ಕೃಷಿ-ಪರಿಸರ

ಉಡುಪಿ: ಕರ್ನಾಟಕದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಪುಟಾಣಿ ಹಕ್ಕಿ ಲಿಟಲ್ ಬಂಟಿಂಗ್

Raghavendra Adiga
ಉಡುಪಿ: ಲಿಟಲ್ ಬಂಟಿಂಗ್ ಅಥವಾ ಯುರೇಶಿಯನ್ ಟ್ರೀ ಸ್ಪ್ಯಾರೋ ಎಂದು ಕರೆಯಲಾಗುವ ಗುಬ್ಬಚ್ಚಿ ಜಾತಿಯ ಪುಟ್ಟ ಹಕ್ಕಿ ಇದೇ ಮೊದಲ ಬಾರಿಗೆ ಉಡುಪಿ ಜಿಲ್ಲೆ ಬಾರ್ಕೂರಿನಲ್ಲಿ ಪತ್ತೆಯಾಗಿದೆ. ಒಟ್ಟು ನಾಲ್ಕು ಹಕ್ಕಿಗಳ ಗುಂಪು ಕಾಡಿನ ಒಣ ಮರದ ಮೇಲೆ ಕುಳಿತು ಕೂಗುತ್ತಿದ್ದದ್ದನ್ನು ಆದಿತ್ಯ ಭಟ್, ಸಹಾನಾ ಎಂ, ಅರುಣ್ ಪ್ರಭು ಮತ್ತು ಕುಮುದಿನಿ ಪ್ರಭು ಎನ್ನುವವರು ಪತ್ತೆ ಮಾಡಿದ್ದಾರೆ.
"ಈ ಹಕ್ಕಿ ಯುರೊಪ್ ಮತ್ತು ಉತ್ತರ ಏಷ್ಯಾದ ಭಾಗಗಳಿರುತ್ತವೆ. ಚಳಿಗಾಲದಲ್ಲಿ ದಕ್ಷಿಣ ಚೀನಾ ಮತ್ತು ಈಶಾನ್ಯ ಭಾರತಕ್ಕೆ ವಲಸೆ ಬರುತ್ತವೆ. ಈ ಹಕ್ಕಿ ಸಾಮಾನ್ಯವಾಗಿ 3,300-6,600 ಅಡಿ ಎತ್ತರವಿರುವ ಕೃಷಿ ಭೂಮಿಯಲ್ಲಿ  ಕಂಡುಬರುತ್ತದೆ. ಆದರೆ ಬಾರ್ಕೂರಿನಲ್ಲಿ ಈ ಪಕ್ಷಿ ಕಂಡುಬಂದಿರುವುದು ನಿಜಕ್ಕೂ ಅಚ್ಚರಿ ಮತ್ತು ಸಂತಸಕ್ಕೆ ಕಾರಣವಾಗಿದೆ" ಆದಿತ್ಯ ಭಟ್ ಹೇಳಿದ್ದಾರೆ.
ಇದುವರೆಗೆ ದಕ್ಷಿಣ ಭಾರತದಲ್ಲಿ ಕೇವಲ ಎರಡು ಬಾರಿ ಈ ಹಕ್ಕಿ ಕಾಣಿಸಿಕೊಂಡಿದ್ದು ದಾಖಲಾಗಿದೆ. ಅದರಲ್ಲಿ ಒಂದು ಮಹಾರಾಷ್ಟ್ರದ ಪುಣೆಯಲ್ಲಾದರೆ ಇನ್ನೊಮ್ಮೆ ಕೇರಳದ ಮುನ್ನಾರ್ ನಲ್ಲಿ ಈ ಅಪರೂಪದ ಲಿಟಲ್ ಬಂಟಿಂಗ್ ಗೋಚರಿಸಿತ್ತು.
"ಕರ್ನಾಟಕದಲ್ಲಿ ಈ ಹಕ್ಕಿ ಮೊಟ್ಟಮೊದಲ ಬಾರಿಗೆ ಕಂಡುಬಂದಿದ್ದು, ನಾವು ಬಾರ್ಕೂರಿನಂತಹಾ ತೇವ ಹಾಗೂ ಆರ್ದ್ರ ಪ್ರದೇಶಗಳನ್ನು ಸುರಕ್ಷಿತವಾಗಿ ಉಳಿಸಿಕೊಂಡರೆ ಭವಿಷ್ಯದಲ್ಲಿ ಪ್ರಕೃತಿಯ ಇನ್ನಷ್ಟು ಅಚ್ಚರಿಗಳನ್ನು ನಾವು ಕಾಣಲು ಸಾಧ್ಯವಿದೆ" ಆದಿತ್ಯ ಭಟ್ ಹೇಳಿದ್ದಾರೆ.
SCROLL FOR NEXT