ಭಕ್ತಿ-ಜ್ಯೋತಿಷ್ಯ

ಗುರುವಿನ ಅಗತ್ಯ

ಕಳೆದವಾರ ಗುರುವಿನ ಇರುವಿಕೆಯ ಅಗತ್ಯದ ಬಗ್ಗೆ ತಿಳಿಸುತ್ತಾ ಹೇಳಿದ್ದೆ. ಗುರು ಅಂದ್ರೆ ಅದು ಹೊರಕಾಣುವ ರೂಪವಷ್ಟೇ ಅಲ್ಲ ಅಂತ. ಇನ್ನೊಂದಷ್ಟು ಪುರಾಣ ಹಾಗು ಇತಿಹಾಸದ ದೃಷ್ಟಾಂತಗಳನ್ನು ಪ್ರಸ್ತಾಪಿಸುತ್ತಾ ಗುರುವಿನ ಮಹತ್ವದ ಬಗೆಗೆ ತಿಳಿಸಲು ಇಚ್ಛಿಸುತ್ತೇನೆ.
ಒಮ್ಮೆ ಬ್ರಹ್ಮರ್ಷಿ ವಿಶ್ವಾಮಿತ್ರನ ಕತೆಯನ್ನು ನೆನಪಿಸಿಕೊಳ್ಳಿ. ವಿಶ್ವಾಮಿತ್ರ ತ್ರಿಶಂಕು ಸ್ವರ್ಗ ಎಂಬ ಪರ್ಯಾಯ ಜಗತ್ತು ನಿರ್ಮಿಸಿದ್ದು ಗೊತ್ತು ತಾನೇ?ಅಂಥಾ ವಿಶ್ವಾಮಿತ್ರನಿಗೂ ಅಗಸ್ತ್ಯಮುನಿ ಎಂಬ ಮಹಾಗುರುವಿದ್ದರು. ಪೂರ್ತಿ  ರಾಮಾಯಣವನ್ನು  ಒಮ್ಮೆ ಗಮನಿಸಿ. ಅಲ್ಲಿಯೂ ಗುರುವಿಗೆ ಅತೀವ ಮಹತ್ವವಿತ್ತು. ರಾವಣನನ್ನು ಯುದ್ಧದಲ್ಲಿ ಸಂಹರಿಸಿದ ಶ್ರೀರಾಮನಿಗೂ  ವಸಿಷ್ಟರೆಂಬ ಗುರು ಇದ್ದರು.
ರಾಮ ಲಕ್ಷ್ಮಣರನ್ನು ಹೆಗಲ ಮೇಲೆ ಹೊತ್ತು ಸಾಗರೋಲ್ಲಂಘನ ಮಾಡಿದ, ಯುದ್ಧದಲ್ಲಿ ಲಕ್ಷ್ಮಣನ ಜೀವ ಉಳಿಸಿಕೊಳ್ಳುವ ಪರಿಸ್ಥಿತಿಯಲ್ಲಿ  ಸಂಜೀವಿನಿ ಬೆಟ್ಟವನ್ನೇ ಹೊತ್ತು ತಂದ ಹನುಮಂತನಿಗೂ ಒಬ್ಬ ಗುರು ಇದ್ದರು. ಸೂರ್ಯದೇವ ಹನುಮಂತನ ಗುರು ಎಂದು ಪುರಾಣ ತಿಳಿಸುತ್ತದೆ.
ಭಗವದ್ಗೀತೆಯನ್ನು ಭೋದಿಸಿ ಅರ್ಜುನನಿಗೆ ಆ ಮೂಲಕ ಇಡೀ  ಜಗತ್ತಿಗೆ ಜ್ಞಾನ ನೀಡಿದ ಶ್ರೀ ಕೃಷ್ಣ ಸರ್ವೋಚ್ಛ ಎನಿಸಿದರೂ ಆತನಿಗೂ ಸಾಂದೀಪನಿ ಎಂಬ ಗುರುಗಳಿದ್ದರು.
ಗುರು ದ್ರೋಣಾಚಾರ್ಯ ಇಲ್ಲದೆ ಅರ್ಜುನ ಬಿಲ್ವಿದ್ವೆಯಲ್ಲಿ ಪಾರಂಗತ ಆಗುತ್ತಿದ್ದನೇ? ಸುರಲೋಕದ ದೇವತೆಗಳಿಗೂ ಬೃಹಸ್ಪತಿ ಎಂಬ ಗುರುವಿದ್ದರು. ರಾಕ್ಷಸರು ಕೂಡಾ ಗುರುಪರಂಪರೆಯನ್ನು ಗೌರವಿಸಿದವರೇ. ಶುಕ್ಲಾಚಾರ್ಯರು ರಾಕ್ಷಸರ ಗುರುವಾಗಿದ್ದರು. ಚಕ್ರವರ್ತಿಗಳು, ಋಷಿಮುನಿಗಳು, ರಾಮ, ಕೃಷ್ಣ , ರಕ್ಕಸರು ಪ್ರತಿಯೊಬ್ಬರ ಜೀವನದಲ್ಲೂ ಗುರು ಪಾತ್ರ ಹಿರಿದು. ಗುರುವಿಲ್ಲದ ಜೀವನ ಬರಿದು ಎಂಬುದಕ್ಕೆ ಇವೆಲ್ಲ ನಿದರ್ಶನಗಳು.
