ಸಾಂದರ್ಭಿಕ ಚಿತ್ರ 
ಕೃಷಿ-ಪರಿಸರ

ರೈನೋ ಕೊಂಬಿಗೆ ಚಿನ್ನ ವಜ್ರಗಳಿಗಿಂತ ಹೆಚ್ಚು ಬೆಲೆ!

ಭೇಟೆಗಾರರಿಗೆ ರೈನೋಸರಸ್ ನ ಕೊಂಬು ಅಷ್ಟೇ ತೂಗುವ ಚಿನ್ನ ಅಥವಾ ವಜ್ರಕ್ಕಿಂತ ಹೆಚ್ಚಿನ ಹಣ ಗಳಿಸಿಕೊಡುತ್ತದೆ, ಇದು ರೈನೋಸರಸ್ ಅನ್ನು ಅಳಿವಿನಂಚಿಗೆ

ನ್ಯೂಯಾರ್ಕ್: ಭೇಟೆಗಾರರಿಗೆ ರೈನೋಸರಸ್ ನ ಕೊಂಬು ಅಷ್ಟೇ ತೂಗುವ ಚಿನ್ನ ಅಥವಾ ವಜ್ರಕ್ಕಿಂತ ಹೆಚ್ಚಿನ ಹಣ ಗಳಿಸಿಕೊಡುತ್ತದೆ, ಇದು ರೈನೋಸರಸ್ ಅನ್ನು ಅಳಿವಿನಂಚಿಗೆ ತಳ್ಳುತ್ತಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಅಲ್ಲದೆ ವಿಶ್ವದ ಅತಿ ದೊಡ್ಡ ಶಾಖಾಹಾರಿ ಪ್ರಾಣಿಗಳಾದ ಆನೆಗಳು, ರೈನೋಸರಸ್ ಗಳು, ಹಿಪ್ಪಪೋಟಮಸ್ ಮತ್ತು ಗೊರಿಲ್ಲಾಗಳು ಕೂಡ ಅವುಗಳ ಮಾಂಸಕ್ಕೆ ಹಾಗು ಅವುಗಳ ಅಂಗಾಂಗಳ ಅಪಾರ ಬೇಡಿಕೆಗೆ ಅಳಿವಿನಂಚಿಗೆ ಹೋಗುವ ಸಾಧ್ಯತೆ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ.

"ಉದಾಹರಣೆಗೆ ರೈನೋಸರಸ್ ನ ಕೊಂಬು ಅಷ್ಟೇ ತೂಗುವ ಚಿನ್ನ, ವಜ್ರ ಅಥವಾ ಕೊಕೈನ್  ಗಿಂತ ಹೆಚ್ಚಿನ ಬೆಲೆ ಬಾಳುತ್ತದೆ" ಎಂದು ಅಧ್ಯಯನದ ಮುಖ್ಯ ಲೇಖಕ ಹಾಗು ಅಮೆರಿಕಾದ ಆರೆಗಾನ್ ಸ್ಟೇಟ್ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ಪ್ರೊಫೆಸರ್ ವಿಲಿಯಂ ರಿಪ್ಪಲ್ ತಿಳಿಸಿದ್ದಾರೆ.

೨೦೦೨ ರಿಂದ ೨೦೧೧ ರ ಮಧ್ಯದಲ್ಲಿ ಕಾಡಾನೆಗಳ ಸಂತತಿಯಲ್ಲಿ ೬೨% ಇಳಿಮುಖವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಹಾಗೆಯೇ ೨೦೦೭ ರಿಂದ ೨೦೧೩ ರ ಅವಧಿಯಲ್ಲಿ ಭೇಟೆಯಾಡಿದ ರೈನೋಸರಸ್ ಗಳ ಸಂಖ್ಯೆ ವರ್ಷಕ್ಕೆ ೧೩ ರಿಂದ ೧೦೦೪ ಏರಿದೆ ಎಂದಿದ್ದಾರೆ.

೨೦೧೦ ಮತ್ತು ೨೦೧೨ ರ ಅವಧಿಯಲ್ಲಿ ಸವನ್ನಾ ಆನೆಗಳ ಸಂತತಿಯ ಐದನೇ ಒಂದು ಭಾಗ ಅಂದರೆ ೧ ಲಕ್ಷ ಕಾಡಾನೆಗಳನ್ನು ಭೇಟೆಯಲ್ಲಿ ಕೊಲ್ಲಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

"ಈ ಭೇಟೆಗಳನ್ನು ಕೂಡಲೆ ತಪ್ಪಿಸದೇ ಹೋದರೆ ಪರಿಸರದಲ್ಲಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅಸಮತೋಲನ ಉಂಟಾಗಲಿದೆ" ಎಂದು ವರದಿ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT