ಕೃಷಿ-ಪರಿಸರ

ಲವಂಗ

Rashmi Kasaragodu

ಸಾಂಬಾರ್ ಪದಾರ್ಥಗಳಲ್ಲಿ ಹೆಚ್ಚಾಗಿ ಬಳಸುವ ಲವಂಗಕ್ಕೆ ಬೇಡಿಕೆ ಹೆಚ್ಚುತ್ತಿದೆ. ಕಾರಣ ಇದನ್ನು ಆಯುರ್ವೇದ ಔಷಧ, ಟೂಥ್ ಪೌರ್, ಪೇಸ್ಟ್ ತಯಾರಿಕೆಯಲ್ಲಿ ಯಥೇಚ್ಛವಾಗಿ ಬಳಸುತ್ತಾರೆ. ಲವಂಗವನ್ನು ರಾಜ್ಯದ ಮಲೆನಾಡು, ಕರಾವಳಿ ಪ್ರದೇಶದಲ್ಲಿ ಬೆಳೆಯುತ್ತಾರೆ.

ಬೆಳೆಯುವ ವಿಧಾನ
ಲವಂಗ ದೀರ್ಘಕಾಲೀನ ಬೆಳೆ. ಇದನ್ನು ಹೆಚ್ಚಾಗಿ ಅಂತರ ಬೆಳೆಯಾಗಿ ಬೆಳೆಯುತ್ತಾರೆ. ಇತರ ಬೆಳೆಗಳ ಮಧ್ಯೆ ಅಥವಾ ಬದುಗಳಲ್ಲಿ ಸಸಿ ನಾಟಿ ಮಾಡುತ್ತಾರೆ. ವರ್ಷದ ಯಾವುದೇ ತಿಂಗಳಲ್ಲೂ ನಾಟಿ ಮಾಡಬಹುದು. ಸಸಿಗಳನ್ನು 20 ್ಢ 20 ಅಡಿ ಅಂತರದಲ್ಲಿ ನಾಟಿ ಮಾಡಬೇಕು. ಗುಂಡಿ ಆಳ ಒಂದೂವರೆ ಅಡಿ ಇದ್ದರೆ ಸಾಕು. ಗುಂಡಿಗೆ ಅಗತ್ಯಕ್ಕೆ ತಕ್ಕಷ್ಟು ಕೊಟ್ಟಿಗೆ ಗೊಬ್ಬರ ಹಾಕಬೇಕು. ಆಗಾಗ ನೀರು ಹಾಯಿಸುತ್ತಿರಬೇಕು. ಜಾಸ್ತಿ ನಿರ್ವಹಣೆ ಬಯಸುವುದಿಲ್ಲ. ಸಸಿ ನಾಟಿ ಮಾಡಿದ 5 ವರ್ಷದ ನಂತರ ಫಸಲು ನೀಡಲಾರಂಭಿಸುತ್ತದೆ. ಸಾಮಾನ್ಯ ಇದಕ್ಕೆ ಎಲೆಚುಕ್ಕೆ ರೋಗ ಹೆಚ್ಚು ಬಾಧಿಸುವುದು. ಇದು ಬಿಟ್ಟರೆ ಬೇರೆ ಯಾವ ರೋಗ ಬಾಧಿಸುವುದು ಕಮ್ಮಿ. ಇದರಲ್ಲಿ ಔಷಧಿಯ ಗುಣವಿರುವುದರಿಂದ ರೋಗನಿರೋಧಕ ಶಕ್ತಿ ಜಾಸ್ತಿ ಇರುತ್ತದೆ. ಹಾಗಾಗಿ ರೋಗಬಾಧೆ ಕಮ್ಮಿ ಎಂಬುದು ಅನುಭವಿ ಕೃಷಿಕರ ಮಾತು. ಚೆನ್ನಾಗಿ ನಿರ್ವಹಣೆ ಮಾಡಿದರೆ ಗಿಡವೊಂದರಿಂದ 1- 10 ಕೆ.ಜಿ.ವರೆಗೆ ಇಳುವರಿ ಪಡೆಯಬಹುದು.

ಮಣ್ಣು

ಸಾಮಾನ್ಯವಾಗಿ ಎಲ್ಲ ನಮೂನೆಯ ಮಣ್ಣಲ್ಲಿ ಬೆಳೆಯುತ್ತದೆ. ಆದರೂ ಮರಳು ಮಿಶ್ರಿತ ಕೆಂಪು ಮಣ್ಣು ಚೆನ್ನಾಗಿ ಬೆಳೆಯುತ್ತದೆ. ಅದೇ ರೀತಿ ಲವಂಗ ಗಿಡ ಜಾಸ್ತಿ ಉಷ್ಣ ತಾಳದು. ಹಾಗಾಗಿ ಇದನ್ನು ಬೆಳೆಯಲು ಮಲೆನಾಡು ಪ್ರದೇಶ ಉತ್ತಮ. ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಯಡೂರಿನ ರಾಜಾರಾಮ್(ಮೊ. 8088615676) ಅವರನ್ನು ಸಂಪರ್ಕಿಸಬಹುದು.

- ಮಹೇಶ್ ಅರಳಿ

SCROLL FOR NEXT