ಕೃಷಿ-ಪರಿಸರ

ಒಂದೇ ಮರದಲ್ಲಿ 18 ಬಗೆಯ ಮಾವಿನ ಹಣ್ಣು: ಆಂಧ್ರಪ್ರದೇಶ ರೈತನ ದಾಖಲೆ

Manjula VN
ವಿಜಯವಾಡ: ಕೃಷಿ ಕೂಡ ಒಂದು ಕಲೆ ಎಂಬುದುನ್ನು ಆಂಧ್ರಪ್ರದೇಶ ಮೂಲದ ರೈತನೊಬ್ಬ ಸಾಬೀತು ಮಾಡಿದ್ದಾನೆ. ಒಂದೇ ಮರದಲ್ಲಿ 18 ವಿವಿಧ ಬಗೆಯ ಮಾವಿನ ಹಣ್ಣುಗಳನ್ನು ಬೆಳೆಸುವ ಮೂಲಕ ಈ ರೈತ ಸಾಧನೆ ಮಾಡಿದ್ದಾನೆ. 
ಆಂಧ್ರಪ್ರದೇಶದ ಕಷ್ಣಾ ಜಿಲ್ಲೆಯ ವಡ್ಲಮನು ಗ್ರಾಮದ ಕುಪ್ಪಲ ರಾಮ ಗೋಪಾಲ ಕೃಷ್ಣ ಸಾಧನೆ ಮಾಡಿರುವ ರೈತರಾಗಿದ್ದಾರೆ. ತಮ್ಮ 7 ಎಕರೆ ಪ್ರದೇಶದ ತೋಟದಲ್ಲಿ ಗೋಪಾಲ ಕೃಷ್ಣ ಅವರು ಈ ವಿಶಿಷ್ಟ ಮರವನ್ನು ಬೆಳೆಸಿದ್ದಾರೆ. 
ಒಂದೇ ಮರದಲ್ಲಿ ಗೋಪಾಲ ಕೃಷ್ಣ ಅವರು ಬಂಗಿನಾಪಲ್ಲಿ, ಚಿನ್ನ ರಸಂ, ಪೆದ್ದ ರಸಂ, ನಲ್ಲ ರಸಂ, ಚೆರುಕು ರಸಂ, ಹಿಮಾಯತಿ, ಕೊಬ್ಬರಿ ಮಾಮಿಡಿ, ನುಜ್ವಿದ್ ಮಾಮಿಡಿ, ಅಲ್ಫೊನ್ಸೋ, ಪುನಾಸ, ದಶರಿ, ಪಂಡುರು ಮಾಮಿಡಿ, ಕಲೆಕ್ಟರ್, ಜಲಂ, ನೀಲಿಶಾ, ಸುವರ್ಣ ರೇಖಾ, ಪಂಚಡ ರಕಶಂ ಮಲ್ಲಿಕಾ ಎಂಬ ಒಟ್ಟು 18 ಬಗೆಯ ಮಾವಿನ ಹಣ್ಣುಗಳನ್ನು ಬೆಳೆದಿದ್ದು, ಈ ವಿಚಾರ ತಿಳಿಯುತ್ತಿದ್ದಂತೆಯೇ ಅಚ್ಚರಿ ವ್ಯಕ್ತಪಡಿಸುತ್ತಿರುವ ಜನರು, ಇದರ ಬಗ್ಗೆ ಮಾಹಿತಿ ಪಡೆಯಲು ಹಲವಾರು ರೈತರು ಇದೀಗ ಗೋಪಾಲ ಕೃಷ್ಣ ಅವರ ತೋಟಕ್ಕೆ ಭೇಟಿ ನೀಡುತ್ತಿದ್ದಾರೆ. ಇಷ್ಟೇ ಅಲ್ಲದೆ, ಈ ವಿಶಿಷ್ಟ ತೋಟ ಸರ್ಕಾರಿ ಅಧಿಕಾರಿಗಳ ಗಮನವನ್ನೂ ಸೆಳೆಯುತ್ತಿದೆ. 
