ಸಾಂದರ್ಭಿಕ ಚಿತ್ರ 
ಕೃಷಿ-ಪರಿಸರ

ಮುಂಗಾರು ಕೊರತೆ: ಕಾಫಿ ಉತ್ಪಾದನೆ ಮೇಲೆ ಹೊಡೆತ

ಈ ವರ್ಷ ದಕ್ಷಿಣ ಭಾರತದಲ್ಲಿ ಮಾನ್ಸೂನ್ ಕೊರತೆಯಿಂದ ಕಾಫಿ ಉತ್ಪಾದನೆ ಮೇಲೆ...

ಚೆನ್ನೈ/ಕೊಚ್ಚಿ: ಈ ವರ್ಷ ದಕ್ಷಿಣ ಭಾರತದಲ್ಲಿ ಮಾನ್ಸೂನ್ ಕೊರತೆಯಿಂದ ಕಾಫಿ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. 
ಅಕ್ಟೋಬರ್ 2016ರಿಂದ ಸೆಪ್ಟೆಂಬರ್ 2017ರವರೆಗಿನ ಬೆಳೆ ವರ್ಷದ ಪರಿಷ್ಕೃತ ಅಂದಾಜು ಮುನ್ಸೂಚನೆ ಪ್ರಕಾರ  ಕಳೆದ ವರ್ಷಕ್ಕಿಂತ ಶೇಕಡಾ 7ರಷ್ಟು ಉತ್ಪಾದನೆ ಕಡಿಮೆಯಾಗಿದೆ. 2015-16ನೇ ಸಾಲಿನಲ್ಲಿ 3,48,000 ಟನ್ ಗಳಷ್ಟು ಕಾಫಿ ಉತ್ಪಾದನೆಯಾಗಿತ್ತು. ಈ ವರ್ಷ ಇದುವರೆಗೆ 3,16,700 ಟನ್ ಗಳಷ್ಟು ದಕ್ಷಿಣ ಭಾರತದಲ್ಲಿ ಕಾಫಿ ಬೆಳೆ ಉತ್ಪಾದನೆ ಕಂಡಿದೆ.
ಕೇವಲ ಒಂದು ರಾಜ್ಯ ಅಥವಾ ಒಂದು ಪ್ರದೇಶದಲ್ಲಿ ಮಾತ್ರ ಉತ್ಪಾದನೆಯಲ್ಲಿ ಕುಸಿತ ಕಂಡುಬಂದಿಲ್ಲ. ಅರೇಬಿಕಾ ಉತ್ಪಾದನೆ ಕಳೆದ ವರ್ಷ 1,03,500 ಟನ್ ಗಳಷ್ಟಿದ್ದು, ಈ ವರ್ಷ 96,200 ಟನ್ ಗಳಷ್ಟಾಗಿದೆ. ರೊಬಸ್ಟಾ 2,44,500 ಟನ್ ಗಳಿಂದ 2,20,500 ಟನ್ ಗಳಿಗೆ ಕುಸಿದಿದೆ. ಕರ್ನಾಟಕದಲ್ಲಿ ಕಾಫಿ ಉತ್ಪಾದನೆ ಕಳೆದ ವರ್ಷ 2,51,520 ಟನ್ ಗಳಷ್ಟಿತ್ತು. ಈ ವರ್ಷ 2,26,300 ಟನ್ ಗಳಿಗೆ ಕುಸಿದಿದೆ.
ಕೇರಳದಲ್ಲಿ 69,230 ಟನ್ ನಿಂದ 63,290 ಟನ್ ಗೆ, ತಮಿಳುನಾಡಿನಲ್ಲಿ 17,295 ಟನ್ ಗಳಿಂದ 16,560 ಟನ್ ಗಳಿಗೆ ಕಾಫಿ ಬೆಳೆ ಉತ್ಪಾದನೆ ಕುಸಿದಿದೆ. ತಾಪಮಾನ, ಹಿಂಗಾರು ಮಾರುತ ಕೊರತೆ, ತಡವಾಗಿ ಹೂವು ಬಿಟ್ಟಿರುವುದು ಇದಕ್ಕೆ ಕಾರಣ ಎಂದು ಕಾಫಿ ಮಂಡಳಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದುರಹಂಕಾರ ಬಿಟ್ಟು ಕಾನೂನು ಪಾಲಿಸಿ: ಇಲ್ಲಿ ಶ್ರೀರಾಮನೇ ಲೆಕ್ಕ ಕೊಡಬೇಕು, ಇನ್ನು ರಾಮನ ಹೆಸ್ರಲ್ಲಿ ರಾಜಕೀಯ ಮಾಡಿದವರು ಕೊಡಬಾರ್ದಾ?

ಮಾವಿನ ಹಣ್ಣು ತಿಂದು ಸಹೋದರಿಯರ ಸಾವು ಕೇಸ್: ಕುಟುಂಬದ ಹೆಣ್ಣು ಮಕ್ಕಳನ್ನು ದತ್ತು ಪಡೆದ ಮಾಜಿ ಸಚಿವ ಪ್ರಭು ಚವ್ಹಾಣ್

Fact Check: ಪ್ರಿಯಾಂಕ್ ಖರ್ಗೆ ಪತ್ರಕ್ಕೆ ಮೋಹನ್ ಭಾಗವತ್ ಪ್ರತಿಕ್ರಿಯೆ ವಿಡಿಯೋ ಫೇಕ್; ಗೃಹ ಸಚಿವರಿಂದಲೇ ಫ್ಯಾಕ್ಟ್ ಚೆಕ್

'ಸೈಲೆಂಟ್ ಮೋಡ್'ನಿಂದ ಯಾವಾಗ ಹೊರಬರುತ್ತೀರಿ? ಯಾಕೀ ದಿವ್ಯ ಮೌನ?: ಸಿಎಂ ವಿಜಯ್‌ಗೆ ಸ್ಟಾಲಿನ್ ಪ್ರಶ್ನೆ

ಇರಾನ್ ಸಂಘರ್ಷ ಅಂತ್ಯ; ಸತತ 3ನೇ ದಿನವೂ Indian Stock Market ಏರಿಕೆ, 24 ಸಾವಿರ ಅಂಕ ಗಡಿಯತ್ತ Nifty50

SCROLL FOR NEXT