ಕೃಷಿ-ಪರಿಸರ

ವಾಣಿಜ್ಯ ತುಳಸಿ

ರಾಜ್ಯದಲ್ಲಿ ವಾಣಿಜ್ಯ ಬೆಳೆಯಾಗಿ ತುಳಸಿ ಮೆಲ್ಲನೆ ತಳವೂರುತ್ತಿದೆ. ತುಳಸಿಯನ್ನು ಮೊದಲು ಇತರ ಬೆಳೆಗಳಿಗೆ ರೋಗ ತಡೆಗಟ್ಟುವ ಸಲುವಾಗಿ ...

ರಾಜ್ಯದಲ್ಲಿ ವಾಣಿಜ್ಯ ಬೆಳೆಯಾಗಿ ತುಳಸಿ ಮೆಲ್ಲನೆ ತಳವೂರುತ್ತಿದೆ. ತುಳಸಿಯನ್ನು ಮೊದಲು ಇತರ ಬೆಳೆಗಳಿಗೆ ರೋಗ ತಡೆಗಟ್ಟುವ ಸಲುವಾಗಿ ಬದುಗಳಲ್ಲಿ ಬಿತ್ತುತ್ತಿದ್ದರು. ಇದು ಇತರ ಬೆಳೆಗಳಿಗೆ ರೋಗಗಳು ಬಾರದಂತೆ ತಡೆಗಟ್ಟುವ ಸೈನಿಕನಂತೆ ಕೆಲಸ ಮಾಡುತ್ತಿತ್ತು. ಈಗಲೂ ಹಲವೆಡೆ ಆ ರೀತಿ ಬಿತ್ತುವ ಪದ್ಧತಿ ಇದೆ. ಹಲವೆಡೆ ಇತ್ತೀಚೆಗೆ ವಾಣಿಜ್ಯ ಬೆಳೆಯಾಗಿ ತುಳಸಿ ಕಂಗೊಳಿಸುತ್ತಿದೆ.
ಬೆಳೆಯುವ ವಿಧಾನ
ತುಳಸಿಯನ್ನು ಮೊದಲು ಒಂದೆಡೆ ಬೀಜ ಬಿತ್ತಿ 1 ತಿಂಗಳು ಸಸ್ಯಾಭಿವೃದ್ಧಿ ಮಾಡಬೇಕು. ನಂತರ ಅದನ್ನು ಕಿತ್ತು ಜಮೀನಿನಲ್ಲಿ ನಾಟಿ ಮಾಡಬೇಕು. ಸಾವಯವ ಗೊಬ್ಬರ ಹಾಕಿ ಜಮೀನು ಹದ ಮಾಡಬೇಕು. ಸಾಲಿನಿಂದ ಸಾಲಿಗೆ ಒಂದೂವರೆ  ಅಡಿ ಮತ್ತು ಗಿಡದಿಂದ ಗಿಡಕ್ಕೆ 1 ಅಡಿ ಅಂತರದಲ್ಲಿ ಸಸಿ ನಾಟಿ ಮಾಡಬೇಕು. ವಾರಕ್ಕೊಮ್ಮೆ ನೀರು ಹಾಯಿಸಬೇಕು. ಸಸಿ ನಾಟಿ ಮಾಡಿದ ತಿಂಗಳ ಬಳಿಕ ಚಿಗುರನ್ನು ಕಟಾವು ಮಾಡಬೇಕು. ಹೀಗೆ ಮಾಡಿದರೆ ಗಿಡ ಮತ್ತಷ್ಟು ಹುಲುಸಾಗಿ ಬೆಳೆಯಲು ಸಹಕಾರಿ. ಚಿಗುರು ಕತ್ತರಿಸಿದ 20 ದಿನದ ಬಳಿಕ ಗಿಡವನ್ನು 1 ಅಡಿ ಬಿಟ್ಟು ಉಳಿದಿದ್ದನ್ನು ಕಟಾವು ಮಾಡಬೇಕು. ಅದನ್ನು 1 ವಾರ ಒಣಗಿಸಬೇಕು. ನಂತರ ಮಾರಾಟ ಮಾಡಬೇಕು. ಇದೇ ರೀತಿ 20 ದಿನಕ್ಕೊಮ್ಮೆ ಕಟಾವು ಮಾಡಬೇಕು. ಒಮ್ಮೆ ಸಸಿ ನಾಟಿ ಮಾಡಿದರೆ 10ರಿಂದ 15 ತಿಂಗಳವರೆಗೆ ಇಳುವರಿ ಸಿಗುತ್ತದೆ. ಇದಕ್ಕೆ ರಾಸಾಯನಿಕ ಗೊಬ್ಬರ ಹಾಕುವಂತಿಲ್ಲ. ಸಾವಯವ ಅಥವಾ ಎರೆಹುಳು ಗೊಬ್ಬರವನ್ನೇ ಹಾಕಬೇಕು. ವರ್ಷದ ಎಲ್ಲ ತಿಂಗಳಲ್ಲೂ ನಾಟಿ ಮಾಡಬಹುದು.
ತಳಿಗಳು
ತುಳಸಿಯಲ್ಲಿ ಸಾಮಾನ್ಯವಾಗಿ ರಾಮ ತುಳಸಿ, ಕೃಷ್ಣ ತುಳಸಿ ಮತ್ತು ಒಣ ತುಳಸಿ ತಳಿಗಳು ಹೆಚ್ಚು ಪ್ರಚಲಿತದಲ್ಲಿವೆ.
ಮಣ್ಣು
ಕೆಂಪು ಮಣ್ಣಲ್ಲಿ ಚೆನ್ನಾಗಿ ಬೆಳೆಯುತ್ತದೆ. ಕಪ್ಪು ಮಣ್ಣಲ್ಲಿ ಬೆಳೆಯಬಹುದು. ಇದಕ್ಕೆ ರೋಗನಿರೋಧಕ ಶಕ್ತಿ ಹೆಚ್ಚು ಇರುವುದರಿಂದ ರೋಗಗಳ ಹಾವಳಿ ತೀರಾ ಕಮ್ಮಿ. ಹೆಚ್ಚಿನ ಮಾಹಿತಿಗೆ ಕೊಳ್ಳೇಗಾಲ ತಾಲೂಕಿನ ಉಗನಿಯಾ ಗ್ರಾಮದ ಬಿ. ಸಿದ್ದಪ್ಪ(9480326188) ಅವರನ್ನು ಸಂಪರ್ಕಿಸಬಹುದು.


-ಮಹೇಶ್ ಅರಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು

'ರಾಹುಲ್ ಗಾಂಧಿ ಅವರೇ, ನಿಮ್ಮ ಉದ್ದೇಶಗಳು ಎಂದಿಗೂ ಈಡೇರಲ್ಲ': ವಿಪಕ್ಷದವರದ್ದು 'ನಗರ ನಕ್ಸಲ್' ಮನಸ್ಥಿತಿ; ನಿತಿನ್ ನಬಿನ್