ಭಕ್ತಿ-ಜ್ಯೋತಿಷ್ಯ

ಕುಜ ದೋಷ

ಮಾನವ ಕುಲದಲ್ಲಿ ವಿವಾಹ ತುಂಬಾ ಮಹತ್ತರ ಘಟ್ಟ. ಇಲ್ಲಿ ಸ್ವಲ್ಪ ಎಡವಿದರೂ ಜೀವನ ಪರ್ಯಂತ ದುಃಖ ಪಡಬೇಕಾಗುತ್ತದೆ. ಇಂಥದರಲ್ಲಿ ಕುಜದೋಷ ..

ಮಾನವ ಕುಲದಲ್ಲಿ ವಿವಾಹ ತುಂಬಾ ಮಹತ್ತರ ಘಟ್ಟ. ಇಲ್ಲಿ ಸ್ವಲ್ಪ ಎಡವಿದರೂ ಜೀವನ ಪರ್ಯಂತ ದುಃಖ ಪಡಬೇಕಾಗುತ್ತದೆ. ಇಂಥದರಲ್ಲಿ ಕುಜದೋಷ ಎಷ್ಟಿದೆ ಎಂದು ಇಬ್ಬರ ಜಾತಕವನ್ನು (ವಧು-ವರ) ಕೂಲಂಕಷವಾಗಿ ಪರಿಶೀಲಿಸಿ ವಿವಾಹ ಮಾಡುವುದರಿಂದ ದಾಂಪತ್ಯ ಜೀವನ ಸುಖವಾಗಿರಲು ಸಹಾಯವಾಗುತ್ತದೆ.
ದಾಂಪತ್ಯ ಯೋಗ ನಿರ್ಧರಿಸುವಾಗ ವಧು-ವರರ ದಿನಾದಿಕೂಟಗಳನ್ನು ಸೂಕ್ತವಾಗಿ ಪರಿಶೀಲಿಸುವುದರೊಂದಿಗೆ, ಜನ್ಮ ಜಾತಕದಲ್ಲಿ ಬರುವ ಕುಜದೋಷ, ವಿಷಕನ್ಯಾಯೋಗವನ್ನು ಪರಿಶೀಲಿಸಿ ವಿವಾಹವನ್ನು ನಿರ್ಧರಿಸಬೇಕಾಗಿರುವುದರಿಂದ ಈ ಕುಜದೋಷ ನೋಡಬೇಕು.

ಯಾವಾಗ ಹೇಗೆ?
ಮೊದಲನೆಯದಾಗಿ ಜನ್ಮ ಜಾತಕದಲ್ಲಿ ಬರುವ ಕುಜದೋಷ ಹಾಗೂ ಎರಡನೆಯದಾಗಿ ವಿವಾಹ ಸಮಯದ ಲಗ್ನಕುಂಡಲಿಯಲ್ಲಿ ದೋಷಯುತ ಮಂಗಳನಿರದಂತೆ ಎಚ್ಚರವಹಿಸಬೇಕು. ಮೂರನೆಯದಾಗಿ ಸ್ತ್ರೀಯ ಪ್ರಥಮ ರಜೋದರ್ಶನ ಕಾಲದಲ್ಲಿ ಸ್ಪಷ್ಟ ಲಗ್ನ ಕುಂಡಲಿಯಲ್ಲಿ ಕುಜದೋಷ ಅತಿ ಮಹತ್ವದ್ದು.
ಕುಜದೋಷ, ಮಂಗಳ ದೋಷ, ಅಂಗಾರಕ ದೋಷ ಎಂದರೆ ಎಲ್ಲವೂ ಒಂದೇ ಅರ್ಥ. ಕುಜನು ಲಗ್ನ ದ್ವಿತೀಯ, ಚತುರ್ಥ, ಸಪ್ತಮ, ಅಷ್ಟಮ ಮತ್ತು ವ್ಯಯ ಅಂದರೆ ಕುಜನ 1,2,4,5,7,8,12ನೇ ಭಾವಗಳಲ್ಲಿ ಸ್ಥಿತನಾಗಿದ್ದರೆ ಹಾಗೂ ಈ ದೋಷವನ್ನು ಲಗ್ನದಿಂದ, ಚಂದ್ರನಿಂದ ಹಾಗೂ ಶುಕ್ರನಿಂದ ಸಹ ನೋಡಲಾಗುತ್ತದೆ. ಲಗ್ನವು ನಿರ್ದಿಷ್ಟ ಸಮಯದ, ವಿಶೇಷ ನಿರ್ದಿಷ್ಟ ಬಿಂದುವಾಗಿರುವುದರಿಂದ ಲಗ್ನದಿಂದ ನೋಡಬೇಕು. ಚಂದ್ರನು ಮನೋಕಾರಕನಾದ್ದರಿಂದ ಮತ್ತು ಲಗ್ನದ ನಂತರ ಇದನ್ನು ವಿಚಾರಿಸುವುದರಿಂದ ಚಂದ್ರನಿಂದ ನೋಡಲಾಗುತ್ತದೆ ಮತ್ತು ಶುಕ್ರನು ವೀರ್ಯ ಮತ್ತು ಕಳತ್ರ ಕಾರಕನಾದ್ದರಿಂದ ಆತನಿಂದ ಕುಜದೋಷ ಅವಲೋಕಿಸುವುದು ಯುಕ್ತಿಕರ.
ಆದರೆ, ಲಗ್ನಕ್ಕೆ ವಿಶೇಷ ಬಲವಿರುವುದರಿಂದ ಮಂಗಳ ದೋಷವನ್ನು ಲಗ್ನದಿಂದ ನೋಡುವುದು ಹೆಚ್ಚು ಫಲದಾಯಕ.

