ಪರಶುರಾಮ 
ಭಕ್ತಿ-ಜ್ಯೋತಿಷ್ಯ

ಕರಾವಳಿ ಪ್ರದೇಶಕ್ಕೆ ಪರಶುರಾಮ ಸೃಷ್ಟಿ ಎಂದು ಹೆಸರು ಬರಲು ಕಾರಣವೇನು?

ದಕ್ಷಿಣ ಕನ್ನಡ, ಗೋವಾ, ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಕರಾವಳಿ ಪ್ರದೇಶಕ್ಕೆ ಪರಶುರಾಮ ಸೃಷ್ಟಿ ಎಂಬ ಹೆಸರಿದೆ. ಹೆಸರೇ ಸೂಚಿಸುವಂತೆ ಪರಶುರಾಮ ಅದಕ್ಕೆ ಇಂಥಹ ಹೆಸರು ಬರಲು ಕಾರಣ.

ದಕ್ಷಿಣ ಕನ್ನಡ, ಗೋವಾ, ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಕರಾವಳಿ ಪ್ರದೇಶಕ್ಕೆ ಪರಶುರಾಮ ಸೃಷ್ಟಿ ಎಂಬ ಹೆಸರಿದೆ. ಹೆಸರೇ ಸೂಚಿಸುವಂತೆ ಪರಶುರಾಮ ಅದಕ್ಕೆ ಇಂಥಹ ಹೆಸರು ಬರಲು ಕಾರಣ. 
ಪರಶುರಾಮ ಜಮದಗ್ನಿ ಋಷಿಯ ಪುತ್ರ, ಋಷಿಗಳಿಗೆ ಸಾಮಾನ್ಯವಾಗಿ ಕೋಪ ಕಡಿಮೆ ಎಂಬುದು ಪ್ರಾಚೀನ ಕಾಲದಿಂದಲೂ ನಾವೆಲ್ಲರೂ ಕೇಳಿದ್ದೇವೆ. ಆದರೆ ಋಷಿಯಾಗಿದ್ದ ಪರಶುರಾಮ, ಜಮದಗ್ನಿಗೆ ಮಾತ್ರ ಕ್ಷಾತ್ರ ಗುಣಗಳೂ ಇದ್ದವು, ಆದ್ದರಿಂದಲೇ ಅವರಿಗೆ ಕೋಪವೂ ಉಳಿದೆಲ್ಲಾ ಋಷಿಗಳಿಗಿಂತ ತುಸು ಹೆಚ್ಚೇ. ಪರಶುರಾಮ ಭೃಗು ಋಷಿಯ ವಂಶಕ್ಕೆ ಸೇರಿದವನು. ಭೃಗು ಮಹರ್ಷಿಯ ಪುತ್ರ ರಿಚೀಕ  ರಾಜ ಗಾಧಿಯ ಮಗಳು ಸತ್ಯವತಿಯನ್ನು ವಿವಾಹವಾಗಿದ್ದ. ರಾಜ ಗಾಧಿಯನಿಗೆ ಸತ್ಯವತಿಯನ್ನು ಬಿಟ್ಟು ಬೇರೆ ಮಕ್ಕಳಿರುವುದಿಲ್ಲ. ಸತ್ಯವತಿ ಋಷಿ ಋಚೀಕ ನನ್ನು ವಿವಾಹವಾಗಿರುತ್ತಾಳೆ ಆದ್ದರಿಂದ ಗಾಧಿಯ ಹಾಗೂ ಆತನ ಪತ್ನಿ ಮಗನನ್ನು ಪಡೆಯುವುದಕ್ಕೆ ಋಚೀಕನಿಂದ ವರಕ್ಕಾಗಿ ಮಗಳು ಸತ್ಯವತಿ ಮೂಲಕ ಕೇಳುತ್ತಾರೆ. 
