ಕೃಷಿ-ಪರಿಸರ

ಸಾವಧಾನ ಸಮಾಧಾನ

ರಾಜ್ಯದಲ್ಲಿಂದು ಅನೇಕ ರೈತರು ಸಾವಯವ ಕೃಷಿ ಆರಂಭಿಸಿದ್ದಾರೆ. ವಿಷಮುಕ್ತ ಸಾವಯವ ಕೃಷಿಯತ್ತ ಆಸಕ್ತಿ ವಹಿಸಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಅಲ್ಲವಾದರೂ ಅರೆಕಾಲಿಕ ಸಾವಯವ ಕೃಷಿಕರಾದವರೂ ಇದ್ದಾರೆ. ರಾಸಾಯನಿಕ ಕೃಷಿಯಿಂದ ಸಾವಯವ ಕೃಷಿಗೆ ಬದಲಾಗುವಾಗ ಎದುರಾಗುವ ಸಮಸ್ಯೆಗಳು ಹಲವು. ಬೀಜ, ಗೊಬ್ಬರ, ಕೀಟ-ರೋಗ ನಿಯಂತ್ರಣ, ಕಳೆ ನಿರ್ವಹಣೆ, ನೀರಾವರಿ ಇತ್ಯಾದಿ ಯಾವುದೇ ಕ್ಷೇತ್ರದ ಸಮಸ್ಯೆಗಳಿರಬಹುದು.
ಇಂಥ ಸಂದರ್ಭದಲ್ಲಿ ಸ್ವತಃ ಪರಿಹಾರ ಕಂಡುಕೊಂಡ ವಿವಿಧ ರೈತರಿಂದ, ವಿಜ್ಞಾನಿಗಳಿಂದ ಸಮಾಧಾನ ನೀಡುವ, ಪರಿಹಾರ ಮಾಡುವ ವಿಶಿಷ್ಟ ಕಾರ್ಯಕ್ರಮವನ್ನು ತೀರ್ಥಹಳ್ಳಿಯ ಪುರುಷೋತ್ತಮರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನ ಫೆಬ್ರವರಿ 2ರಂದು ಹಮ್ಮಿಕೊಂಡಿದೆ. ಒಂದು ದಿನದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿಯಿರುವವರು ತಾವು ಎದುರಿಸುತ್ತಿರುವ ಕೃಷಿ ಸಮಸ್ಯೆಗಳನ್ನು ಮುಂಚಿತವಾಗಿ ತೀರ್ಥಹಳ್ಳಿಯಲ್ಲಿರುವ ಪುರುಷೋತ್ತಮರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನಕ್ಕೆ ಬರೆದು ತಿಳಿಸಬಹುದು.
ಹಲವು ಸಮಸ್ಯೆಗೆ ಪರಿಹಾರ
ಯಾವ ಬೀಜ ಬಳಸಬೇಕು, ಗೊಬ್ಬರ ಹೇಗೆ ಬಳಸಬೇಕು, ಕೀಟ ರೋಗ ಬಂದರೆ ಹೇಗೆ, ನೀರಾವರಿ ಹೇಗಿರಬೇಕು, ಮಾರುಕಟ್ಟೆ ಹೇಗೆ, ಮೌಲ್ಯವರ್ಧನೆ ಸಮಸ್ಯೆ ಹೀಗೆ ಹಲವು ಗೊಂದಲಗಳಿವೆ. ಈ ಗೊಂದಲಗಳಿಗೆ ವೇದಿಕೆಯಲ್ಲಿ ಉತ್ತರ ಸಿಗಲಿದೆ. ಈ ರೀತಿ ಕಲ್ಪನೆ ಪುರುಷೋತ್ತಮರಾಯರದ್ದು. ತೀರ್ಥಹಳ್ಳಿಯನ್ನು ಕೇಂದ್ರೀಕರಿಸಿಕೊಂಡು ರಾಜ್ಯಾದ್ಯಂತ ಸಾವಯವ ರೈತರ ಬಳಗ ಕಟ್ಟಿದ, ರೈತರಲ್ಲಿ ಜಾಗೃತಿ ಮೂಡಿಸಿದ ಅವರು ವರ್ಷಕ್ಕೊಮ್ಮೆ ಇಂಥ ರೈತರನ್ನು ಒಂದೆಡೆ ಸೇರಿಸಿ ಅವರ ಯಶೋಗಾಥೆ ಆಲಿಸುವುದು, ಅವರ ಸಮಸ್ಯೆಗೆ ಪರಿಹಾರ ಕೊಡಿಸುವ ಉದ್ದೇಶ ಹೊಂದಿದ್ದರು. ಕಾಲಾನಂತರದಲ್ಲಿ ಈ ಕಾರ್ಯಕ್ರಮ ನಿಂತುಹೋಗಿತ್ತು. ಇದೀಗ ಪುನಃ ಆರಂಭವಾಗಿದೆ. ರೈತರು ಎದುರಿಸುತ್ತಿರುವ ಸಮಸ್ಯೆ, ಅದಕ್ಕಿರುವ ಪರಿಹಾರಗಳನ್ನು savayavakrishipariwar.org ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಜತೆಗೆ ಸಾವಯವ ರೈತರ ದಿಕ್ಕುಗಳನ್ನು ಸ್ಪಷ್ಟ ಮಾಡುವ ಕೆಲಸ ಮಾಡಲಾಗುತ್ತದೆ ಎಂದು ಕೃಷಿ ಪ್ರತಿಷ್ಠಾನದ ಅರುಣ್ (9449623275, 08181- 228340) ತಿಳಿಸುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಸುಪ್ರೀಂಕೋರ್ಟ್​ಗೆ ನನ್ನ ಬಗ್ಗೆ ತಪ್ಪು ಮಾಹಿತಿ: ಸರ್ಕಾರದ ವಿರುದ್ಧ ಡಿಜಿಪಿ ಅಲೋಕ್ ಕುಮಾರ್ ಅಸಮಾಧಾನ!

ಯುವ ಜನತೆಯ ಆಕ್ರೋಶ ತಡೆಯಲು ಸಾಧ್ಯವಿಲ್ಲ, ಇಡೀ ದೇಶ ಜಂತರ್ ಮಂತರ್ ಆಗಲಿದೆ: ಪ್ರಕಾಶ್ ರಾಜ್

ಸೆಪ್ಟೆಂಬರ್‌ನಲ್ಲಿ ನಿರೀಕ್ಷೆ ಮೀರಿ ಹೆಚ್ಚಿದ ಭಾರತದ ಸಗಟು ಹಣದುಬ್ಬರ: ಶೇ.11.4ಕ್ಕೆ ಏರಿಕೆ

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!