ಭಕ್ತಿ-ಜ್ಯೋತಿಷ್ಯ

ವಾಮಾಚಾರ ಸಮಾಚಾರ!

ಪ್ರಾಮಾಣಿಕವಾಗಿ ತನ್ನ ವೃತ್ತಿ ಅಥವಾ ವ್ಯಾಪಾರ ಮಾಡುತ್ತಾ ಜೀವನದಲ್ಲಿ ಒಂದೊಂದೇ ಮೆಟ್ಟಿಲು ಹತ್ತಿ ಮೇಲೆ ಬರುತ್ತಾ ಯಶಸ್ಸು ಕಂಡು ಜೀವನದಲ್ಲಿ ಇನ್ನೇನು ಸುಖವನ್ನು ಕಾಣಬೇಕು, ಹಣ ಸಂಪಾದಿಸಬೇಕು ಅಥವಾ ಕೀರ್ತಿಯನ್ನು ಪಡೆಯಬೇಕು ಎನ್ನುವಾಗ ಮನುಷ್ಯನಿಗೆ ಬಡಿದೆಬ್ಬಿಸಿ ನೆಲಕ್ಕುರುಳಿಸುವ ಅಪಾಯವೇ ವಾಮಾಚಾರ.
ಹೆಸರೇ ಸೂಚಿಸುವಂತೆ ಇದು ವಾಮಮಾರ್ಗ, ನಮ್ಮ ಮುಂದೆ ಬಂದು ನ್ಯಾಯ ಮಾರ್ಗದಲ್ಲಿ ನಮ್ಮನ್ನೆದುರಿಸಿ ಸಾಧಿಸಲಾಗದವರು ನಮಗೆ ತಿಳಿಯದಂತೆ ಕೆಟ್ಟ ಹಾಗೂ ದುಷ್ಟ ಶಕ್ತಿಗಳನ್ನು ನಮ್ಮ ಮೇಲೆ ಪ್ರಯೋಗಿಸಿ ನಮ್ಮ ಪತನಕ್ಕಾಗಿ ಕಾದು ಕೂರುತ್ತಾರೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಈ ತರಹದ ವಾಮಾಚಾರವನ್ನು ನಾವು ನಂಬದೇ ಇರುವುದು ಹಾಗೂ ಈ ವಿಚಾರದಲ್ಲಿ ನಾವು ತೋರಿಸುವ ಅತೀ ಹುಂಬ ಧೈರ್ಯವೇ ಅವರ ಪಾಲಿಗೆ ವರವಾಗಿ ವಾಮಾಚಾರ ಮಾಡುವವರಿಗೆ ಕಾರ್ಯ ಸುಲಭ ಸಾಧ್ಯವಾಗುತ್ತದೆ. ದೇವರನ್ನು ನಂಬುವ ನಾವು ಕೃತ್ರಿಯ ಮಾಟ ಮಂತ್ರಗಳನ್ನು ನಂಬುವುದಿಲ್ಲ ಎಂದರೆ ನಾವು ಬೆಳಕನ್ನು ಮಾತ್ರ ನಂಬುತ್ತೇವೆ, ಕತ್ತಲನ್ನು ನಂಬುವುದಿಲ್ಲ.  ಕತ್ತಲ ಅಸ್ತಿತ್ವ ಸುಳ್ಳು ಎಂಬಷ್ಟೇ ಹಾಸ್ಯಾಸ್ಪದವಾಗುತ್ತದೆ.
ಈ ವಾಮಾಚಾರದಲ್ಲಿ  ಬಹಳ ವಿಧಗಳು ಇದ್ದರೂ ಪ್ರಮುಖವಾಗಿ ವಾಮಾಚಾರದ ಎರಡು ವಿಭಾಗಗಳನ್ನು ಶಾಸ್ತ್ರ ಹೇಳುತ್ತದೆ. ಒಂದು ಕ್ಷುದ್ರಾಭಿಚಾರ, ಇನ್ನೊಂದು ಮಹಾಭಿಚಾರ. ಪ್ರಶ್ನಮಾರ್ಗಂ ಎಂಬ ಪ್ರಶ್ನಶಾಸ್ತ್ರ ಗ್ರಂಥದಲ್ಲಿ ಇವುಗಳ ಬಗ್ಗೆ ಮಾಹಿತಿ ಸಿಗುತ್ತದೆ.
ವಾಮಾಚಾರ ಪ್ರಯೋಗ ಆಗಿರುವ ಬಗ್ಗೆ ಅದರ ಲಕ್ಷಣಗಳಿಂದಲೇ ಸುಲಭವಾಗಿ ತಿಳಿಯಬಹುದು. ಊಟ ಮಾಡುವಾಗ ಅಡುಗೆಯಲ್ಲಿ ಕೂದಲು ಸಿಗುವುದು, ಮನೆಯಲ್ಲಿ ಚಿಕ್ಕಪುಟ್ಟ ವಿಚಾರಗಳಿಗೂ ದೊಡ್ಡ ಜಗಳವಾಗುವುದು, ವ್ಯಾಪಾರ- ಉದ್ಯೋಗದಲ್ಲಿ ತೊಂದರೆ ಆಗುವುದು, ಎಷ್ಟೇ ಹಣ ಸಂಪಾದಿಸಿದರೂ ಅದನ್ನು ಉಳಿಸಿಲಿಕ್ಕಾಗದೇ ಕಷ್ಟಪಡುವುದು, ನಿದ್ರಾಹೀನತೆ, ಕೆಟ್ಟ ಕನಸು ಬೀಳುವುದು, ಅನಾರೋಗ್ಯ ಇದ್ದರೂ, ವೈದ್ಯರ ಬಳಿ ಹೋದಾಗ ಅವರು ಪರೀಕ್ಷಿಸಿ ಏನೂ ಆಗಿಲ್ಲ ಎಂದು ಹೇಳುವುದು ಹೀಗೆ ಹತ್ತು ಹಲವು.
ಇಲ್ಲಿದೆ ಪರಿಹಾರ
ಇನ್ನು ಪರಿಹಾರ ವಿಚಾರಕ್ಕೆ ಬಂದಾಗ ನಮಗೆ ಸಹಾಯಕ್ಕೆ ಬರುವುದೇ ಪ್ರಶ್ನಶಾಸ್ತ್ರ. ಜಾತಕದಲ್ಲಿ ವಾಮಾಚಾರ ಪ್ರಯೋಗ ಆಗಿರುವ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲಾಗದು. ಅಂಥ ಸಮಯದಲ್ಲಿ ಪ್ರಶ್ನಶಾಸ್ತ್ರ ಜ್ಯೋತಿಷಿಗಳ ಬಳಿ ಹೋದಾಗ ಕವಡೆ ಅಭಿಮಂತ್ರಿಸಿ ಭಚಕ್ರವಾಗಿ ವಿಭಾಗಿಸಿ ಆರೂಢಲಗ್ನ ಹಾಗೂ ತತ್ಕಾಲ ಲಗ್ನದ ಆಧಾರದ ಮೇಲೆ ವ್ಯಕ್ತಿಗೆ ವಾಮಾಚಾರ ಆಗಿದೆಯೇ ಇಲ್ಲವೇ ಅಥವಾ ಒಂದು ಪಕ್ಷ ಆಗಿದ್ದಲ್ಲಿ ಯಾವ ರೀತಿಯಲ್ಲಿ ಪರಿಹಾರ ಮಾಡಬೇಕು ಎಂದು ತಿಳಿಯಬಹುದು.
ಏನೇ ಆಗಲೀ ವಾಮಾಚಾರ ಆಗಿರುವ ಸಂಶಯ ಬಂದಲ್ಲಿ ಮೊದಲು ನಾವು ನಮ್ಮನ್ನು ಹಾಗೂ ನಮ್ಮ ಮನೆ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಗೋ ಮೂತ್ರವನ್ನು (ನಾಟಿ ಹಸುವಿನ ಗಂಜಲ) ತಂದು ದರ್ಬೆಯಲ್ಲಿ ಮನೆಯನ್ನೆಲ್ಲ ಪ್ರೋಕ್ಷಣೆ ಮಾಡಬೇಕು.
'ಟೈಗರ್ ಐ' ಎಂಬ ವಿಶೇಷ ಕಲ್ಲಿದೆ. ಅದನ್ನು ಬೆಳ್ಳಿಯಲ್ಲಿ ಜಪಮಾಲೆಯಂತೆ ಕಟ್ಟಿಸಿಕೊಂಡು ಈಶ್ವರನ ದೇಗುಲದಲ್ಲಿ  ಲಿಂಗಕ್ಕೆ ಹಾಕಿ ರುದ್ರಾಭಿಷೇಕ ಮಾಡಿಸಿ ನಂತರ ಧರಿಸಬೇಕು. ತಾತ್ಕಾಲಿಕವಾಗಿ ಮಾಂಸಾಹಾರವನ್ನು ಸಂಪೂರ್ಣ ತ್ಯಜಿಸುವುದು, ಪುರಾಣ ಪ್ರಸಿದ್ಧ ಕ್ಷೇತ್ರಗಳಲ್ಲಿ ನದಿ ಸ್ನಾನಮಾಡಿ ನಂತರ ದೇವತಾ ದರ್ಶನ ಮಾಡುವುದು ಉತ್ತಮ.
ಬಹುಸಮಯದ ತನಕ ರಕ್ಷಣೆ ಕೊಡುವ ಅದ್ಭುತವಾದ ವೇದೋಕ್ತ ಪರಿಹಾರ ಎಂದರೆ ಕೃತ್ರಿಮ ಆಕರ್ಷಣ ಉಚ್ಚಾಟನಾ ಸಹಿತ ರಕ್ಷಾ ಸುದರ್ಶನ ಮಾಡಿಸಿ ಸಮಸ್ಯೆಗೆ ಪರಿಹಾರ ಮಾಡಿಕೊಳ್ಳುವುದು. ಮಾಹಿತಿಗೆ ಮೊ. 9743331250 ಸಂಪರ್ಕಿಸಿ.


-ವಿಠ್ಠಲ್ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!