ಇದಕ್ಕೆ ಒಪ್ಪಿದ ಋಚೀಕ ಸತ್ಯವತಿ ಹಾಗೂ ಆಕೆಯ ತಾಯಿ ಇಬ್ಬರಿಗೂ ಪುತ್ರ ಸಂತಾನವಾಗುವುದಕ್ಕೆ ವ್ರತಾಚರಣೆ ಕೈಗೊಳ್ಳಲು ಹೇಳುತ್ತಾನೆ. ಇಬ್ಬರಿಗೂ ಬೇರೆ ರೀತಿಯಲ್ಲಿ ವ್ರತಾಚರಣೆ ಮಾಡಲು ಹೇಳಿದ್ದರೂ ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಸತ್ಯವತಿಗೆ ಹೇಳಿದ್ದ ವ್ರತವನ್ನು ಅವಳ ತಾಯಿ ಹಾಗೂ ತಾಯಿಯ ವ್ರತವನ್ನು ಸತ್ಯವತಿ ಆಚರಿಸುತ್ತಾರೆ. ಆದ್ದರಿಂದ ಸತ್ಯವತಿ- ಋಚೀಕ  ಮಗ ಜಮದಗ್ನಿಗೆ  ಕ್ಷಾತ್ರ ಗುಣಗಳಿರುತ್ತದೆ, ಅದೇ ಗುಣಗಳನ್ನು ಜಮದಗ್ನಿಯ ಮಗ ಪರಶುರಾಮನೂ ಪಡೆದಿರುತ್ತಾನೆ, ಆದ್ದರಿಂದಲೇ ತನ್ನ ತಂದೆ ಜಮದಗ್ನಿಯನ್ನು ಕೊಂದ ರಾಜ ಕಾರ್ತಿವೀರ್ಯಾರ್ಜುನನ ಮೇಲೆ ಸೇಡು ತೀರಿಸಿಕೊಳ್ಳಲು ಸಮಸ್ತ ಕ್ಷತ್ರಿಯರನ್ನೇ ನಾಶ ಮಾಡಿ ತನ್ನದೇ ಆದ ಹೊಸ ಭೂ ಪ್ರದೇಶವನ್ನು ಸೃಷ್ಟಿಸುತ್ತಾನೆ. ಈ ಪ್ರದೇಶಕ್ಕೇ ದಕ್ಷಿಣ ಕನ್ನಡ, ಗೋವಾ, ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಕರಾವಳಿ ಪ್ರದೇಶಕ್ಕೆ ಪರಶುರಾಮ ಸೃಷ್ಟಿ ಎಂದು ಹೆಸರು ಬಂದಿದೆ.
ಕಾರ್ತಿವೀರ್ಯಾರ್ಜುನ ಮಹಾ ಕ್ಷತ್ರಿಯ(ಸಹಸ್ರಬಾಹು ಅಂತಲೂ ಕರೆಯುತ್ತಾರೆ). ಒಮ್ಮೆ ಅವನ ಅಗಾಧ ಸೈನ್ಯ ಜಮದಗ್ನಿ ಆಶ್ರಮದ ಕಡೆ ಬಂದಾಗ ಆ ದೊಡ್ಡ ಸೈನ್ಯಕ್ಕೆಲ್ಲ ಈ ಅಶ್ರಮದಲ್ಲಿ ಮೃಷ್ಟಾನ್ನ ಬೋಜನ ಸಿಗುತ್ತೆ.  