ಭಕ್ತಿ-ಭವಿಷ್ಯ

೩೦೦ ವರ್ಷ ಪೂರೈಸಿದ 'ತಿರುಪತಿ ಲಡ್ಡು'

Guruprasad Narayana

ಹೈದರಾಬಾದ್: 'ತಿರುಪತಿ ಲಡ್ಡು' ಪ್ರಸಾದ ನೆನೆದರೆ ಬಾಯಲ್ಲಿ ನೀರೂರುವುದು ಖಂಡಿತ. ತಿರುಪತಿ ಬೆಟ್ಟದ ವೆಂಕಟೇಶ್ವರ ದೇವಾಲಯದ ಈ ಪ್ರಸಿದ್ಧ ಪವಿತ್ರ ಪ್ರಸಾದಕ್ಕೆ ಈಗ ೩೦೦ ವರ್ಷ. ಈ ಪವಿತ್ರ ಪ್ರಸಾದವನ್ನು ಮೊದಲು ಪ್ರಾರಂಭಸಿದ್ದು ಆಗಸ್ಟ್ ೨ ೧೭೧೫ರಲ್ಲಿ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಸಾದ ಸ್ವೀಕರಿಸದೆ ತಿರುಪತಿ ದೇವಸ್ಥಾನ ತೀರ್ಥಯತ್ರೆ ಸಂಪೂರ್ಣಗೊಳ್ಳುವುದಿಲ್ಲ. ತುಪ್ಪ ಮತ್ತು ಏಲಕ್ಕಿ ಆಸ್ವಾದ ಹೊಂದಿರುವ ಈ ಲಡ್ಡು ವಿಶ್ವಪ್ರಸಿದ್ಧ.

ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಅಧಿಕಾರಿಗಳ ಪ್ರಕಾರ ೨೦೧೪ರಲ್ಲಿ ೯೦ ದಶಲಕ್ಷ ಲಡ್ಡುಗಳನ್ನು ಭಕ್ತಾದಿಗಳಿಗೆ ನೀಡಲಾಗಿದೆಯಂತೆ.

೩೦೦ ಗ್ರಾಂ ತೂಕದ ತಿರುಪತಿ ಲಡ್ಡು ೨೫ ರೂ. ಲಡ್ಡು ತಯಾರಿಸಲು ಬಳಸುವ ಗುಣಮಟ್ಟದ ಪದಾರ್ಥಗಳಿಗೆ ಹೆಚ್ಚಿನ ಬೆಲೆಯಿದ್ದು ಸಬ್ಸಿಡಿ ಬೆಲೆಯಲ್ಲಿ ಪ್ರಸಾದ ಮಾರಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು. ಅಲ್ಲದೆ ತಿರುಪತಿ ದೇವರ ದರ್ಶನಕ್ಕೆ ಬರುವ ಎಲ್ಲ ಭಕ್ತಾದಿಗಳಿಗೂ ೧೦ ರುಪಾಯಿ ಬೆಲೆಗೆ ಎರಡು ಲಡ್ಡುಗಳನ್ನು ನೀಡಲಾಗುತ್ತದೆ.

ಪ್ರಸಾದದ ಮಾರಾಟ ದೇವಸ್ಥಾನಕ್ಕೆ ಒಳ್ಳೆಯ ಆದಾಯ ತಂದುಕೊಡುತ್ತಿದೆಯಂತೆ. ೨೦೧೪-೨೦೧೫ರಲ್ಲಿ ಈ ಪ್ರಸಾದ ಬಜೆಟ್ ೨೪೦೧ಕೋಟಿ ರೂ.

ಬ್ರಹ್ಮೋತ್ಸವದ ಸಮಯದಲ್ಲಿ ಈ ಲಡ್ಡಿಗೆ ಅಪಾರ ಬೇಡಿಕೆಯಿರುತ್ತದಂತೆ. ೨೭೦ ಜನ ಬಾಣಸಿಗರು ಸೇರಿದಂತೆ ೬೨೦ ಜನ ಲಡ್ಡು ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಾರೆ.

ಅಲ್ಲದೆ ೨೦೧೪ ರಲ್ಲಿ ದೇವಸ್ಥಾನವನ್ನು ೨೨.೬ ದಶಲಕ್ಷ ಭಕ್ತಾದಿಗಳು ಭೇಟಿ ನೀಡಿದ್ದು ಹುಂಡಿಗೆ ೮೩೧ ಕೋಟಿ ರೂ ಕಾಣಿಕೆ ಸಲ್ಲಿಸಿದ್ದಾರಂತೆ. ಅಲ್ಲದೆ ೨೦೧೪-೨೦೧೫ ರಲ್ಲಿ ಬ್ಯಾಂಕುಗಳಿಂದ ಬಡ್ಡಿಯ ರೂಪದಲ್ಲೇ ದೇವಸ್ಥಾನ ೬೫೫ ಕೋಟಿ ರೂ ಗಳಿಸಿದೆ. ದೇವಸ್ಥಾನ, ಬ್ಯಾಂಕ್ ಖಾತೆಗಳಲ್ಲಿ ೧೨ ಸಾವಿರ ಕೋಟಿ ರೂ ಮತ್ತು ೩೨ ಟನ್ ಚಿನ್ನಾಭರಣಗಳನ್ನು ಇಟ್ಟಿದೆ.

SCROLL FOR NEXT