ಭೌಗೋಳಿಕ ನೈಸರ್ಗಿಕ ವಿದ್ಯಮಾನಗಳನ್ನು ಮನೋವೈಜ್ಞಾನಿಕ ಶಾಸ್ತ್ರದಿಂದ ಪರಾಮರ್ಶಿಸಿದಾಗ 2013 ಆ.7 ರಿಂದ ಸೆ.4ರ ವರೆಗಿನ ಶ್ರಾವಣ ಮಾಸದ ದಿನಗಳು ಈ ಶತಮಾನದಲ್ಲಿ ಪರಮ ಪವಿತ್ರ ದಿನಗಳು ಎನಿಸಿಕೊಂಡಿವೆ.
ಗ್ರೆಗೋರಿಯನ್ ಕ್ಯಾಲೆಂಡರ್ ಸಿದ್ಧಾಂತದಿಂದ ಪರಾಮರ್ಶಿಸಿದಾಗ ಶ್ರಾವಣ ಪವಿತ್ರ ದಿನಗಳು 2019, 30, 41, 47, 69, 75, 86, ಮತ್ತು 2097 ವರ್ಷಗಳಲ್ಲಿ ಮಾತ್ರ ಮರುಕಳಿಸುತ್ತವೆ. ಈ ಕಾಲಮಾನದಲ್ಲಿ ಜನಿಸಿದ ಮಕ್ಕಳು ಪ್ರಪಂಚದ ಮಹಾನ್ ವ್ಯಕ್ತಿಗಳಾಗಿ, ವಿಜ್ಞಾನ, ಬ್ರಹ್ಮಜ್ಞಾನ, ದೈವ ಚಿಂತನೆ ಮತ್ತು ಸಮಾಜ ಸುಧಾರಕರಾಗಿ ಬೆಳೆಯುತ್ತಾರೆ. ಇವರಿಗೆ ಜೀವನವಿಡೀ ಯಾವುದೇ ಗ್ರಹದೋಷ ಸಂಭವಿಸಲಾರವು.
ಪ್ಲೋಟೋವಿನ ಶಿಷ್ಯ ಅರಿಸ್ಟಾಟಲ್ ಹೇಳಿರುವಂತೆ ನಭೋಮಂಡಲದಲ್ಲಿ ದೇವರು ಎರಕ ಹೊಯ್ಯುವ ನಭೋ ಪ್ರಭಾವ ಪ್ರಥಮವಾಗಿ ನಕ್ಷತ್ರಗಳಿಂದ ನಂತರ ಗ್ರಹಗಳ ಮತ್ತು ಉಪಗ್ರಹಗಳ ಮೂಲಕ ಪೃಥ್ವಿಯನ್ನು ಸೇರುತ್ತದೆ. ಈ ದಿಸೆಯಲ್ಲಿ ದೇವರು ಎರಕ ಹೊಯ್ಯುವ ನಭೋ ಪ್ರಭಾವ ಶ್ರಾವಣ ಮಾಸದ ದಿನಗಳಲ್ಲಿ ಸಿಂಹ ಮತ್ತು ಕನ್ಯಾರಾಶಿಗಳ ನಕ್ಷತ್ರ ಮಂಡಲಗಳಿಂದ ಗ್ರಹಗಳ ಮೇಲೆ ಎರಕ ಹೊಯ್ದು ಪೃಥ್ವಿಯನ್ನು ಸೇರುತ್ತದೆ. ಅಧ್ಯಾತ್ಮಿಕ ವಿಶೇಷತೆ ಎಂದರೆ, ಶ್ರಾವಣ ಮಾಸದಲ್ಲಿ 16 ಅಧಿಕ ಚಂದಿರರನ್ನು ಹೊಂದಿರುವ, ಸೌರಮಂಡಲದಲ್ಲಿಯೇ ಎರಡನೆಯ ದೊಡ್ಡದಾದ ಸೂರ್ಯನಿಂದ 1,427 ಮಿಲಿಯನ್ ಕಿ.ಮೀ. ದೂರದಲ್ಲಿರುವ ಚಕ್ರಾಕಾರದ ಶನಿಗ್ರಹದ ಮೇಲೆ ನಭೋಪ್ರಭಾವ ಹಾದು ಪೃಥ್ವಿಯನ್ನು ಸೇರುತ್ತದೆ. ಇದರಿಂದ ಈ ಮಾಸದಲ್ಲಿ ಶನಿಯ ನಭೋಪ್ರಭಾವ ಹೆಚ್ಚಿನದಾಗಿದ್ದು ಆತ್ಮದ ಜೀವಶಾಸ್ತ್ರ, ವಿಶ್ವೋತ್ಪತ್ತಿ, ಜ್ಯೋತಿರ್ಜ್ಞಾನ ಮತ್ತು ದೇವತಾಖ್ಯಾನದಲ್ಲಿ ಸಂಭವಿಸುವ ಭೌತಿಕ ಕ್ರಿಯೆಗಳನ್ನು ನಿಗ್ರಹಿಸುವುದು.
