ಮಥುರಾ ಹಿಂಸೆಯ ಚಿತ್ರ 
ಕೃಷಿ-ಪರಿಸರ

ಮಥುರಾ ಹಿಂಸೆಯಲ್ಲಿ ಸಾವಿರಾರು ಮರಗಳ ನಾಶ

ಮಥುರಾದ ಜವಾಹರ್ ಭಾಗ್ ನಲ್ಲಿ ಅತಿಕ್ರಮಣಕಾರರು ಮತ್ತು ಪೊಲೀಸರ ನಡುವೆ ನಡೆದ ಗುಂಡಿನ ಘರ್ಷಣೆ ಹಿಂಸೆಗೆ ತಿರುಗಿದ್ದರಿಂದ ಸಾವಿರಾರು ಮರಗಳು ಸುಟ್ಟು ನಾಶವಾಗಿವೆ.

ಮಥುರಾ: ಮಥುರಾದ ಜವಾಹರ್ ಭಾಗ್ ನಲ್ಲಿ ಅತಿಕ್ರಮಣಕಾರರು ಮತ್ತು ಪೊಲೀಸರ ನಡುವೆ ನಡೆದ ಗುಂಡಿನ ಘರ್ಷಣೆ ಹಿಂಸೆಗೆ ತಿರುಗಿದ್ದರಿಂದ ಸಾವಿರಾರು ಮರಗಳು ಸುಟ್ಟು ನಾಶವಾಗಿವೆ.

ಸುಮಾರು ೫೦೦೦ ಮರಗಳು ಅವುಗಳಲ್ಲಿ ಹೆಚ್ಚಿನವು ಹಣ್ಣಿನ ಮರಗಳು ಸುಟ್ಟು ಕರುಕಲಾಗಿವೆ ಎಂದು ಉತ್ತರ ಪ್ರದೇಶ ತೋಟಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಹಸಿರು ನಾಶಕ್ಕೆ ಕಾರಣವಾದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಮಥುರಾದಲ್ಲಿ ಪರಿಸರವಾದಿಗಳು ಆಗ್ರಹಿಸಿದ್ದಾರೆ.

೨೬೦ ಎಕರೆ ತೋಟವನ್ನು ಆಕ್ರಮಿಸಿಕೊಂಡಿದ್ದ ಅತಿಕ್ರಮಣಕಾರರ ವಿರುದ್ಧ ತೋಟಗಾರಿಕಾ ಇಲಾಖೆ ಕ್ರಮ ತೆಗೆದುಕೊಳ್ಳಬೇಕಿತ್ತು ಆದರೆ ಪರಿಸರಕ್ಕೆ ಆಗುತ್ತಿರುವ ತೊಂದರೆಯ ವಿರುದ್ಧ ಉದಾಸೀನ ತಳೆದರು ಅಧಿಕಾರಿಗಳು ಎಂದು ಬ್ರಜ್ ಬಚಾವೋ ಸಮಿತಿ ಸದಸ್ಯರು ಆರೋಪಿಸಿದ್ದಾರೆ.

ಆದರೆ ಇಲಾಖೆಯ ಅಧಿಕಾರಿಗಳು ಹಲವಾರು ಬಾರಿ ಇದರ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು ಮತ್ತು ಹಿರಿಯ ಜಿಲ್ಲ ಅಧಿಕಾರಿಗಳಿಗೂ ಪದೇ ಪದೇ ಸೂಚಿಸಲಾಗಿತ್ತು ಎಂದು ಅಧಿಕಾರಿಗಳು ಸ್ಪಷ್ಟೀಕರಿಸಿದ್ದಾರೆ.

ಹಲವಾರು ವರ್ಷಗಳಿಂದ ಕಷ್ಟ ಪಟ್ಟು ಬೆಳೆಸಿದ್ದ ಈ ಮರಗಳು ಇಡೀ ಜವಾಹರ್ ಭಾಗ್ ಅನ್ನು ಹಸಿರುಮಯ ಮಾಡಿದ್ದವು ಎಂದಿರುವ ಅಧಿಕಾರಿ "ಈ ನಷ್ಟ ಸರಿಪಡಿಸಲು ಕಷ್ಟ, ಮತ್ತೆ ಈ ಹಸಿರನ್ನು ಮರುಕಳಿಸಲು ವರ್ಷಗಳೇ ಬೇಕು" ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಕ್ರಿಕೆಟ್‌ ಪಂದ್ಯ, ರಾಜ್ಯ ಸಚಿವ ಸಂಪುಟದ ಒಪ್ಪಿಗೆ? ಗೃಹ ಇಲಾಖೆಗೆ ಭದ್ರತೆಯ ಹೊಣೆ!

2ನೇ ಟಿ20: 51 ರನ್ ಗಳ ಅಂತರದಿಂದ ಗೆದ್ದು ಬೀಗಿದ ದಕ್ಷಿಣ ಆಫ್ರಿಕಾ! ಅನಗತ್ಯ ದಾಖಲೆ ಬರೆದ ಅರ್ಷದೀಪ್

ಸಿಎಂ ಸಿದ್ದರಾಮಯ್ಯರ ವಿಮಾನ ಪ್ರಯಾಣ: 'ರಾಜ್ಯದ ಬೊಕ್ಕಸ'ದಿಂದ ಆದ ಖರ್ಚು ಎಷ್ಟು ಗೊತ್ತಾ?

ಟ್ರಂಪ್ ಗೆ ಮೋದಿ ದೂರವಾಣಿ ಕರೆ: ಮಹತ್ವದ ಚರ್ಚೆ!

KSCA ಗೆ ಹೊಸ ಸದಸ್ಯರ ಸೇರ್ಪಡೆ: ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನ- ವೆಂಕಟೇಶ್ ಪ್ರಸಾದ್

SCROLL FOR NEXT