ಕೃಷಿ-ಪರಿಸರ

ಬಿಟಿ ಹತ್ತಿ ಬೀಜಗಳ ದರ, ರಾಯಧನ ಪ್ರಮಾಣದಲ್ಲಿ ಕಡಿತ: ಕೇಂದ್ರ ಘೋಷಣೆ

Raghavendra Adiga
ಚೆನ್ನೈ: ಬೆಲೆ ಏರಿಕೆ ಸಮಸ್ಯೆಯಿಂದ ತೊಂದರೆಗೊಳಗಾಗಿರುವ ಭಾರತೀಯ ರೈತರಿಗೆ ನೆರವು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಬಿಟಿ ಹತ್ತಿ ಬೀಜಗಳ ಬೆಲೆಗಳನ್ನು ಕಡಿತಗೊಳಿಸುವ ಮುಖೇನ ರೈತರ ಸಂಕಷ್ಟಕ್ಕೆ ಸ್ಪಂದಿಸಿದೆ.
ಸಾಲ ಮನ್ನಾ ಹಾಗೂ ಬೆಳೆ ಹಾನಿಗೆ ಪರಿಹಾರ ಆಗ್ರಹಿಸಿ ಸಾವಿರಾರು ಪ್ರತಿಭಟನಾ ನಿರತ ರೈತರು ಮುಂಬೈಗೆ ಪಾದಯಾತ್ರೆ ನಡೆಸಿದ್ದ ಒಂದು ದಿನದ ತರುವಾಯ ಕೇಂದ್ರ ಸರ್ಕಾರ ಈ ತೀರ್ಮಾನ ಕೈಗೊಂಡಿದೆ.
450 ಗ್ರಾಂ ಬಿಟಿ ಹತ್ತಿ ಬೀಜಗಳ ಪ್ಯಾಕ್ ಒಂದರ ಪರಿಷ್ಕೃತ ಬೆಲೆ ರೂ. 740 ಆಗಿದೆ. ಈ ಹಿಂದೆ ಇದೇ ಪ್ಯಾಕ್ ಗೆ ರೂ. 800 ಇದ್ದಿತ್ತು.
ಇದಲ್ಲದೆ ಎರಡು ವರ್ಷಗಳಲ್ಲಿ ಎರಡನೆಯ ಬಾರಿಗೆ. ಸ್ಥಳೀಯ ಕೃಷಿ ಕಂಪೆನಿಗಳು ಅಮೆರಿಕದ ಕೃಷಿ ರಾಸಾಯನಿಕ ಕಂಪನಿಗೆ ಪಾವತಿಸುವ ರಾಯಧನವನ್ನು ಸಹ ಸರ್ಕಾರ ಕಡಿತಗೊಳಿಸಿದೆ.
ಕೇಂದ್ರ ಕೃಷಿ ಇಲಾಖೆ ಅಮೆರಿಕಾ ಸಂಸ್ಥೆಯ ರಾಯಧನದಲ್ಲಿ ಶೇ.20.4 ರಷ್ಟು ಕಡಿತ ಮಾಡಲು ನಿರ್ಧರಿಸಿದೆ ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ. ಈ ಹಿಂದೆ 2016ರಲ್ಲಿ ರಾಯಧನವ ಪಾಲನ್ನು ಶೇ. 70ರಷ್ಟನ್ನು ಕಡಿತಗೊಳಿಸಿತ್ತು.
SCROLL FOR NEXT