ಕೃಷಿ-ಪರಿಸರ

ಪಶ್ಚಿಮ ಘಟ್ಟದ ಪಕ್ಷಿಗಳಿಗೆ ರೋಬಸ್ಟಾ ಕಾಫಿಯೇ ಇಷ್ಟ!

Srinivas Rao BV
ಬೆಂಗಳೂರು: ಅರೇಬಿಕಾ ಕಾಫಿಯ ಸ್ವಾದಕ್ಕೆ ಫಿದಾ ಆಗದವರು ಬಹಳ ವಿರಳ, ಮನುಷ್ಯರಂತೆ ಕಾಫಿಯನ್ನು ಇಷ್ಟಪಡುವ ಪಕ್ಷಿಗಳೂ ಇದ್ದು, ಅರೇಬಿಕಾದ ಬದಲಾಗಿ ರೋಬಸ್ಟಾ ಕಾಫಿಯನ್ನೇ ಇಷ್ಟಪಡುತ್ತವೆ ಎನ್ನುತ್ತಿವೆ ಹೊಸ ಸಂಶೋಧನೆ 
ಪಶ್ಚಿಮ ಘಟ್ಟದಲ್ಲಿ ನಡೆದಿರುವ ಸಂಶೋಧನೆಯೊಂದರ ಪ್ರಕಾರ ಅರೇಬಿಕಾ ಕಾಫಿಗಿಂತ ರೋಬಸ್ಟಾ ಕಾಫಿಯೆಡೆಗೇ ಹೆಚ್ಚು ಆಕರ್ಷಿತವಾಗುತ್ತವಂತೆ. ಈ ಹೊಸ ಸಂಶೋಧನಾ ವರದಿ ಹಿಂದೆಂದಿಗಿಂತಲೂ ವಿಭಿನ್ನವಾಗಿದ್ದು, ಅರೇಬಿಕಾ ಹೆಚ್ಚು ಪಕ್ಷಿ ಸಂತತಿಯನ್ನು ಆಕರ್ಷಿಸುತ್ತಿತ್ತಾದರೂ ಈಗ ರೋಬಸ್ಟಾ ತಳಿಯ ಕಾಫಿ ಹಣ್ಣುಗಳು ಪಕ್ಷಿಗಳನ್ನು ಹೆಚ್ಚು ಆಕರ್ಷಿಸುತ್ತಿದೆಯಂತೆ.  
ಅತಿ ಹೆಚ್ಚು ಕಾಫಿ ಬೆಳೆಯುವ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಕೊಡಗುಗಳಲ್ಲಿ ಅಧ್ಯಯನ ನಡೆಸಲಾಗಿದ್ದು,  ಅರಣ್ಯದಲ್ಲಿ ಜೀವಿಸುವ ಪಕ್ಷಿಗಳು, ಐಯುಸಿಎನ್ ರೆಡ್ ಲಿಸ್ಟೆಡ್ ಜೀವಿಗಳು ಹಾಗೂ ಸ್ಥಳೀಯ ಪ್ರಭೇದದ ಪಕ್ಷಿಗಳನ್ನು ಅಧ್ಯಯನಕ್ಕೊಳಪಡಿಸಲಾಗಿದ್ದು,  ಪಶ್ಚಿಮ ಘಟ್ಟಗಳಲ್ಲಿ ಅರೇಬಿಕಾ ಹಾಗೂ ರೋಬಾಸ್ಟಾ ಕಾಫಿ ತಳಿ ಪಕ್ಷಿ ಸಂಕುಲಕ್ಕೆ ಸಮಾನವಾದ ಆಕರ್ಷಣೀಯ ಕಾಫಿ ಬೆಳೆಗಳಾಗಿವೆ.  
ಅಧ್ಯಯನ ವರದಿಯಲ್ಲಿ ಅರಣ್ಯದ ಮೇಲೆ ಅವಲಂಬಿತವಾಗಿರುವ 79 ವಿಧದ ಪ್ರಭೇದಗಳು ಕಂಡುಬಂದಿದ್ದು, 14 ಸ್ಥಳೀಯ ಪ್ರಭೇದಗಳು ದಾಖಲಾಗಿವೆ. ಇದೇ ವೇಳೆ ಐಯುಸಿಎನ್ ರೆಡ್ ಲಿಸ್ಟೆಡ್ ಪ್ರಭೇಧಗಳಲ್ಲಿ ಪ್ರಮುಖವಾದ ಅಲೆಕ್ಸಾಂಡ್ರೈನ್ ಪ್ಯಾರಕೆಟ್, ಗ್ರೇ-ಹೆಡೆಡ್ ಬುಲ್ಬುಲ್ ಮತ್ತು ನೀಲಗಿರಿ ವುಡ್-ಪಾರಿವಾಳಗಳು ಕಂಡುಬಂದಿದ್ದು, ಹೆಚ್ಚಿನ ಪ್ರಭೇದದ ಪಕ್ಷಿಗಳು ರೋಬಾಸ್ಟಾ ಕಾಫಿಯೆಡೆಗೇ ಹೆಚ್ಚು ಆಕರ್ಷಿತವಾಗುತ್ತವೆ ಎಂದು ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ತಜ್ಞರು ಹೇಳಿದ್ದಾರೆ. 
SCROLL FOR NEXT