ಸೂಕ್ತ ಸಮಯ
ಈ ಕುಜದೋಷ ಉಂಟಾಗುವುದಕ್ಕೂ ಸಮಯವುಂಟು. ಕುಜ ಬಲಿಷ್ಠನಿದ್ದರೆ ಅಥವಾ ಮಾರಕನಾಗಿದ್ದರೆ 28ನೇ ವಯಸ್ಸಿನಿಂದ 32ನೇ ವಯೋಧರ್ವುದವರೆಗೆ ತನ್ನ ಇಷ್ಟ- ಅನಿಷ್ಟಾದಿ ಫಲಗಳನ್ನು ಕೊಡುವನು. ಅಂದಿನ ಗೋಚಾರ ಸ್ಥಾನ ಮತ್ತು ಅಷ್ಟಕವರ್ಗ ಬಿಂದುಗಳನ್ನು ಗಮನಿಸಬೇಕು. ಇದರೊಂದಿಗೆ ದಶಾಕಾಲ ಬಹಳ ಮಹತ್ವದಾಗಿದೆ. ಈ ಅನಿಷ್ಟ ಫಲಗಳು ದಶಾಕಾಲದಲ್ಲೇ ಹೆಚ್ಚಾಗಿ ನೀಡುತ್ತಾನೆ. ಒಬ್ಬೊಬ್ಬರ ಜಾತಕದಲ್ಲಿ ಕುಜದಶಾ ಬರದೇ ಹೋಗಬಹುದುದು. ಆಗ ಕುಜನ ಅನಿಷ್ಟ ಫಲಗಳು ಕಡಿಮೆಯಾಗುತ್ತದೆ.
ವಿವಾಹ ಸಮಯದಲ್ಲಿ ವಧು- ವರರ ಸಾಲಾವಳಿಗೆ ತೆಗೆದುಕೊಂಡಾಗ ಗಂಡಿನ ಜಾತಕದಲ್ಲಿ (ವರ) ಕುಜನ 2,5,7ನೇ ಭಾವಗಳಲ್ಲಿ ಕುಜನಿದ್ದರೆ ಬಲಿಷ್ಠ ಕುಜದೋಷ. ಗಂಡಿನ ಜಾತಕದಲ್ಲಿ ಹೆಚ್ಚು ಕುಜದೋಷವಿದ್ದು, ಹೆಣ್ಣಿನ ಜಾತಕದಲ್ಲಿ ಕಡಿಮೆ ಕುಜದೋಷವಿದ್ದರೆ ವಿವಾಹ ಮಾಡಬಹುದು. ಆದರೆ, ಗಂಡಿನ ಜಾತಕದಲ್ಲಿ ಕಡಿಮೆ ಕುಜದೋಷವಿದ್ದು, ಹೆಣ್ಣಿನ ಜಾತಕದಲ್ಲಿ ಹೆಚ್ಚಿನ ಕುಜದೋಷವಿದ್ದರೆ ವಿವಾಹ ಮಾಡಬಾರದು.