ಒಬ್ಬ ಋಷಿ ತನ್ನೆಲ್ಲ ದೊಡ್ಡ ಸೈನ್ಯಕ್ಕೆ ಹೇಗೆ ಇಷ್ಟು ಉಪಚಾರ ಮಾಡಿದ ಅಂತ ವಿಚಾರಿಸಿದಾಗ ಕಾರ್ತಿವೀರ್ಯಾರ್ಜುನನಿಗೆ ಆಶ್ರಮದಲ್ಲಿನ ಕಾಮಧೇನು ಇದನ್ನು ಸಾಧ್ಯ ಮಾಡಿತು ಎಂಬುದು ತಿಳಿಯುತ್ತದೆ. ಸರಿ ಈ ಸಹಸ್ರಬಾಹುವಿಗೆ ಕಾಮಧೇನು ಮೇಲೆ ಕಣ್ಣು ಬಿದ್ದು ಅದನ್ನು ತನ್ನ ಆಸ್ತಾನಕ್ಕೆ ಕೊಡಲು ಕೇಳುತ್ತಾನೆ. ಜಮದಗ್ನಿ ವಿರೋಧದ ನಡುವೆಯೂ ಹಲ್ಲೆ ನಡೆಸಿ ಕಾಮಧೇನುವನ್ನು ಕೊಂಡೊಯ್ಯಲು ಪ್ರಯತ್ನಿಸುತ್ತಾನೆ. ಜಮದಗ್ನಿ ಇರುವಲ್ಲಿ ಮಾತ್ರ ಕಾಮಧೇನು ಇರುತ್ತದೆ ಎಂಬ ರಹಸ್ಯ ತಿಳಿದ ಕಾರ್ತಿವೀರ್ಯಾರ್ಜುನ ಜಗದಗ್ನಿಯ ತಲೆ ಕತ್ತರಿಸಿಕೊಂಡು ಹೋಗುತ್ತಾನೆ ಕಮಧೇನು ಕಾರ್ತಿವೀರ್ಯಾರ್ಜುನನನ್ನು ಹಿಂಬಾಲಿಸುತ್ತದೆ.  ಈ ವಿಷಯವನ್ನು ತಿಳಿದ ಪರಶುರಾಮ ಕೊನೆಗೆ ಅವನು ಸಹಸ್ರವೀರ್ಯನನ್ನು ಕೊಲ್ಲುತ್ತಾನೆ. ಅಷ್ಟೇ ಅಲ್ಲ ಆತನಿಗೆ ಇಡೀ ಕ್ಷತ್ರಿಯ ಕುಲದ ಬಗ್ಗೆಯೇ ಆಕ್ರೋಶಗೊಂಡು ಬರುತ್ತೆ. ಇಡೀ ಭೂಮಂಡಲವನ್ನು 24 ಬಾರಿ ಪ್ರದಕ್ಷಿಣೆ ಹಾಕಿ ಎಲ್ಲ ಕ್ಷತ್ರಿಯರನ್ನು ವಧೆ ಮಾಡುತ್ತಾನೆ. ಕೊನೆಗೆ ತನ್ನೆಲ್ಲ ಭೂಮಿಯನ್ನು ದಾನ ಮಾಡುತ್ತಾನೆ. ಕೊನೆಗೆ ತಪಸ್ಸಿಗೆ ನಿಲ್ಲಲು ಹೊರಟಾಗ ತೆನ್ನೆಲ್ಲ ಭೂಮಿಯನ್ನು ದಾನ ಮಾಡಿರುವುದು ಗೊತ್ತಾಗುತ್ತೆ. ಆಗ ತನ್ನದ ನೆಲವನ್ನು ಮಾಡಿಕೊಳ್ಳಲು ತನ್ನ ಪರಶುವನ್ನು ಸಮುದ್ರದೆಡೆಗೆ ಎಸೆಯುತ್ತಾನೆ. ಸಮುದ್ರ ಹಿಂದೆ ಸರಿದು ಜಾಗ ಭೂಪ್ರದೇಶವಾಗುತ್ತದೆ. ಅಲ್ಲಿಯ ಆತ ತಪಸ್ಸಿಗೆ ನಿಲ್ಲುತ್ತಾನೆ ಇದೆ ಕಾರಣಕ್ಕೆ ಕರಾವಳಿಯ ಪ್ರದೇಶವನ್ನು ಪರಶುರಾಮ ಸೃಷ್ಟಿ ಎಂದು ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT