ಕೃಷಿ-ಪರಿಸರ

ಹಾಗಲಕಾಯಿ

ಅತ್ಯಂತ ವೇಗವಾಗಿ ಬೆಳೆಯುವ ತರಕಾರಿ ಬೆಳೆಗಳಲ್ಲಿ ಹಾಗಲಕಾಯಿ ಪ್ರಮುಖವಾದದ್ದು. ಇದರಲ್ಲಿ ವಿಟಮಿನ್ ...

ಅತ್ಯಂತ ವೇಗವಾಗಿ ಬೆಳೆಯುವ ತರಕಾರಿ ಬೆಳೆಗಳಲ್ಲಿ ಹಾಗಲಕಾಯಿ ಪ್ರಮುಖವಾದದ್ದು. ಇದರಲ್ಲಿ ವಿಟಮಿನ್ ಎ ಯಥೇಚ್ಛ. ಹಲವು ಔಷಧಿಯ ಗುಣಗಳೂ ಇದರಲ್ಲಿವೆ. ಇದರ ಸೇವನೆಯಿಂದ ಮುಖ್ಯವಾಗಿ ಸಕ್ಕರೆ ಕಾಯಿಲೆ, ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಇದರ ವೈಜ್ಞಾನಿಕ ಹೆಸರು Momordica Charantia L.
ಬೆಳೆಯುವ ವಿಧಾನ
ಜಮೀನನ್ನು ಆಳವಾಗಿ ಉಳುಮೆ ಮಾಡಿ ಎಕರೆಗೆ ಮೂರ್ನಾಲ್ಕು ಟ್ರ್ಯಾಕ್ಟರ್ ಕೊಟ್ಟಿಗೆ ಗೊಬ್ಬರ ಹಾಕಬೇಕು. ಹಾಗಲವನ್ನು ಎರಡು ರೀತಿಯಾಗಿ ಬೆಳೆಯಬಹುದು. ಮೊದಲನೆಯದಾಗಿ ಬೀಜ ನಾಟಿ ಮಾಡುವುದರ ಮೂಲಕ. ಅಂದರೆ ಸಾಲಿನಿಂದ ಸಾಲಿಗೆ 6 ಅಡಿ ಅಂತರವಿರಬೇಕು. ಬೀಜದಿಂದ 6 ಅಡಿ ಅಂತರವಿರಬೇಕು. ಒಂದು ಕುಣಿಯೊಳಗೆ 2 ಅಥವಾ 3 ಬೀಜ ಹಾಕಬೇಕು. ಇನ್ನೊಂದು ವಿಧಾನವೆಂದರೆ ಬೀಜವನ್ನು ಟ್ರೇನಲ್ಲಿ ಸಸ್ಯಾಭಿವೃದ್ಧಿ ಮಾಡಿ 15 ದಿನಗಳ ಬಳಿಕ ಅದನ್ನು ಜಮೀನಿನಲ್ಲಿ ನೆಡಬೇಕು. ಪ್ರತಿ ಬಳ್ಳಿಯ ಬದಿ 8 ಅಡಿಯ ಕೋಲನ್ನು ನೆಡಬೇಕು. ಅದಕ್ಕೆ ತಂತಿಯ ಮೂಲಕ ಪ್ರತಿ ಕೋಲಿಗೂ ಸಂಪರ್ಕ ಕಲ್ಪಿಸಬೇಕು. ಬಳ್ಳಿಯನ್ನು ಕೋಲಿಗುಂಟ ಬೆಳೆಯಲು ಅನುಕೂಲವಾಗುವಂತೆ ದಾರ ಕಟ್ಟಬೇಕು. 2 ದಿನಕ್ಕೊಮ್ಮೆ ಕವಲುಗಳನ್ನು ಚಿವುಟಬೇಕು. ಇದರಿಂದ ಬಳ್ಳಿಯು ನೇರವಾಗಿ ಬೆಳೆಯಲು ಅನುಕೂಲವಾಗುತ್ತದೆ. ಬೀಜ ನೆಟ್ಟ 45 ದಿನಗಳ ಬಳಿಕ ಕಾಯಿ ಬಿಡಲು ಶುರು. ಅಂದಾಜು 3 ತಿಂಗಳವರೆಗೆ ಇಳುವರಿ ಪಡೆಯಬಹುದು. ಚೆನ್ನಾಗಿ ನಿರ್ವಹಣೆ ಮಾಡಿದರೆ ಎಕರೆಗೆ 12 ಟನ್ ಕಾಯಿ ಪಡೆಯಬಹುದು. ಇದು ಎಲ್ಲ ನಮೂನೆಯ ಮಣ್ಣಿನಲ್ಲೂ ಬೆಳೆಯುತ್ತದೆ. ಇದರ ಎಲೆ, ಕಾಯಿ ಕಹಿ ಆಗಿರುವುದರಿಂದ ರೋಗ, ಕೀಟ ಬಾಧೆ ಸಾಧ್ಯತೆ ತೀರಾ ಕಮ್ಮಿ.
ತಳಿಗಳು
ಗೋಲ್ಡನ್, ಇಂಡಸ್, ಬ್ಲಾಕ್ ಗ್ರೀನ್ ಮತ್ತು ವೈಟ್ ಗ್ರೀನ್, ಪ್ರೀತಿ, ಪ್ರಿಯಾಂಕ ಮತ್ತು ಪ್ರಿಯಾ ಬಳಕೆಯಲ್ಲಿರುವ ಪ್ರಮುಖ ತಳಿಗಳು. ಹೆಚ್ಚಿನ ಮಾಹಿತಿಗೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕರವಿನಕೊಪ್ಪದ ಅಶೋಕ ದೇವೇಂದ್ರ ಪಾಟೀಲ್(9986373385) ಅವರನ್ನು ಸಂಪರ್ಕಿಸಬಹುದು.

-ಮಹೇಶ್ ಅರಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ ಭಯಗೊಂಡಿದ್ದು ನಮ್ಮ ಹೋರಾಟದಲ್ಲಿ ಅರ್ಧ ಗೆದ್ದಿದ್ದೇವೆ, CEC ರಾಜೀನಾಮೆ ನೀಡುವವರೆಗೆ ಹಿಂಜರಿಯುವುದಿಲ್ಲ': ಇಂದು CJP ಪ್ರತಿಭಟನೆ ಮುಂದುವರಿಕೆ

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

CJP ಪ್ರತಿಭಟನೆಗೆ ದೇಶವಿರೋಧಿ ಶಕ್ತಿಗಳ ಸಾಥ್‌: ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ..!

ಬರದಿಂದ ರೈತರು ಕಂಗಾಲಾಗಿದ್ದರೂ ಸಿಎಂ ಡಿಕೆಶಿಗೆ ಮಾತ್ರ ಸ್ಟಿಂಗ್ ಆಪರೇಷನ್'ನದ್ದೇ ಚಿಂತೆ: HDK ವ್ಯಂಗ್ಯ