ಹೋಳಿ ಹಬ್ಬದ ಶುಭಾಶಯಗಳು 
ಭಕ್ತಿ-ಭವಿಷ್ಯ

ಹೋಳಿ ಹಬ್ಬದಂದು ಮೊದಲು ಬೀಳುವ ಬಣ್ಣ ನಿಮ್ಮ ಭವಿಷ್ಯ ಹೇಳುತ್ತೆ!...

ಹೋಳಿ ಹಬ್ಬ ಭಾರತೀಯ ಪರಂಪರೆಯಿಂದಲೂ ನಡೆದುಕೊಂಡು ಬರುತ್ತಿರುವಂತಹ ಹಬ್ಬ. ಈ ಹಬ್ಬವನ್ನು ಎಲ್ಲಾ ಹಬ್ಬದ ಹಾಗೆ ಪೂಜೆ, ಪುನಸ್ಕಾರ, ಉಪವಾಸದ ಹಾಗೆ ಆಚರಣೆ ಮಾಡುವುದಿಲ್ಲ. ಕುಟುಂಬಸ್ಥರು, ಸ್ನೇಹಿತರು, ಸಂಬಂಧಿಕರು ಎಲ್ಲರೂ ಸೇರಿ ಯಾವುದೇ ಭೇದಭಾವ ಇಲ್ಲದಂತೆ ಒಂದೆಡೆ ಸೇರಿ ಆಚರಣೆ ಮಾಡುವಂತಹ ಹಬ್ಬ...

ಹೋಳಿ ಹಬ್ಬ ಭಾರತೀಯ ಪರಂಪರೆಯಿಂದಲೂ ನಡೆದುಕೊಂಡು ಬರುತ್ತಿರುವಂತಹ ಹಬ್ಬ. ಈ ಹಬ್ಬವನ್ನು ಎಲ್ಲಾ ಹಬ್ಬದ ಹಾಗೆ ಪೂಜೆ, ಪುನಸ್ಕಾರ, ಉಪವಾಸದ ಹಾಗೆ ಆಚರಣೆ ಮಾಡುವುದಿಲ್ಲ. ಕುಟುಂಬಸ್ಥರು, ಸ್ನೇಹಿತರು, ಸಂಬಂಧಿಕರು ಎಲ್ಲರೂ ಸೇರಿ ಯಾವುದೇ ಭೇದಭಾವ ಇಲ್ಲದಂತೆ ಒಂದೆಡೆ ಸೇರಿ ಆಚರಣೆ ಮಾಡುವಂತಹ ಹಬ್ಬ. ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಮಾತ್ರ ಆಚರಣೆಯಲ್ಲಿದ್ದ ಹೋಳಿ ಹಬ್ಬವನ್ನು ಈಗ ಭಾರತದಾದ್ಯಂತ ಆಚರಿಸಲಾಗುತ್ತಿದೆ.

ಯುವಕ ಯುವತಿಯರಿಗೆಲ್ಲ ಮೋಜು ತರುವ ಹರ್ಷದ ಹಬ್ಬ ಇದಾಗಿರುವುದರಿಂದ ಸುಲಭವಾಗಿ ಹೋಳಿ ಹಬ್ಬವನ್ನು ಆಯಾ ಪ್ರಾಂತ್ಯ ಹಾಗೂ ವೈಶಿಷ್ಯ್ಯಕ್ಕೆ ತಕ್ಕಂತೆ ಆಚರಿಸಲಾಗುತ್ತಿದೆ.