ಗುರು ತನ್ನ ಶಿಷ್ಯನನ್ನು ಅಕ್ಷರಶಃ ಒಂದು ಚೇತನದತ್ತ ಕರೆದೊಯ್ಯುತ್ತಾನೆ. ಯಾರನ್ನಾದರೂ ಗುರುವನ್ನಾಗಿ ಸ್ವೀಕರಿಸುವ ಮುನ್ನ, ಹಾಗೆಂದು ಕರೆಯುವ ಮುನ್ನ ಅತಿ ಎಚ್ಚರಿಕೆ ವಹಿಸಬೇಕು. ನೀವು ಯಾರನ್ನು ಅನುಕರಿಸುತ್ತೀರೋ ಅವರಂತೆಯೇ ಆಗುತ್ತೀರಿ. ಅದು ಅತಿಸಹಜ.
ಗುರುವಿನ ಕೆಲವು ಶಕ್ತಿಶಾಲಿ ಲಕ್ಷಣಗಳು ಹೇಗಿರುತ್ತವೆ. ಆತ  ನಿಮ್ಮಿಂದ ಪ್ರತಿಫಲ ಅಪೇಕ್ಷಿಸುವುದಿಲ್ಲ. ಆತನ ಭವಿಷ್ಯವಾಣಿಯಂತೆಯೇ ಘಟನೆಗಳು ಜರುಗುತ್ತಿರುತ್ತವೆ. ಆತನು ಐದು ಯಮಗಳಲ್ಲಿ ಸ್ಥಿರವಾಗಿರುತ್ತಾನೆ. ಗುರುವೊಂದಿಗೆ ನೀವಿದ್ದಾಗ ನಿಮ್ಮಲ್ಲಿ ಒಂದು ಪ್ರಭಾವಳಿ ಕಾಣುತ್ತಿರುತ್ತದೆ. ನಿಮ್ಮ ರೋಗರುಜಿನಗಳು ಮಾಯವಾಗುತ್ತವೆ. ನಿಮ್ಮ ಯೋಚನಾಶಕ್ತಿ ಅಗಾಧವಾಗುತ್ತದೆ. ನಿಮಗೆ ಇಹಪರಲೋಕಗಳ ಎಲ್ಲ ಆಗುಹೋಗುಗಳು ಅರಿವಿಗೆ ಬರತೊಡಗುತ್ತದೆ. ಅದಕ್ಕೇ ಹೇಳಿದ್ದು ಗುರು ಎಂಬುದು ಬಾಹ್ಯರೂಪದ ಮೂಲಕ ದಕ್ಕುವುದಲ್ಲ. ಅದು ಜ್ಞಾನದರೂಪದಲ್ಲಿ ಶಿಷ್ಯನಿಗೆ ಹರಿಯವ ದಟ್ಟ ಬೆಳಕು. ಆದರೆ ಗುರು ಸಿಗುವುದು ಕೂಡ ನಿಮ್ಮ ಪೂರ್ವಜನ್ಮದ ಕರ್ಮ ಮತ್ತು ಶ್ರೇಣಿ ಅನುಸಾರವಾಗಿಯೇ.  ನಿಮ್ಮ  ಆಸೆ ಅಗತ್ಯಗಳಿಗೆ ಪೂರಕವಾಗಿ ನಿಮ್ಮ ಯೋಗ್ಯತೆಗೆ ಅನುಸಾರವಾಗಿ ನೀವು ಗುರುವನ್ನು ಆಯ್ಕೆ ಮಾಡಿಕೊಳ್ಳಬೇಕಿರುತ್ತದೆ. ಆದರೆ ಅಂತ ಗುರು ದಕ್ಕುವುದು ನಿಮ್ಮ ಪುಣ್ಯಕ್ಕೆ ಬಿಟ್ಟಿದ್ದು.


- ಯೋಗಿ ಅಶ್ವಿನಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!