇ ಶಕ್ತಿಯುತ ಔಷಧಿ ಸಿಂಪಡಿಸಬಾರದು. ಮಲ್ಲೇಶಪ್ಪ ಅವರ ಪ್ರಕಾರ, 10 ಎಂಜಿ ಟಿಮೆಟ್ ಹರಳನ್ನು ಗಿಡದ ಬುಡಕ್ಕೆ 5 ಗ್ರಾಂನಂತೆ ಹಾಕಬೇಕು. ಇದರಿಂದ ಹುಳುಗಳಿಂದ ಗಿಡಕ್ಕೆ ಹಾನಿಯಾಗದಂತೆ ರಕ್ಷಿಸಬಹುದು. 20 ದಿನಗಳಲ್ಲಿ ಮೊಗ್ಗು ಬಿಡುತ್ತದೆ. 2 ತಿಂಗಳವರೆಗೆ ಮೊಗ್ಗು ಕತ್ತರಿಸುತ್ತಾ ಇರಬೇಕು. ತದನಂತರ ಹೂವು ಅರಳಲಿಕ್ಕೆ ಬಿಡಬೇಕು. ತಜ್ಞರ ಸಲಹೆ ಪಡೆದುಕೊಳ್ಳುವುದು ಉತ್ತಮ.

ಹೂ ಕಟಾವು ಕ್ರಮ
'ಪ್ರತಿದಿನ ಬೆಳಗ್ಗೆ 6ರಿಂದ 8.30ರ ವರೆಗೆ ಕಟಾವು ಮಾಡುವ ಮಾಡಬೇಕು. 350 ಗಿಡಕ್ಕೆ ಸರಾಸರಿ 3 ಆಳು ಸಾಕು. ಒಮ್ಮೆ ಸಸಿ ನಾಟಿ ಮಾಡಿದರೆ 12 ವರ್ಷದವರೆಗೆ ಗುಲಾಬಿ ಪಡೆಯಬಹುದು. ನೆಲದಿಂದ ಒಂದು ಕಾಲು ಅಡಿ ಅಂತರದಲ್ಲಿ ಕಟಾವು ಮಾಡಿ ಕವಲೊಡೆದ ರೆಂಬೆಯನ್ನು ಕಟಾವು ಮಾಡಬೇಕು. ಇದು ಗಿಡ ಕಟಾವು ಮಾಡುವ ಕ್ರಮ' ಎನ್ನುತ್ತಾರೆ ಮಲ್ಲೇಶಪ್ಪ. ಚಿಗುರೊಡೆದು ಹೂವು ಬಿಟ್ಟಾಗ ಮೊದಲ ವರ್ಷದಂತೆ ನಂತರ ಮೊಗ್ಗು ತೆಗೆಯಬಾರದು. ರಸಗೊಬ್ಬರವನ್ನು ನೀರಿನಲ್ಲಿ ಕರಗಿಸಿ, ದ್ರಾವಣ ಮಾಡಿ ಗಿಡದ ಬುಡಕ್ಕೆ ಹಾಕಬೇಕು. ವಾರಕ್ಕೊಮ್ಮೆ ನೀರು ಹಾಕಿದರೆ ಸಾಕು.

ಆದಾಯ
ಎಕರೆಗೆ 1000 ಗಿಡ ನೆಡಬಹುದು. ಒಂದು ಗಿಡ ವರ್ಷಕ್ಕೆ 800 ಹೂವು ಬಿಡುತ್ತದೆ. 1000 ಗಿಡದಿಂದ 8 ಲಕ್ಷಕ್ಕೂ ಮೀರಿ ಹೂವು ಕೊಡುತ್ತವೆ. ಎಕರೆಗೆ ಕನಿಷ್ಠ 4 ಲಕ್ಷ ಆದಾಯ ಗಳಿಸಬಹುದು. ಗಿಡದ ಬುಡದಲ್ಲಿ ಸದಾ ತೇವಾಂಶ ಇರುವಂತೆ ನೋಡಿಕೊಳ್ಳಬೇಕು. ಇದಕ್ಕೆ ಹನಿ ನೀರಾವರಿ ಉತ್ತಮ.

ಉಪಯೋಗ
ರೆಡ್ ರೋಸ್ ಅನ್ನು ಶುಭ ಕಾರ್ಯಗಳಿಗೆ, ಅಲಂಕಾರಿಕವಾಗಿ ರೋಸ್ ವಾಟರ್ ತಯಾರಿಸಲು, ಗುಲ್ಕನ್ ತಯಾರಿಕೆಗೆ ಮತ್ತು ಪರಿಮಳ ದ್ರವ್ಯದಲ್ಲಿ ಬಳಸಲಾಗುತ್ತದೆ.

ಮಿಶ್ರಬೆಳೆಯಾಗಿ ಚೆಂಡು ಹೂ
ಮಲ್ಲೇಶಪ್ಪ ಅವರು ಗುಲಾಬಿ ನಡುವೆ ಚೆಂಡು ಹೂವನ್ನು ಮಿಶ್ರ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಗುಲಾಬಿ ಗಿಡ ಕಟಾವು ಮಾಡಿದ ವಾರದೊಳಗೆ ಸಾಲಿನ ಅಕ್ಕಪಕ್ಕದಲ್ಲಿ 1000 ಚೆಂಡು ಹೂವಿನ ಗಿಡ ಬೆಳೆಸಿದ್ದಾರೆ. ಒಂದು ಗಿಡದಿಂದ 2 ಕೆಜಿ ಹೂ ಇಳುವರಿ ಪಡೆಯಬಹುದು. ಈ ಗಿಡದ ಅವಧಿ ಮೂರು ತಿಂಗಳು. ಒಂದು ಕೆಜಿ ಚೆಂಡು ಹೂವಿಗೆ ರು. 25 ಧಾರಣೆ ಉಂಟು. ವರ್ಷಕ್ಕೆ ಎರಡು ಬೆಳೆ ಬೆಳೆಯಬಹುದು. ಇದರಿಂದ ವರ್ಷದಲ್ಲಿ ಲಕ್ಷಕ್ಕೂ ಮೀರಿ ಆದಾಯ ಗಳಿಸಬಹುದು.
ಚೆಂಡು ಹೂವಿನ ಗಿಡ ಸಾಲಿನಿಂದ ಸಾಲಿಗೆ 3 ಅಡಿ ಅಂತರ ಇರಬೇಕು. ಗಿಡದಿಂದ ಗಿಡಕ್ಕೆ ಒಂದೂವರೆ ಅಡಿ ಅಗತ್ಯ. ಗೊಬ್ಬರ, ನೀರಿನ ಅವಶ್ಯಕತೆ ಇರಲ್ಲ. ಕಾರಣ ಗುಲಾಬಿ ಗಿಡದ ನೀರು ಮತ್ತು ಪೋಷಕಾಂಶ ಸಾಕಾಗುತ್ತದೆ. ಒಂದು ಎಕರೆಯಲ್ಲಿ 3000 ಗಿಡ ಬೆಳೆಸಬಹುದು. ಎರಡು ಬೆಳೆ ತೆಗೆಯಬಹುದು. ಕನಿಷ್ಠ ಎರಡು ಬೆಳೆಗಳಲ್ಲಿ ರು. 1,75,000 ಆದಾಯ ಗಳಿಸಬಹುದು. ಮಾಹಿತಿಗೆ ಮಲ್ಲೇಶಪ್ಪ ಅವರ ಮೊ. 9880302491.

- ವಿ. ಬಾಲಕೃಷ್ಣ ಶಿರ್ವ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಜಿಎಸ್‌ಟಿ ಮಂಡಳಿಯಿಂದ ಪ್ರಕ್ರಿಯೆ ಸುಧಾರಣೆಗಳಿಗೆ ಅನುಮೋದನೆ; ಬಂಧನದ ಅಧಿಕಾರಕ್ಕೆ ಕಡಿವಾಣ!

ಶಿಕಾರಿಪುರದ ಈ ಗ್ರಾಮದಲ್ಲಿ ಬೀಗರೂಟ ಹಾಕಿದ್ರೆ ₹1 ಲಕ್ಷ, ಉಂಡು ಬಂದ್ರೆ ₹50 ಸಾವಿರ ದಂಡ! ಇಲ್ಲಿದೆ ಸ್ಫೋಟಕ ಕಾರಣ...

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

ರಮೇಶ್ ಜಾರಕಿಹೊಳಿಗೆ ಸ್ಟಿಂಗ್ ಮಾಡಿದ್ದು ಯಾರು? ಒಬ್ಬ CM ಇಂಥಾ ಕೀಳು ಮಟ್ಟಕ್ಕೆ ಇಳಿಯಬಾರದಿತ್ತು: ಛಲವಾದಿ ನಾರಾಯಣಸ್ವಾಮಿ