ಅಧ್ಯಾತ್ಮ ಮತ್ತು ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಶನಿಗ್ರಹಕ್ಕೆ ವಿಶೇಷ ಸ್ಥಾನವಿದೆ. ಇದು ಒಂದು ಬ್ರಹ್ಮಾಂಡದ ಜೀವಂತ ಗ್ರಹ ಎಂದು ಬಣ್ಣಿಸಿದ್ದಾರೆ. ಪ್ರಪಂಚದಲ್ಲಿ ಶನಿದೇವರನ್ನು ಪೂಜಿಸುವ ಹಬ್ಬ ಮತ್ತು ಶನಿದೇವಾಲಯಗಳು ಇವೆ. ನಾಲ್ಕನೇ ಶತಮಾನದಲ್ಲಿ ಭಾರತದ ಖ್ಯಾತ ಜ್ಯೋತಿಷಿ ಮೀನರಾಜರು ಶನಿ ವೈಭವದ ಬಗ್ಗೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಸತ್ಪುರುಷರ ಆರಾಧನೆ, ನಾಗಪೂಜೆ ಮತ್ತು ಲಕ್ಷ್ಮೀ ಪೂಜೆ ಇದೇ ಮಾಸದಲ್ಲಿ ಆಚರಿಸುತ್ತಾರೆ.
ರಾಜಯೋಗ
ಶ್ರಾವಣ ಮಾಸದ ಜ್ಯೋತಿಷ್ಯ ಫಲಗಳನ್ನು ಪರಾಮರ್ಶಿಸಿ ಮನೋವೈಜ್ಞಾನಿಕಶಾಸ್ತ್ರ, ರಾಶಿಶಾಸ್ತ್ರ, ಸಂಖ್ಯಾಶಾಸ್ತ್ರ ಮತ್ತು ನಕ್ಷತ್ರಗಳ ಕ್ಷರಣಾಕ್ಷರಗಳ ವಿಭಜನೆಯಿಂದ ರಾಜಯೋಗ ಮತ್ತು ಅಮೃತ ಸಿದ್ಧಿಯೋಗಗಳನ್ನು ತಿಳಿಯಪಡಿಸಲಾಗಿದೆ. ಸಿಂಹ, ಕನ್ಯಾ ಮತ್ತು ತುಲಾರಾಶಿಯವರಿಗೆ 2013, ಸೆ.23ರಿಂದ ಗುರುಮಹಾದೆಸೆ. ಮೇಷ, ಮಕರ ಮತ್ತು ಕುಂಭ ರಾಶಿಯವರಿಗೆ ಡಿ.24 ರಿಂದ ಶುಕ್ರಮಹಾದೆಸೆ, ವೃಷಭ, ಧನುಸ್ಸು ಮತ್ತು ಮಿಥುನ ರಾಶಿಯವರಿಗೆ 2013 ಮಾ.21 ರಿಂದ ರವಿ ಮಹಾದೆಸೆ ಮತ್ತು ಮೀನ, ಕಟಕ, ವೃಶ್ಚಿಕ ರಾಶಿಯವರಿಗೆ ಆ.29 ರಿಂದ ಶನಿ ಮಹಾ ಮಹಾ ದೆಸೆಗಳು ಸಂಭವಿಸಿ ಮುಂದಿನ 3 ವರ್ಷಗಳ ಕಾಲ ರಾಜಯೋಗ ಮತ್ತು ಅಮೃತ ಸಿದ್ಧಿಯೋಗ ಜರುಗುವುದು.
-ವಿ. ನಾರಾಯಣ ಶೆಟ್ಟಿ ಪದ್ಮಶಾಲಿ