ಕೃಷಿ-ಪರಿಸರ

ಮುಸುಕಿನ ಜೋಳಕ್ಕೂ ಚುಚ್ಚುಮದ್ದು!

ಮನೆಯಲ್ಲೇ ಮುಸುಕಿನ ಜೋಳದ ಬೀಜ ಮಾಡಿಕೊಳ್ಳುವುದಾದರೆ ಈ ಕ್ರಮ ಅನುಸರಿಸಿ. ಚೆನ್ನಾಗಿ ಒಣಗಿದ ...

ಮನೆಯಲ್ಲೇ ಮುಸುಕಿನ ಜೋಳದ ಬೀಜ ಮಾಡಿಕೊಳ್ಳುವುದಾದರೆ ಈ ಕ್ರಮ ಅನುಸರಿಸಿ. ಚೆನ್ನಾಗಿ ಒಣಗಿದ ಜೋಳದ ದಿಂಡಿನ ಬುಡದ ಭಾಗ ಮತ್ತು ತುದಿಯ ಭಾಗದಲ್ಲಿ ಒಂದು ಇಂಚಿನಷ್ಟು ಕಾಳುಗಳನ್ನು ಬಿಟ್ಟು ಮಧ್ಯದ ಕಾಳುಗಳನ್ನು ಮಾತ್ರ ಆರಿಸಿಕೊಳ್ಳಿ. ಅವು ಬಿತ್ತನೆಗೆ ಶ್ರೇಷ್ಠ. ತುದಿಯ ಕಾಳುಗಳು ಸರಿಯಾಗಿ ಬಲಿತಿರುವುದಿಲ್ಲ, ಬುಡದ ಕಾಳುಗಳು ಹೆಚ್ಚು ಒತ್ತಾಗಿದ್ದು, ಸೀಕಲಾಗಿರುವ ಸಂಭವ ಹೆಚ್ಚು. ಹಾಗಾಗಿ ದಿಂಡಿನ ಮಧ್ಯಭಾಗದ ಕಾಳು ಆರೋಗ್ಯವಾಗಿದ್ದು, ಉತ್ತಮ ಮೊಳಕೆ ಸಾಮರ್ಥ್ಯ ಹೊಂದಿರುತ್ತವೆ.
ಇಷ್ಟಾದ ಮೇಲೂ ಉತ್ತಮವಾದ ಬೀಜ ಆಯ್ಕೆಯಾಗಿರುವುದು ಖಾತ್ರಿ ಇಲ್ಲ. ಅದಕ್ಕಾಗಿ ಒಂದು ಸರಳ ವಿಧಾನವಿದೆ.
ಒಂದು ಬಕೆಟ್ಟಿನಲ್ಲಿ ಅರ್ಧದಷ್ಟು ನೀರನ್ನು ತೆಗೆದುಕೊಳ್ಳಿ. ಒಂದು ಕೆಜಿ ಹರಳು ಉಪ್ಪನ್ನು ಸುಮಾರು 2 ಲೀ. ನೀರಿನಲ್ಲಿ ಕರಗಿಸಿ ದ್ರಾವಣ ಮಾಡಿ. ಬಕೆಟ್ಟಿನ ನೀರಿಗೆ ಒಂದು ಕೋಳಿ ಮೊಟ್ಟೆ ಹಾಕಿ. ಅದು ಮುಳುಗಿದರೆ ಮಾತ್ರ ಮೊಟ್ಟೆ ಗುಣಮಟ್ಟ ಸರಿಯಾಗಿದೆ ಎಂದರ್ಥ. ಈಗ ಉಪ್ಪಿನ ದ್ರಾವಣವನ್ನು ನೀರಿಗೆ ಹಾಕಿ ಕಲಕಿ. ಮೊಟ್ಟೆ ನಿಧಾನವಾಗಿ ಮೇಲೆ ಬರುತ್ತದೆ. ಮೊಟ್ಟೆಯು ನಾಲ್ಕಾಣೆಯಷ್ಟು ತೇಲುವಷ್ಟು ಮೇಲೆ ಬರುವವರೆಗೂ ಉಪ್ಪಿನ ದ್ರಾವಣ ಹಾಕುತ್ತಾ ಕಲಕುತ್ತಿರಿ. ನಂತರ ಮೊಟ್ಟೆಯನ್ನು ಹೊರತೆಗೆದು ಬಿತ್ತನೆ ಬೀಜವನ್ನು ಉಪ್ಪಿನ ದ್ರಾವಣಕ್ಕೆ ಹಾಕಿ. ಮೇಲೆ ತೇಲುವ ಜೊಳ್ಳು ಮತ್ತು ಅರೆಜೊಳ್ಳು ಬೀಜ ಪ್ರತ್ಯೇಕಿಸಿ. ನೀರನ್ನು ಬಸಿದು ಬೀಜವನ್ನು ತೆಗೆದು ಸ್ವಚ್ಛ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ.
ಇದಾದ ನಂತರ ಬಿತ್ತುವ ಮುನ್ನ ಬೀಜೋಪಚಾರ ಮುಖ್ಯ.
ಇದಕ್ಕೂ ಸರಳ ವಿಧಾನವೊಂದಿದೆ. ಗೋಮೂತ್ರ ಬಳಸಿ ಉಪಚರಿಸುವುದು. ಬಾಯಿ ಅಗಲದ ಪಾತ್ರೆಯೊಂದನ್ನು ತೆಗೆದುಕೊಳ್ಳಿ, ಅದಕ್ಕೆ ಒಂದು ಭಾಗ ಗಂಜಲ ಮತ್ತು 9 ಭಾಗ ನೀರು ಸೇರಿಸಿ. ಬೀಜದ ಪ್ರಮಾಣಕ್ಕನುಗುಣವಾಗಿ ಗಂಜಲ ಮತ್ತು ನೀರಿನ ದ್ರಾವಣ ಹೆಚ್ಚಿಸಿಕೊಳ್ಳಬಹುದು. ಆದರೆ, ಯಾವ ಪಾತ್ರೆಯಲ್ಲಿ ಗಂಜಲ ತೆಗೆದುಕೊಂಡಿರುತ್ತೀರೋ ಅದೇ ಪಾತ್ರೆ ಅಥವಾ ಅಷ್ಟೇ ಅಳತೆಯ ಪಾತ್ರೆಯಲ್ಲಿ ನೀರು ಹಾಕಬೇಕು. ಈ ದ್ರಾವಣಕ್ಕೆ ಮುಸುಕಿನಜೋಳ ಹಾಕಿ, ಕೋಲಿನಿಂದ ಚೆನ್ನಾಗಿ ತಿರುಗಿಸಿ, 10 ನಿಮಿಷದ ನಂತರ ನೀರನ್ನು ಬಸಿದು ಬೀಜಗಳನ್ನು ನೆರಳಲ್ಲಿ ಒಣಗಿಸಿ, ಬಿತ್ತಲು ಬಳಸಿ.
ಈ ರೀತಿ ಆಯ್ಕೆ ಮತ್ತು ಉಪಚಾರ ಮಾಡುವುದರ ಮೂಲಕ ಬೀಜದ ಮೂಲಕ ಬರುವ ರೋಗ ತಡೆಗಟ್ಟಬಹುದು. ಗೋಮೂತ್ರ ಬೀಜದ ಮೇಲೆ ಬೆಳೆದಿರುವ ಬೂಷ್ಟು ಅಥವಾ ಫಂಗಸ್ ಅನ್ನು ನಾಶಪಡಿಸುತ್ತದೆ. ಮೊಳಕೆ ಬೇಗ ಬರಲು ಅನುಕೂಲ ಹಾಗೂ ಸಸಿಗಳಿಗೆ ಸ್ವಲ್ಪ ಮಟ್ಟಿಗೆ ಬರ ಮತ್ತು ಕೀಟ- ರೋಗ ನಿರೋಧಕ ಶಕ್ತಿಯೂ ಲಭ್ಯ. ಮಕ್ಕಳಿಗೆ ರೋಗನಿರೋಧಕ ಶಕ್ತಿಗಾಗಿ ಚುಚ್ಚುಮದ್ದು ಹಾಕಿಸುವುದಿಲ್ಲವೇ, ಹಾಗೆಯೇ ಇದು ಕೂಡ.
ಇದು ನಿಜವೋ ಸುಳ್ಳೋ ಎಂದು ಪ್ರಾಯೋಗಿಕವಾಗಿ ತಿಳಿಯುವುದು ಮುಖ್ಯ ಅಲ್ಲವೇ? ಹಲವು ರೈತರು ಈ ರೀತಿ ಮಾಡಿ ಉತ್ತಮ ಫಲಿತಾಂಶ ಕಂಡಿದ್ದಾರೆ. ಅದನ್ನು ಮುಂದಿನ ಅಂಕಣದಲ್ಲಿ ನೋಡೋಣ. ನಿರೀಕ್ಷಿಸಿ.


- ಮಲ್ಲಿಕಾರ್ಜುನ ಹೊಸಪಾಳ್ಯ
krushikaimara@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್