ಕುಜದೋಷ ಯಾವಾಗ ಇಲ್ಲ?

  •     ಕಟಕ ಮತ್ತು ಸಿಂಹ ಲಗ್ನದವರಿಗೆ ಕುಜದೋಷವಿಲ್ಲ. ಅಶ್ವಿನಿ, ಮೃಗಶಿರ, ಪುನರ್ವಸು, ಪುಷ್ಯ, ಆಶ್ಲೇಷಾ, ಸ್ವಾತಿ, ಅನುರಾಧ, ಪೂರ್ವಷಾಢಾ, ಉತ್ತರಾಷಾಢಾ, ಶ್ರವಣ, ಉತ್ತರಾಭಾದ್ರ, ರೇವತಿ ಈ ನಕ್ಷತ್ರಗಳಲ್ಲಿ ಜನಿಸಿದವರಿಗೆ ಕುಜದೋಷವಿಲ್ಲ.
  •     ವಧು-ವರರಿಬ್ಬರ ಜಾತಕದಲ್ಲಿ ಕುಜದೋಷವಿದ್ದರೆ ಕುಜದೋಷ ಪರಿಹಾರವಾಗುತ್ತದೆ. ಶನಿ 4,6,8,12ನೇ ಭಾವಗಳಲ್ಲಿ ಸ್ಥಿತನಾಗಿದ್ದರೆ ಕುಜ ದೋಷ ಬರುವುದಿಲ್ಲ.
  •     ಪಂಚಮಹಾಪುರುಷ ಯೋಗದಲ್ಲಿ ರುಚಿಕಯೋಗವಿದ್ದರೆ ಕುಜದೋಷವಿಲ್ಲ.
  •     ರವಿ, ಚಂದ್ರ, ಕುಜ ಉಚ್ಚರಾಶಿಗಳಲ್ಲಿದ್ದರೆ ಹಾಗೂ ಕುಜನು ಶನಿರಾಹು, ರವಿಯ ಯುತಿಯಲ್ಲಿದ್ದರೂ ಕುಜದೋಷವಿಲ್ಲ.
- ಎನ್. ಅಂಜನ್ ಕುಮಾರ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಚಿವ ಸಂಪುಟ ವಿಸ್ತರಣೆ ಕಸರತ್ತು: ಜೂನ್ 27ಕ್ಕೆ ದೆಹಲಿಗೆ CM ಡಿಕೆಶಿ; ಕೇರಳ ರೆಸಾರ್ಟ್‌ನಲ್ಲಿ ಸಿದ್ದು ‘ಕ್ಯಾಂಪ್’, ಹೆಚ್ಚಿದ ಕುತೂಹಲ

ಕಬ್ಬನ್ ಪಾರ್ಕ್ Namma Metro ತಾಂತ್ರಿಕ ದೋಷ ಸರಿಪಡಿಸಿದ BMRCL; ನೇರಳೆ ಮಾರ್ಗದಲ್ಲಿ ಸಂಚಾರ ಪುನರಾರಂಭ

ಕಬ್ಬನ್‌ ಪಾರ್ಕ್‌ ನಿಲ್ದಾಣದಲ್ಲಿ ಕೆಟ್ಟುನಿಂತ ಮೆಟ್ರೋ ರೈಲು; ಇಂದಿರಾನಗರ - ಮೆಜೆಸ್ಟಿಕ್ ನಡುವೆ ಸಂಚಾರ ಸ್ಥಗಿತ!

ಅಮೆರಿಕ- ಇರಾನ್ ಶಾಂತಿ ಒಪ್ಪಂದ: ಜೂನ್ 17 ರಿಂದ ಹಾರ್ಮುಜ್ ಜಲಸಂಧಿ ದಾಟಿದ ಭಾರತದ 11 ಹಡಗುಗಳು! ಇನ್ನೂ ಎಷ್ಟಿವೆ ಗೊತ್ತಾ?

ಬೆಂಗಳೂರು ಮೂಲದ CRED ನಲ್ಲಿ Meta ಹೂಡಿಕೆ: ವಾಟ್ಸಾಪ್ ನ ಜಾಗತಿಕ ಮುಖ್ಯಸ್ಥರಾಗಿ ಶಾ ನೇಮಕಕ್ಕೆ ಕಾರಣಗಳೇನು?PhonePe, GooglePayಗೆ ಬೀಳುತ್ತಾ ಹೊಡೆತ?