ಒಂದು ಮರದಲ್ಲಿ 18 ಬಗೆಯ ಮಾವಿನ ಹಣ್ಣುಗಳನ್ನು ಬೆಳೆಸುವುದು ಸಾಧನೆಯೇ ಸರಿ ಎಂದು ಅಧಿಕಾರಿಗಳು ರೈತನನ್ನು ಹೊಗಳಿಸಿದ್ದಾರೆ. 
ಹಾರ್ಟಿಕಲ್ಚರ್ ಟೆಕ್ನಿಕ್ ಗಳನ್ನು ಕಲಿತ ಗೋಪಾಲ ಕೃಷ್ಣ  ಅವರು ವಿವಿಧ ಜಾತಿಯ ಗಿಡವನ್ನು ಒಂದೆಡೆ ಏಕೀಕೃಗೊಳಿಸಿ ನೆಟ್ಟು ವಿವಿಧ ತಳಿಯ ಹಣ್ಣುಗಳನ್ನು ಒಂದೇ ಮರದಲ್ಲಿ ಬೆಳೆಯುವಂತೆ ಮಾಡಿದ್ದಾರೆ. 
2015ರಲ್ಲಿ ಗೋಪಾಲ ಕೃಷ್ಣ ಅವರ ತೋಟದಲ್ಲಿ ಮಾವುಗಳು ಬೆಳೆಯದ ಕಾರಣ ಹಲವರು ಮರಗಳನ್ನು ಕತ್ತರಿಸುವಂತೆ ಸಲಹೆಗಳನ್ನು ನೀಡಿದ್ದರು. ಆದರೆ, ಇದಾವುದಕ್ಕೂ ಅವರು ಕಿವಿಕೊಡದೆ ಇದೀಗ ಸಾಧನೆ ಮಾಡಿದ್ದಾರೆ. 
ವಿವಿಧ ರೀತಿಯ ಗಿಡಿಗಳನ್ನು ಒಂದೆಡೆ ಹಾಕಿ ಒಂದೇ ಗಿಡದಲ್ಲಿ ವಿವಿಧ ಗಿಡಗಳು ಬೆಳೆಯುವುದನ್ನು ನಾನು ನೋಡಿದ್ದೆ. ಈ ವೈಜ್ಞಾನಿಕ ತಂತ್ರ ನನ್ನನ್ನು ಪ್ರೇರೇಪಿಸಿತ್ತು. ಹೀಗಾಗಿ ನಾನು ಕೂಡ ಇದೇ ತಂತ್ರವನ್ನು ಬಳಸಿಕೊಳ್ಳಲು ನಿರ್ಧರಿಸಿದ್ದೆ. ನನ್ನ ನಿರ್ಧಾರವನ್ನು ಸ್ನೇಹಿತರೊಂದಿಗೆ ಹಂಚಿಕೊಂಡಿದ್ದೆ. ಈ ವೇಳೆ ಅವರು ನಕ್ಕಿದ್ದರು. ಇದೀಗ ನನ್ನ ಸಾಧನೆಯನ್ನು ನೋಡಿ ಇತರೆ ರೈತರು ನನ್ನನ್ನು ಕೂಗಿ ಸಲಹೆಗಳನ್ನು ಪಡೆಯುತ್ತಿದ್ದಾರೆಂದು ಗೋಪಾಲ ಕೃಷ್ಣ ಅವರು ಹೇಳಿದ್ದಾರೆ. 
ಉತ್ತರ ಪ್ರದೇಶದಲ್ಲೂ ಇಂತಹದ್ದೇ ಸಾಧನೆಯೊಂದರನ್ನು ಒಬ್ಬ ರೈತ ಬರೆದಿದ್ದ. ಕಲೀಂ ಉಲ್ಲಾ ಖಾನ್ ಎಂಬುವವರು ಒಂದೇ ಮರದಲ್ಲಿ ವಿಭಿನ್ನ ಆಕಾರ, ಬಣ್ಣ ಮತ್ತು ಗಾತ್ರದ 300 ವಿಧದ ಮಾವಿನ ಹಣ್ಣುಗಳನ್ನು ಬೆಳೆದಿದ್ದರು. ಸಾಧನೆ ಮಾಡಿದ್ದ ಈ ಕೃಷಿಕನಿಗೆ ಭಾರತ ಸರ್ಕಾರ 2008ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. 
SCROLL FOR NEXT