  • ಈ ದಿನದಂದು ಅಕ್ಕಿಹಿಟ್ಟು ಮತ್ತು ಅರಿಶಿನ ಬೆರೆಸಿದ ಗುಲಾಲು ತಯಾರಿಸಿ, ಬಿದಿರಿನಿಂದ ಪಿಚಕಾರಿ ತಯಾರಿಸಿ ಬಣ್ಣದಾಟ ಆಡುವರು.
  • ರಂಗಿನಾಟದ ನಂತರ ಅಭ್ಯಂಜನ  ಸ್ನಾನ ಮಾಡಿ ದೇವರಲ್ಲಿ ಪ್ರಾರ್ಥಿಸಿ ಮನೆಗಳಲ್ಲಿ ವಿಶೇಷ ಅಡಿಗೆಗಳನ್ನು ತಯಾರಿಸುವರು.
  • ಉತ್ತರ ಪ್ರದೇಶದಲ್ಲಿ ಜೋಳದ ಹಿಟ್ಟಿನ ಗುಜಿಯಾ ಹಾಗೂ ಪಾಪ್ಡಿ  ಜನಪ್ರಿಯವಾಗಿದೆ.
  • ದೆಹಲಿಯಲ್ಲಿ ಈ ದಿನದಂದು ಹತ್ತು ತಲೆಯ ರಾವಣನ ಮೂರ್ತಿಯನ್ನು ಬಿರಿನಿಂದ ತಯಾರಿಸಿ, ಅದಕ್ಕೆ ಹಳೇ ಬಟ್ಟೆಗಳನ್ನೆಲ್ಲ ಧರಿಸಿ ಗಣ್ಯರನ್ನೆಲ್ಲ ಕರೆದು, ಅವರ  ಸಮ್ಮುಖದಲ್ಲಿ ಲಂಕೇಶನನ್ನು ಸುಡುವುದು ವಾಡಿಕೆ.
  • ಗ್ರಾಮೀಣ ಪ್ರದೇಶಗಳಲ್ಲಿ ಆ ದಿನ ಊರಿನವರ ಮನೆಯಲ್ಲಿ ಸಿಗುವ ಬೇಡದ ವಸ್ತುಗಳನ್ನೆಲ್ಲ ತಂದು ಒಂದೆಡೆ ಗುಡ್ಡೆ ಮಾಡಿ, ರಾತ್ರಿ ಹುಡುಗನೊಬ್ಬನಿಗೆ ಶಿಖಂಡಿಯ ವೇಷ  ಹಾಕಿಸಿ, ಅವನಿಂದ ಊರಿನ ಐದು ಮನೆಗಳಲ್ಲಿ ಭಿಕ್ಷೆ ಬೇಡಿಸಿ ಕರೆತಂದು ಅವನಿಂದ ಆ ಬೇಡದ ವಸ್ತುಗಳ ಗುಡ್ಡೆಗೆ ಬೆಂಕಿ ಇಡಿಸುತ್ತಾರೆ. ಅದೇ ಅವರ ಕಾಮದಹನದ ಹಬ್ಬ.

1.ನೀಲಿ:
2. ಹಸಿರು:
3. ನೇರಳೆ:
4.ಹಳದಿ:
5. ಕೆಂಪು:
6. ಕಿತ್ತಳೆ:
ದುಷ್ಟತನವನ್ನು ಭಸ್ಮಮಾಡುವ ಈ ಹೋಳಿಹಬ್ಬದ ದಿನದಂದು ಕೆಟ್ಟ ಆಲೋಚನೆಗಳನ್ನು ಮನಸ್ಸಿನಿಂದ ಇಂದೇ ಸುಟ್ಟು ಹಾಕಿ, ಹೊಸ ಆಲೋಚನೆ, ಧನಾತ್ಮಕ ಚಿಂತನೆಗಳೊಂದಿಗೆ ಮುಂದಿನ ನಮ್ಮ ಜೀವನವನ್ನು ಹೊಸತನದೊಂದಿಗೆ ಆರಂಭಿಸೋಣ. ನಾಡಿನ ಎಲ್ಲಾ ಜನತೆಗೂ ಹೋಳಿ ಹಬ್ಬದ ಶುಭಾಶಯ.
-ಮಂಜುಳ.ವಿ.ಎನ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT